ಪ್ರಾರಂಭಿಕ ಗುಣಮಟ್ಟ ಅಧ್ಯಯನದಲ್ಲಿ ಟೊಯೊಟಾ ಪ್ರಥಮ

By Nagaraja

ವಾಹನ ಅಧ್ಯಯನ ಸಂಸ್ಥೆ ಜೆ.ಡಿ. ಪವರ್ ಏಷ್ಯಾ ಫೆಸಿಫಿಕ್ 2014 ಬಿಡುಗಡೆ ಮಾಡಿರುವ ಭಾರತದ ಪ್ರಾರಂಭಿಕ ಗುಟ್ಟಮಟ್ಟ ಅಧ್ಯಯನ (ಐಕ್ಯೂಎಸ್) ಬಹು ಬಳಕೆಯ ವಾಹನಗಳ (ಎಂಪಿವಿ) ವಿಭಾಗದಲ್ಲಿ ಟೊಯೊಟಾ ಇನ್ನೋವಾ ಪ್ರಥಮ ಸ್ಥಾನ ಪಡೆದುಕೊಂಡಿದೆ.

100 ವಾಹನಗಳಿಗೆ ಎದುರಾಗುವ ಸಮಸ್ಯೆಗಳ ಆಧಾರದಲ್ಲಿ (ಪಿಪಿ100) ಇದನ್ನು ಲೆಕ್ಕ ಹಾಕಲಾಗುತ್ತದೆ. ಅದೇ ರೀತಿ ಅಪ್ಪರ್ ಕಾಂಪಾಕ್ಟ್ ಹಾಗೂ ಎಂಟ್ರಿ ಮಧ್ಯಮ ಗಾತ್ರದ ವಿಭಾಗದಲ್ಲಿ ಟೊಯೊಟಾ ಲಿವಾ ಹಾಗೂ ಎಟಿಯೋಸ್ ಅನುಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನಗಳನ್ನು ಗಿಟ್ಟಿಸಿಕೊಂಡಿದೆ.


ಪ್ರಸ್ತುತ ಅಧ್ಯಯನವು ಇದೀಗ 18ನೇ ವರ್ಷಕ್ಕೆ ತಲುಪಿದ್ದು, ಎರಡರಿಂದ ಆರನೇ ತಿಂಗಳ ವರೆಗೆ ವಾಹನ ಖರೀದಿಸುವ ಹೊಸ ಮಾಲಿಕರಿಗೆ ಎಂಜಿನ್, ಟ್ರಾನ್ಸ್‌ಮಿಷನ್, ಹೊರಮೈ, ಚಾಲನಾ ಅನುಭವ, ವೈಶಿಷ್ಟ್ಯ, ನಿಯಂತ್ರಣ, ಒಳಮೈ, ಸೀಟು, ಆಡಿಯೋ, ಮನರಂಜನೆ ಮತ್ತು ನೇವಿಗೇಷನ್ ಸೇರಿದಂತೆ 200ಕ್ಕೂ ಹೆಚ್ಚು ತೊಂದರೆಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ಲೆಕ್ಕ ಹಾಕಿಕೊಂಡು ಪಿಪಿ100ರಲ್ಲಿ ಅಂಕ ನೀಡಲಾಗುತ್ತದೆ.

ಅಂತೆಯೇ ಕಡಿಮೆ ಅಂಕ ಗಿಟ್ಟಿಸಿಕೊಂಡ ಕಾರುಗಳು ಗರಿಷ್ಠ ಪ್ರಾರಂಭಿಕ ಗುಣಮಟ್ಟತೆಯನ್ನು ಹೊಂದಿರುತ್ತದೆ. ಅಂತೆಯೇ ಪಿಪಿ100ರಲ್ಲಿ 64 ಅಂಕ ಗಿಟ್ಟಿಸಿಕೊಂಡಿರುವ ಇನ್ನೋವಾ ಎಂಪಿವಿ ವಿಭಾಗದಲ್ಲಿ ಪ್ರಥಮ ಎನಿಸಿಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಎರ್ಟಿಗಾ 86 ಅಂಕ ಗಳಿಸಿತ್ತು.

jd power iqs report

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಟೊಯೊಟಾ ಕಿರ್ಲೊಸ್ಕರ್ ಸೇಲ್ಸ್ ಆಂಡ್ ಮಾರ್ಕೆಟಿಂಗ್ ಹಿರಿಯ ಉಪಾಧ್ಯಕ್ಷರಾಗಿರುವ ಎನ್. ರಾಜ, "ಜೆ.ಡಿ ಪವರ್ ಫಲಿತಾಂಶ ಖುಷಿ ತಂದಿದ್ದು, ನಮ್ಮದೇ ಗ್ರಾಹಕರ ಪ್ರತಿಕ್ರಿಯೆ ಇದಾಗಿದೆ ಎಂದಿದ್ದಾರೆ. ಅಲ್ಲದೆ ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಲು ಇಷ್ಟಪಡುತ್ತೇನೆ ಎಂದಿದ್ದಾರೆ. ಇನ್ನೂ ಮುಂದಕ್ಕೂ ಗುಣಮಟ್ಟ, ಬಾಳ್ವಿಕೆ ಹಾಗೂ ವಿಶ್ವಾಸಾರ್ಹತೆ ಹೆಚ್ಚಿಸಲು ಸಹಕಾರಿಯಾಗಲಿದೆ" ಎಂದಿದ್ದಾರೆ.

More from DriveSpark

Article Published On: Friday, December 5, 2014, 9:54 [IST]
English summary
According to J.D. Power Asia Pacific 2014 India Initial Quality Study (IQS), Toyota Innova ranks highest in the MUV/MPV segment scoring the least with respect to PP100 (problems per 100 vehicles).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+