ಟೊಯೊಟಾ ತ್ರಿಚಕ್ರ ವಾಹನ 'ಐ-ರೋಡ್' ರಸ್ತೆ ಪರೀಕ್ಷೆ

By Nagaraja

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಭವಿಷ್ಯದ ವಾಹನ ತಯಾರಿಯಲ್ಲಿ ಮಗ್ನವಾಗಿರುವ ಟೊಯೊಟಾ ಸಂಸ್ಥೆಯು ನೂತನ ತ್ರಿಚಕ್ರ ವಾಹನ 'ಐ-ರೋಡ್' ಅಭಿವೃದ್ಧಿಯಲ್ಲಿ ತೊಡಗಿದೆ. ಈಗಾಗಲೇ ಜಾಗತಿಕವಾಗಿ ತಮ್ಮ ಕಾನ್ಸೆಪ್ಟ್ ಮಾದರಿಯನ್ನು ಪರಿಚಯಿಸಿರುವ ಟೊಯೊಟಾ ಈ ಬಹುನಿರೀಕ್ಷಿತ ವಾಹನದ ರಸ್ತೆ ಪರೀಕ್ಷೆಯನ್ನು ಹಮ್ಮಿಕೊಂಡಿದೆ.

ಹೌದು, ಕಳೆದ ವರ್ಷ ಟೊಕಿಯೋ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿರುವ ಟೊಯೊಟಾ 'ಐ ರೋಡ್' ವೈಯಕ್ತಿಕ ಸಂಚಾರ ವಾಹನವು ವಿದ್ಯುತ್‌ ಚಾಲಿತ ವಾಹನವಾಗಿರಲಿದೆ.

ಟೊಯೊಟಾ ತ್ರಿಚಕ್ರ ವಾಹನ 'ಐ-ರೋಡ್' ರಸ್ತೆ ಪರೀಕ್ಷೆ

ಪ್ರಸ್ತುತ ನಗರ ಪ್ರದೇಶದ ರಸ್ತೆಗಳಲ್ಲಿ ಟೊಯೊಟಾ 'ಐ-ರೋಡ್' ವಿದ್ಯುತ್ ಚಾಲಿತ ವಾಹನದ ಪರೀಕ್ಷೆ ನಡೆಯಲಿದೆ. ಈ ತ್ರಿಚಕ್ರ ವಾಹನವು ಹಲವಾರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಪ್ರಸ್ತುತ ರಸ್ತೆ ಪರೀಕ್ಷೆಯು ಮಾರ್ಚ್ 24ರಂದು ಆರಂಭವಾಗಲಿದ್ದು, 20 ಮಂದಿ 10ರಷ್ಟು ವಾಹನಗಳನ್ನು ಚಲಿಸುವ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ.

ಟೊಯೊಟಾ ತ್ರಿಚಕ್ರ ವಾಹನ 'ಐ-ರೋಡ್' ರಸ್ತೆ ಪರೀಕ್ಷೆ

ವೈಯಕ್ತಿಕ ಸಂಚಾರ ವಿಷಯಕ್ಕೆ ಬಂದಾಗ ನಯವಾದ ಹಾಗೂ ಮೊನಾಚಾದ ವಿನ್ಯಾಸ ಪಡೆದುಕೊಂಡಿರುವ ಟೊಯೊಟಾ ಐ ರೋಡ್ ಹೆಚ್ಚು ಸೂಕ್ತವೆನಿಸಲಿದೆ. ಇದು ಮುಂಭಾಗದಲ್ಲಿ ವೃತ್ತಾಕಾರದ ಹೆಡ್‌ಲೈಟ್ ಹಾಗೂ ಬೈಕ್ ಮಾದರಿಯ ಇಂಡಿಕೇಟರ್ ಪಡೆದುಕೊಂಡಿದೆ.

ಟೊಯೊಟಾ ತ್ರಿಚಕ್ರ ವಾಹನ 'ಐ-ರೋಡ್' ರಸ್ತೆ ಪರೀಕ್ಷೆ

ಏರೋಡೈನಾಮಿಕ್ ವಿನ್ಯಾಸದಿಂದ ಸ್ಫೂರ್ತಿ ಪಡೆದು ಇದರ ಡಿಸೈನ್ ರಚಿಸಲಾಗಿದೆ. ಈ ಮೂಲಕ ಟ್ರೆಂಡಿ ಹಾಗೂ ಸ್ಟೈಲಿಷ್ ವಿನ್ಯಾಸ ಕಾಪಾಡಿಕೊಳ್ಳಲಾಗಿದೆ. ಅಲ್ಲದೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಲಗತ್ತಿಸಲಾಗಿದೆ.

