ಮಾರುತಿ ಸಣ್ಣ ಕಾರುಗಳಿಗೆ ಟೊಯೊಟಾ-ದೈಹಟ್ಸು ಟಕ್ಕರ್

By Nagaraja

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಕಳೆದೆರಡು ದಶಕಗಳಲ್ಲಿ ಸಣ್ಣ ಕಾರು ವಿಭಾಗದಲ್ಲಿ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಅಧಿಪತ್ಯ ಸ್ಥಾಪಿಸುತ್ತಲೇ ಬಂದಿದೆ.

ಅಲ್ಲದೆ ಒಟ್ಟು ಮಾರುಕಟ್ಟೆಯ ಶೇಕಡಾ 50ರಷ್ಟು ಮಾರಾಟವನ್ನು ಮಾರುತಿ ಕಸಿದುಕೊಂಡಿದೆ. ಹಾಗಿರುವಾಗ ಮಾರುತಿ ಸುಜುಕಿ ಸಣ್ಣ ಕಾರುಗಳಿಗೆ ಪೈಪೋಟಿ ಒಡ್ಡಲು ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ.


ಅದು ಬೇರೆ ಯಾವ ಸಂಸ್ಥೆಯು ಅಲ್ಲ. ಇನ್ನೋವಾ, ಎಟಿಯೋಸ್‌ಗಳಂತಹ ಮಾದರಿಗಳ ಮೂಲಕ ದೇಶದಲ್ಲಿ ಹೆಚ್ಚಿನ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಜಪಾನ್ ಮೂಲದವರೇ ಆಗಿರುವ ಟೊಯೊಟಾ ಸಂಸ್ಥೆಯು, ದೈಹಟ್ಸು ಜೊತೆ ಸೇರಿಕೊಂಡು ಸಣ್ಣ ಕಾರು ವಿಭಾಗದಲ್ಲಿ ಹೊಸ ಪೈಪೋಟಿಗೆ ವೇದಿಕೆ ಸಿದ್ಧಗೊಳಿಸುತ್ತಿದೆ.

ದೈಹಟ್ಸು ಸಣ್ಣ ಕಾರುಗಳಿಗೆ ಟೊಯೊಟಾ ಲಾಂಛನ ನೀಡುವ ಮೂಲಕ ವಿಸ್ತಾರವಾಗಿ ಹರಡಿರುವ ದೇಶದ ವಾಹನ ಮಾರುಕಟ್ಟೆಯಲ್ಲಿ ಟೊಯೊಟಾ ಸಣ್ಣ ಕಾರುಗಳನ್ನು ಮಾರಾಟಗೈಯಲಿದೆ. ನಿಮ್ಮ ಮಾಹಿತಿಗಾಗಿ ಟೊಯೊಟಾ ಸದ್ಯ ಭಾರತದಲ್ಲಿ ಎಟಿಯೋಸ್ ಲಿವಾ, ಎಟಿಯೋಸ್ ಕ್ರಾಸ್, ಎಟಿಯೋಸ್ ಅಲ್ಟೀಸ್, ಕ್ಯಾಮ್ರಿ, ಪ್ರಯಸ್, ಇನ್ನೋವಾ, ಫಾರ್ಚ್ಯುನರ್, ಲ್ಯಾಂಡ್ ಕ್ರೂಸರ್ ಮತ್ತು ಲ್ಯಾಂಡ್ ಕ್ರೂಸರ್ ಪ್ರಾಡೊಗಳಂತಹ ಮಾದರಿಗಳನ್ನು ಒದಗಿಸುತ್ತಿದೆ.

Toyota

ಸಣ್ಣ ಕಾರು ವಿಭಾಗವನ್ನು ಅವಲೋಕಿಸಿದಾಗ ಮಾರುತಿಯ ಜನಪ್ರಿಯ ಆಲ್ಟೊಗಳಂತಹ ಎಂಟ್ರಿ ಲೆವೆಲ್ ಕಾರುಗಳಿಗೆ ಸ್ಪರ್ಧಿಗಳೇ ಇಲ್ಲದಂತಾಗಿದೆ. ಇಲ್ಲಿ ಸ್ಮರ್ಧಾತ್ಮಕ ದರಗಳಲ್ಲಿ ಗರಿಷ್ಠ ವೈಶಿಷ್ಟ್ಯಗಳನ್ನು ಒದಗಿಸಲು ನಿಕಟ ಸ್ಪರ್ಧಿಗಳು ವಿಫಲವಾಗಿರುವುದೇ ಮಾರುತಿ ಯಶಸ್ಸಿಗೆ ಕಾರಣವಾಗಿದೆ.

ದೈಹಟ್ಸು ಬಗ್ಗೆ ಒಂದಿಷ್ಟು...
1907 ಇಸವಿಯಲ್ಲಿ ಸ್ಥಾಪಿತವಾಗಿರುವ ಜಪಾನ್‌ನ ಅತಿ ಪುರಾತನ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ದೈಹಟ್ಸು ಮೋಟಾರು ಕಂಪನಿ ಲಿಮಿಟೆಡ್ ಸಂಸ್ಥೆಯ ಅಧೀನತೆಯನ್ನು ಈಗ ಟೊಯೊಟಾ ಹೊಂದಿದೆ. ಇದು ಸಣ್ಣ ಕಾರುಗಳ ಜೊತೆಗೆ ಆಫ್ ರೋಡ್ ವಾಹನಗಳಿಗೆ ಹೆಚ್ಚಿನ ಹೆಸರು ಮಾಡಿದೆ.

More from DriveSpark

Article Published On: Tuesday, November 11, 2014, 15:27 [IST]
English summary
Toyota has decided its time to compete head on with its Japanese competitors. They are working together with Daihatsu on developing a small car vehicle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+