ಟೊಯೊಟಾ; ಮುಂದುವರಿದ ನಿರಶನ ಸತ್ಯಾಗ್ರಹ

By Nagaraja

ಟೊಯೊಟಾ ಕಿರ್ಲೊಸ್ಕರ್ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘಟನೆಗಳ ನಡುವಣ ಸಮಸ್ಯೆ ಇನ್ನು ಬಗೆಹರಿದಿಲ್ಲ. ವರದಿಗಳ ಪ್ರಕಾರ ಕೆಲವು ಸಿಬ್ಬಂದಿಗಳು ಕೆಲಸಕ್ಕೆ ಹಿಂತಿರುಗಿದ್ದಾರೆ.

4200 ಅತೃಪ್ತ ಕಾರ್ಮಿಕರ ಪೈಕಿ 300ರಷ್ಟು ಮಂದಿ ಕೆಲಸಕ್ಕೆ ಹಾಜರಾಗಿದ್ದಾರೆ. ಇವರೆಲ್ಲರು ಆಡಳಿತ ಮಂಡಳಿಯ ಉತ್ತಮ ನಡವಳಿಕೆಗಾಗಿನ ಪತ್ರಕ್ಕೆ ಸಹಿ ಹಾಕಿರುವುದರ ಬಗ್ಗೆ ಮಾಹಿತಿಯಿದೆ.

Toyota Kirloskar

ಬೆಂಗಳೂರು ಹೊರವಲಯದಲ್ಲಿ ಸ್ಥಿತಗೊಂಡಿರುವ ಎರಡು ಘಟಕಗಳಲ್ಲಿ ಕಾರ್ಮಿಕರು ಮುಷ್ಕರ ಹೂಡಿದ್ದರು. ಆದರೆ ಮಾರ್ಚ್ 24 ಬೀಗ ಮುದ್ರೆಯನ್ನು ತೆರೆದಿದ್ದ ಟೊಯೊಟಾ ಕೆಲವೊಂದು ನಿಬಂಧನೆಗಳಿಗೆ ಸಹಿ ಹಾಕುವ ಮೂಲಕ ಕೆಲಸಕ್ಕೆ ಹಿಂತಿರುಗಬಹುದು ಎಂದು ತಿಳಿಸಿತ್ತು.

ಈ ನಡುವೆ ಕಾರ್ಮಿಕ ಸಂಘಟನೆಗಳ ಪ್ರಕಾರ ಕೆಲಸಕ್ಕೆ ಹಾಜರಾದವರು ಮರಳಿದ್ದು, ತಮ್ಮ ಪ್ರತಿಭಟನೆಗೆ ಇನ್ನಷ್ಟು ಬಿಸಿ ಮುಟ್ಟಿಸುವ ಸಲುವಾಗಿ 25ರಷ್ಟು ಕಾರ್ಮಿಕರು ನಿರಶನ ಸತ್ಯಾಗ್ರಹ ಆರಂಭಿಸಿರುವುದಾಗಿ ತಿಳಿಸಿದ್ದಾರೆ.

ಟೊಯೊಟಾದ ಪ್ರಕಾರ 1,200 ಸುಪ್ರವೈಸರ್ ಹಾಗೂ 800ರಷ್ಟು ಅಪ್ರೆಂಟಸ್ ಸಿಬ್ಬಂದಿಗಳು ಸೇರಿದಂತೆ 2,000ರಷ್ಟು ಕಾರ್ಮಿಕರು ಕೆಲಸಕ್ಕೆ ಹಿಂದಿರುಗಿದ್ದಾರೆ. ಹಾಗಿದ್ದರೂ ಕಾರ್ಮಿಕರ ಮುಷ್ಕರದಿಂದಾಗಿ ನಿರ್ಮಾಣ ಸಾಮರ್ಥ್ಯ 700ರಿಂದ 350ಕ್ಕೆ ಇಳಿಕೆಗೊಂಡಿದ್ದು, ಈ ಬಗ್ಗೆ ಗ್ರಾಹಕರಿಗೆ ಮಾಹಿತಿ ಮುಟ್ಟಿಸುತ್ತಿರುವುದಾಗಿಯೂ ತಿಳಿಸಿದೆ.

More from DriveSpark

Article Published On: Monday, April 7, 2014, 11:44 [IST]
English summary
The standoff between the management of Toyota Kirloskar and the labor union has not ended, even though it has been reported that a few workers have returned to work.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+