ಟೊಯೊಟಾ ಎಟಿಯೋಸ್ ಎಕ್ಸ್‌ಕ್ಲೂಸಿವ್ ಸೀಮಿತ ಆವೃತ್ತಿ ಬಿಡುಗಡೆ
ದೇಶದಲ್ಲಿ ತನ್ನದೇ ಆದ ವೈಶಿಷ್ಟ್ಯಗಳೊಂದಿಗೆ ಗುರುತಿಸಿಕೊಂಡಿರುವ ಟೊಯೊಟಾ ಕಿರ್ಲೊಸ್ಕರ್ ಮೋಟಾರು ಸಂಸ್ಥೆಯು, ಹೊಸತಾದ ಎಟಿಯೋಸ್ ಎಕ್ಸ್‌ಕ್ಲೂಸಿವ್ ಸೀಮಿತ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.
ನಿಮ್ಮ ಮಾಹಿತಿಗಾಗಿ, ಎಟಿಯೋಸ್ ಎಕ್ಸ್‌ಕ್ಲೂಸಿವ್ ಸೆಡಾನ್ ಕಾರು ಸೀಮಿತ 900 ಯುನಿಟ್‌ಗಳಷ್ಟು ಮಾತ್ರ ನಿರ್ಮಾಣವಾಗಲಿದೆ. ಇದು ಕಾರಿನ ಒಳಮೈ ಹಾಗೂ ಹೊರಮೈಯಲ್ಲೂ ಬದಲಾವಣೆಗಳನ್ನು ಪಡೆದುಕೊಂಡಿದೆ.

ಹೊರಮೈ...
ಎಲ್ಲ ಹೊಸತನದಿಂದ ಕೂಡಿರುವ ಕ್ರೋಮ್ ಫ್ರಂಟ್ ಗ್ರಿಲ್, ಟೈಲ್ ಲ್ಯಾಂಪ್‌ನಲ್ಲಿ ಕ್ರೋಮ್ ಗಾರ್ನಿಶ್, ಹೆಡ್‌ಲ್ಯಾಂಪ್ ಮತ್ತು ರಿಯರ್ ವ್ಯೂ ಮಿರರ್ ಪಡೆದುಕೊಂಡಿದೆ.
ಒಳಮೈ...
ಇನ್ನು ಕಾರಿನೊಳಗೆ ಹೊಸತಾದ ಬ್ಲೂಟೂತ್ ಆಡಿಯೋ ಸಿಸ್ಟಂ ಮತ್ತು ಸೀಮಿತ ಆವೃತ್ತಿ 'ಎಕ್ಸ್‌ಕ್ಲೂಸಿವ್' ಬ್ಯಾಡ್ಜಿಂಗ್ ಇರಲಿದೆ. ಹಾಗಿದ್ದರೂ ಹೊಸ ಬಣ್ಣಗಳ ಆಯ್ಕೆಯಿರುವುದಿಲ್ಲ. ಇದು ಕ್ಲಾಸಿಕ್ ಗ್ರೇ ಮತ್ತು ಸಿಂಫನಿ ಸಿಲ್ವರ್ ಬಣ್ಣಗಳಲ್ಲಿ ಆಗಮನವಾಗಲಿದೆ.

ವೆರಿಯಂಟ್
ಇವೆಲ್ಲದರ ಜೊತೆಗೆ ಟೊಯೊಟಾ ಫಿನಾನ್ಸಿಯಲ್ ಸರ್ವಿಸ್, ವಿಭಾಗ ಝಿರೋ ಡೌನ್ ಪೇಮೆಂಟ್ ಸ್ಕೀಮ್ ಸಹ ಒದಗಿಸುತ್ತಿದೆ. ಅಂದ ಹಾಗೆ ಟೊಯೊಟಾ ಎಟಿಯೋಸ್ ಎಕ್ಸ್‌ಕ್ಲೂಸಿಪ್ ಸೀಮಿತ ಆವೃತ್ತಿಯು ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ.
ದರ ಮಾಹಿತಿ - (ಎಕ್ಸ್ ಶೋ ರೂಂ ದೆಹಲಿ)
ಟೊಯೊಟಾ ಎಟಿಯೋಸ್ ಲಿಮಿಟೆಡ್ ಎಡಿಷನ್
- ಪೆಟ್ರೋಲ್ - 5.98 ಲಕ್ಷ ರು.
- ಡೀಸೆಲ್ - 7.10 ಲಕ್ಷ ರು.


Click it and Unblock the Notifications








