ಟೊಯೊಟಾ ಕಾರ್ಮಿಕರ ಮುಷ್ಕರ ಇತ್ಯರ್ಥ?
ಟೊಯೊಟಾ ಕಿರ್ಲ್ಕೊಸ್ಕರ್ ಮೋಟಾರು ಸಂಸ್ಥೆ ಹಾಗೂ ಸಂಸ್ಥೆಯ ಬಿಡದಿ ಘಟಕದ ಕಾರ್ಮಿಕರ ನಡುವೆ ತಲೆದೋರಿದ್ದ ವೇತನ ಪರಿಷ್ಕರಣೆ ಸಂಬಂಧ ವಿವಾದವು ಬಗೆಹರಿದಿದ್ದು, ಮಾರ್ಚ್ 24ರಿಂದ ಕಾರ್ಮಿಕರು ಕೆಲಸಕ್ಕೆ ಹಾಜರಾಗಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವೇತನ ಪರಿಷ್ಕರಣೆ ಸಂಬಂಧ ಮಾರ್ಚ್ 16ರಿಂದ ಆರಂಭವಾಗಿದ್ದ ಮುಷ್ಕರದಿಂದಾಗಿ ಬೆಂಗಳೂರಿನ ಹೊರವಲಯ ಬಿಡದಿಯಲ್ಲಿ ಸ್ಥಿತಗೊಂಡಿರುವ ಎರಡು ಟೊಯೊಟಾ ಘಟಕಗಳಿಗೆ ಬೀಗ ಜಡಿಯಲಾಗಿತ್ತು.

ಕಾರ್ಮಿಕರ ಸಂಘಟನೆ ಹಾಗೂ ಟೊಯೊಟಾ ಆಡಳಾಧಿಕಾರಿಗಳ ನಡುವಣ ಸಭೆಯ ಬಳಿಕ ಇಂತಹದೊಂದು ನಿರ್ಧಾರ ಬರಲಾಗಿದ್ದು, ವರದಿಗಳ ಪ್ರಕಾರ ಕಾರ್ಮಿಕರ ವೇತನ ಹೆಚ್ಚಳಕ್ಕೆ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿರುವ ಬಗ್ಗೆ ಮಾಹಿತಿ ಲಭಿಸಿದೆ. ಪ್ರಸ್ತುತ ವೇತನ ನೀತಿಯನ್ನು ಒಪ್ಪಿಕೊಂಡು ಬರುವ ಎಲ್ಲ ಕಾರ್ಮಿಕರು ಮುಚ್ಚಳಿಕೆಯೊಂದಕ್ಕೆ ಸಹಿ ಮಾಡಿದ ಬಳಿಕ ಕೆಲಸಕ್ಕೆ ಹಾಜರಾಗಬಹುದಾಗಿದೆ.
1997ನೇ ಇಸವಿಯಲ್ಲಿ ಆರಂಭವಾಗಿರುವ ಬಿಡದಿಯ ಎರಡು ಘಟಕಗಳಲ್ಲಾಗಿ 6,000ದಷ್ಟು ಕಾರ್ಮಿಕರು ದುಡಿಯುತ್ತಿದ್ದಾರೆ. ಆದರೆ ರು. 4000ರಷ್ಟು ವೇತನ ಪರಿಷ್ಕರಣೆಯನ್ನು ಕಾರ್ಮಿಕರು ಬಯಸುತ್ತಿದ್ದು, 3,050ಕ್ಕೆ ಸಂಸ್ಥೆ ಸಮ್ಮತಿ ಸೂಚಿಸಿದೆ. ಇದರಿಂದಾಗಿ ಕಾರ್ಮಿಕರ ಅಸಮಾಧಾನ ಮುಂದುವರಿಯುವಂತಾಗಿದೆ.


Click it and Unblock the Notifications








