ಇಂದೇ ಬುಕ್ ಮಾಡಿ ಟೊಯೊಟಾ ಎಟಿಯೋಸ್ ಕ್ರಾಸ್
ಇತ್ತೀಚೆಗಷ್ಟೇ 2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಲಾಂಚ್ ಆಗಿದ್ದ ಟೊಯೊಟಾ ಎಟಿಯೋಸ್ ಕ್ರಾಸ್ ಆವೃತ್ತಿಯ ಬುಕ್ಕಿಂಗ್ ಪ್ರಕ್ರಿಯೆ ಆರಂಭಗೊಂಡಿದ್ದು, ಸದ್ಯದಲ್ಲೇ ವಿತರಣೆ ಕಾರ್ಯ ಪ್ರಾರಂಭಗೊಳ್ಳಲಿದೆ ಎಂದು ಜಪಾನ್ ಮೂಲದ ಈ ದೈತ್ಯ ವಾಹನ ತಯಾರಕ ಸಂಸ್ಥೆಯು ತಿಳಿಸಿದೆ.
ದೇಶದಲ್ಲಿ ಕಾಂಪಾಕ್ಟ್ ಎಸ್‌ಯುವಿ ಕಾರುಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಟೊಯೊಟಾ ಎಟಿಯೋಸ್ ಕ್ರಾಸ್ ತಯಾರಿಸಲಾಗಿದೆ.

ಪ್ರಸ್ತುತ ಬಹುನಿರೀಕ್ಷಿತ ಕಾರು ಯಾವಾಗ ರಸ್ತೆ ಪ್ರವೇಶಿಸಲಿದೆ ಎಂಬುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ವರದಿಗಳ ಪ್ರಕಾರ ಮೇ ತಿಂಗಳಲ್ಲಿ ವಿತರಣೆ ಆರಂಭಗೊಳ್ಳಲಿದೆ.
ಇದೀಗ ರು. 50,000 ಪಾವತಿಸಿ ಈ ಕಾಂಪಾಕ್ಟ್ ಎಸ್‌ಯುವಿ ಕಾರನ್ನು ಬುಕ್ಕಿಂಗ್ ಮಾಡಿಸಿಕೊಳ್ಳಬಹುದಾಗಿದೆ. ಇದು ಫೋರ್ಡ್ ಇಕೊಸ್ಪೋರ್ಟ್, ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊ ಮತ್ತು ಇನ್ನಷ್ಟೇ ಆಗಮನವಾಗಬೇಕಾಗಿರುವ ಫಿಯೆಟ್ ಅವೆಂಚ್ಯೂರಾ ಆವೃತ್ತಿಗಳಿಗೆ ಸ್ಪರ್ಧೆ ಒಡ್ಡಲಿದೆ.
ಇನ್ನು ಪೆಟ್ರೋಲ್ ಸೇರಿದಂತೆ ಡೀಸೆಲ್ ವೆರಿಯಂಟ್‌ಗಳಲ್ಲಿ ಎಟಿಯೋಸ್ ಕ್ರಾಸ್ ಲಭ್ಯವಾಗಲಿದೆ. ಇದು 1.5 ಹಾಗೂ 1.2 ಲೀಟರ್ ಪೆಟ್ರೋಲ್ ಹಾಗೂ 1.4 ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ.


Click it and Unblock the Notifications








