ಟೊಯೊಟಾ ಬೆಂಗಳೂರು ಘಟಕದಲ್ಲಿ ಉತ್ಪಾದನೆ ಸ್ಥಗಿತ

By Nagaraja

ವೇತನ ಪರಿಷ್ಕರಣೆ ಸಂಬಂಧ ತಲೆದೋರಿರುವ ಕಾರ್ಮಿಕ ಮುಷ್ಕರದ ಹಿನ್ನಲೆಯಲ್ಲಿ ಬೆಂಗಳೂರಿನ ಹೊರವಲಯದಲ್ಲಿ ಸ್ಥಿತಗೊಂಡಿರುವ ಟೊಯೊಟಾ ಕಿರ್ಲೊಸ್ಕರ್ ಮೋಟಾರು ಸಂಸ್ಥೆಯ ಎರಡು ಘಟಕಗಳ ಉತ್ಪಾದನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಬೆಂಗಳೂರಿನ ಹೊರವಲಯ ಬಿಡದಿಯಲ್ಲಿ ಟೊಯೊಟಾದ ಎರಡು ಘಟಕಗಳು ಸ್ಥಿತಗೊಂಡಿದೆ. ವೇತನಾ ಪರಿಷ್ಕರಣೆ ಸಂಬಂಧ ಒಂದು ವಿಭಾಗ ಕಾರ್ಮಿಕರು ಮುಷ್ಕರ ಹೂಡಿರುವ ಹಿನ್ನಲೆಯಲ್ಲಿ ಘಟಕದಲ್ಲಿ ಉತ್ಪಾದನೆ ನಿಲುಗಡೆಗೊಂಡಿರುವುದಾಗಿ ಟೊಯೊಟಾ ತಿಳಿಸಿದೆ.

Toyota India

ಇದೀಗ ತಲೆದೋರಿರುವ ಮುಷ್ಕರ ಎಷ್ಟು ದಿನ ಮುಂದುವರಿಯಲಿದೆ ಎಂಬುದು ಹೇಳುವುದು ಕಷ್ಟ. ಸಂಸ್ಥೆಯ ಪ್ರಕಾರ ಕಳೆದ 25 ದಿನಗಳಿಂದ ಕೆಲವು ಕಾರ್ಮಿಕರು ಕೆಲಸವನ್ನು ನಿಲುಗಡೆಗೊಳಿಸಿರುವುದಾಗಿ ತಿಳಿಸಿದೆ.

ಮಾರುತಿ ಸುಜುಕಿ, ಹ್ಯುಂಡೈ, ಮಹೀಂದ್ರ ಬಳಿಕ ದೇಶದ ನಾಲ್ಕನೇ ಅತಿದೊಡ್ಡ ಕಾರು ನಿರ್ಮಾಣ ಸಂಸ್ಥೆ ಎನಿಸಿಕೊಂಡಿರುವ ಜಪಾನ್ ಮೂಲದ ಟೊಯೊಟಾ, ಬೆಂಗಳೂರಿನ ಘಟಕದಲ್ಲಿ ದಿನಂಪ್ರತಿ 700ರಷ್ಟು ವಾಹನಗಳನ್ನು ಉತ್ಪಾದಿಸುತ್ತಿದೆ. ಇಲ್ಲಿ ಜನಪ್ರಿಯ ಫಾರ್ಚುನರ್, ಇನ್ನೋವಾ, ಎಟಿಯೋಸ್ ಸೆಡಾನ್ ಹಾಗೂ ಕರೊಲ್ಲಾ ಆಲ್ಟೀಸ್ ಸೆಡಾನ್‌ಗಳಂತಹ ಮಾದರಿಗಳು ಉತ್ಪಾದನೆಯಾಗುತ್ತಿದೆ. ಪ್ರಸ್ತುತ ಮುಷ್ಕರದಿಂದಾಗಿ 2014 ಕರೊಲ್ಲಾ ಆಲ್ಟೀಸ್ ಹಾಗೂ ಎಟಿಯೋಸ್ ಕ್ರಾಸ್ ಲಾಂಚ್ ಕಾರ್ಯಕ್ರಮ ಇನ್ನಷ್ಟು ಮುಂದೂಡುವ ಸಾಧ್ಯತೆಯಿದೆ.

More from DriveSpark

Article Published On: Monday, March 17, 2014, 11:15 [IST]
English summary
Toyota Kirloskar Motor, the Indian unit of Toyota Motor Corp, has temporarily stopped production of automobiles at its manufacturing facilities.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+