ಟೊಯೊಟಾ ತ್ರಿಚಕ್ರ ವಾಹನ 'ಐ-ರೋಡ್' ರಸ್ತೆ ಪರೀಕ್ಷೆ

ಇನ್ನು ಟೊಯೊಟಾ ಐ ರೋಡ್ ಹಗುರ ಭಾರದ ಪರಿಕರಗಳಿಂದ ನಿರ್ಮಿಸಲಾಗಿದೆ. ಬದಿಯಿಂದಲೂ ಇದು ಯೂನಿಕ್ ವಿನ್ಯಾಸ ಕಾಪಾಡಿಕೊಂಡಿದೆ.

ಟೊಯೊಟಾ ತ್ರಿಚಕ್ರ ವಾಹನ 'ಐ-ರೋಡ್' ರಸ್ತೆ ಪರೀಕ್ಷೆ

ಹಿಂದುಗಂಡೆ ಒಂದು ಚಕ್ರ ಮಾತ್ರ ಹೊಂದಿದ್ದು, ಡಿಸ್ಕ್ ಬ್ರೇಕ್ ಪಡೆದುಕೊಳ್ಳಲಿದೆ. ಇನ್ನು ಬಹುಬೇಗನೇ ಗೋಚರಿಸುವ ನಿಟ್ಟಿನಲ್ಲಿ ಟರ್ನ್ ಹಾಗೂ ಬ್ರೇಕ್ ಇಂಡಿಕೇಟರ್‌ಗಳನ್ನು ಮೇಲ್ಭಾಗದಲ್ಲಿ ಆಳವಡಿಸಲಾಗಿದೆ.

ಒಳಮೈ

ಒಳಮೈ

ಟೊಯೊಟಾ ಐ ರೋಡ್‌ನಲ್ಲಿ ಇಬ್ಬರಿಗೆ ಆರಾಮದಾಯಕವಾಗಿ ಕುಳಿತುಕೊಳ್ಳಬಹುದಾಗಿದೆ. ಇದರಲ್ಲಿ ಸಂಪೂರ್ಣ ಡಿಟಿಜಲ್‌ ಟಚ್ ನೀಡಲಾಗಿದ್ದು, ಸುಲಭವಾಗಿ ಬಳಕೆ ಮಾಡಬಹುದಾಗಿದೆ. ಅಂದರೆ ತಮ್ಮ ಸ್ಕೂಟರ್‌ಗಳನ್ನು ಅಪ್‌ಗ್ರೇಡ್ ಮಾಡಲು ಬಯಸುವವರು ಇದನ್ನೊಮ್ಮೆ ಪರೀಕ್ಷಿಸಬಹುದಾಗಿದೆ.

ಟೊಯೊಟಾ ತ್ರಿಚಕ್ರ ವಾಹನ 'ಐ-ರೋಡ್' ರಸ್ತೆ ಪರೀಕ್ಷೆ

ಇದು 2.4 ಮೀಟರ್ ಉದ್ದ ಹೊಂದಿದ್ದು, ಗಂಟೆಗೆ ಗರಿಷ್ಠ 37 ಮೈಲ್ ವೇಗತೆಯಲ್ಲಿ ಸಂಚರಿಸಲಿದೆ. ಅಲ್ಲದೆ ಲಿಥಿಯಂ ಇಯಾನ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡುವ ಎರಡು ಎಲೆಕ್ಟ್ರಿಕ್ ಮೋಟಾರುಗಳಿದ್ದು, 30 ಮೈಲ್ ದೂರದ ವರೆಗೂ ಪಯಣಿಸಬಹುದಾಗಿದೆ.

Article Published On: Wednesday, March 26, 2014, 6:03 [IST]
English summary
Toyota had showcased a three wheeler concept at previous years Tokyo Motor Show. They have prepared a production model and will begin testing the electric vehicle in urban conditions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+