ಟೊಯೊಟಾ ಫಾರ್ಚ್ಯುನರ್ ಹೊಸ ವೆರಿಯಂಟ್ ನಿರೀಕ್ಷಿಸಿ

By Nagaraja

ಸಮಕಾಲೀನ ಮಾರುಕಟ್ಟೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಜಪಾನ್‌ನ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಟೊಯೊಟಾ, ಗ್ರಾಹಕರ ಬೇಡಿಕೆಗಳಿಗಾನುಸಾರವಾಗಿ ಸ್ಪಂದಿಸಲು ನಿರ್ಧರಿಸಿದ್ದು, ತನ್ನ ಎಸ್‌ಯುವಿ ದೈತ್ಯ ಫಾರ್ಚ್ಯೂನರ್‌ ಸಾಲಿನಲ್ಲಿ ಹೊಸ ವೆರಿಯಂಟ್‌ಗಳನ್ನು ಲಾಂಚ್ ಮಾಡಲು ನಿರ್ಧರಿಸಿರುವ ಬಗ್ಗೆ ಮೂಲಗಳು ವರದಿ ಮಾಡಿದೆ.

ಬಲ್ಲ ಮೂಲಗಳ ಪ್ರಕಾರ ಪ್ರೀಮಿಯಂ ಎಸ್‌ಯುವಿ ಫಾರ್ಚ್ಯೂನರ್‌ನಲ್ಲಿ ತಲಾ ಒಂದು ಬೇಸ್ ಹಾಗೂ ಟಾಪ್ ಎಂಡ್ ವೆರಿಯಂಟ್‌ಗಳು ಸೇರ್ಪಡೆಯಾಗಲಿದೆ. ಇದು ಕಡಿಮೆ ಬೆಲೆಯಲ್ಲಿ ಬೇಸ್ ವೆರಿಯಂಟ್ ಹಾಗೆಯೇ ಗರಿಷ್ಠ ವೈಶಿಷ್ಟ್ಯಗಳನ್ನು ಬಯಸುವವರಿಗಾಗಿ ಟಾಪ್ ಎಂಡ್ ವೆರಿಯಂಟ್ ಲಭ್ಯವಾಗಲಿದೆ.

Toyota Fortuner

ಪ್ರಸ್ತುತ ಟೊಯೊಟಾ ಫಾರ್ಚ್ಯೂನರ್, 3.0 ಲೀಟರ್, 4 ಸಿಲಿಂಡರ್, ಡಿ-4ಡಿ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 170 ಅಶ್ವಶಕ್ತಿ (343 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು 21.81 ಲಕ್ಷ ರು.ಗಳಿಂದ 23.41 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ. ಬೇಸ್ ವೆರಿಯಂಟ್‌ನಲ್ಲಿ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜತೆ ರಿಯರ್ ವೀಲ್ ಡ್ರೈವ್, ಮಿಡ್ ವೆರಿಯಂಟ್‌ನಲ್ಲಿ ಟು ವೀಲ್ ಡ್ರೈವ್ ಜತೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹಾಗೆಯೇ ಟಾಪ್ ಎಂಡ್ ವೆರಿಯಂಟ್‌ನಲ್ಲಿ 4 ವೀಲ್ ಡ್ರೈವ್ ಜತೆ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ.

ವರದಿಗಳ ಪ್ರಕಾರ, ಟೊಯೊಟಾದ ಹೊಸತಾದ ಬೇಸ್ ವೆರಿಯಂಟ್, ಇನ್ನೋವಾದಿಂದ ಆಮದು ಮಾಡಿಕೊಂಡಿರುವ 2.5 ಲೀಟರ್ ಡೀಸೆಲ್ ಎಂಜಿನ್‌ ಜತೆಗೆ 2 ವೀಲ್ ಡ್ರೈವ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ. ಇದರ ಎಂಜಿನ್ ಫಾರ್ಚ್ಯೂನರ್ ಅಗತ್ಯಗಳಿಗಾನುಸಾರವಾಗಿ ಟ್ಯೂನ್ ಮಾಡಲಾಗುತ್ತಿದ್ದು, 142 ಅಶ್ವಶಕ್ತಿ ಉತ್ಪಾದಿಸುವ ಸಾಧ್ಯತೆಯಿದೆ.

ಹಾಗೆಯೇ ಟಾಪ್ ಎಂಡ್ ವೆರಿಯಂಟ್‌ನಲ್ಲಿ 3.0 ಲೀಟರ್ ಡೀಸೆಲ್ ಎಂಜಿನ್ ಜತೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆಯಲಿದೆ. ಆಟೋ ಮೂಲಗಳ ಪ್ರಕಾರ ಫಾರ್ಚ್ಯೂನರ್ ಹೊಸತಾದ ಬೇಸ್ ವೆರಿಯಂಟ್ ಈಗಿರುವ ಸಾಮಾನ್ಯ ಆವೃತ್ತಿಗಿಂತಲೂ ಒಂದು ಲಕ್ಷ ರು.ಗಳಷ್ಟು (20.82 ಲಕ್ಷ ರು.) ಕಡಿಮೆಯಾಗಿರಲಿದೆ. ಹಾಗೆಯೇ ಟಾಪ್ ಎಂಡ್ ವೆರಿಯಂಟ್ ಇನ್ನು ಒಂದು ಲಕ್ಷ ರು.ಗಳಷ್ಟು (24 ಲಕ್ಷ ರು.) ದುಬಾರಿಯೆನಿಸಲಿದೆ. ಈ ಮಾದರಿಗಳು ಪ್ರಸಕ್ತ ಸಾಲಿನ ಹಬ್ಬದ ಆವೃತ್ತಿಗಿಂತಲೂ ಮುಂಚಿತವಾಗಿ ಬಿಡುಗಡೆಯಾಗುವ ಸಾಧ್ಯತೆಯಿದೆ.

More from DriveSpark

Article Published On: Monday, May 26, 2014, 12:31 [IST]
English summary
Toyota Fortuner could soon become more affordable with the launch of a new base variant and for those looking for more, it could also come with a new top-of-the-line variant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+