ಸರದಿ ನಿರಶನದತ್ತ ಟೊಯೊಟಾ ಕಾರ್ಮಿಕರು
ಬೆಂಗಳೂರು ಹೊರವಲಯದ ಟೊಯೊಟಾ ಕಿರ್ಲೊಸ್ಕರ್ ಘಟಕದಲ್ಲಿರುವ ಕಾರ್ಮಿಕರು ಸರದಿ ನಿರಶನ ಸತ್ಯಾಗ್ರಹ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.
ಕಳೆದ ಒಂದು ತಿಂಗಳಿಂದ ಮುಷ್ಕರ ಹೂಡುತ್ತಿರುವ ಕಾರ್ಮಿಕರು ನಿರಂತರ ನಿರಶನ ಸತ್ಯಾಗ್ರಹ ಮಾರ್ಗವನ್ನು ಅನುಸರಿಸಿದ್ದರು. ಆದರೆ ನಿರಶನ ನಿರತರಾದವರಲ್ಲಿ ಕೆಲವರಿಗೆ ಅನಾರೋಗ್ಯ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದೀಗ ಕಾರ್ಮಿಕ ಸಂಘಟನೆಗಳ ಹಿರಿಯಧಿಕಾರಿಗಳು ಹಾಗೂ ಎನ್‌ಜಿಒ ಸಲಹೆ ಪ್ರಕಾರ ಸರದಿ ನಿರಶನ ಅನುಸರಿಸಲು ನಿರ್ಧರಿಸಿದ್ದಾರೆ. ಇದರಂತೆ ನಿರಶನ ನಿರತರಾದವರು ಒಬ್ಬರೊಬ್ಬರನ್ನು ಬದಲಾಯಿಸಿಕೊಳ್ಳಲಿದ್ದಾರೆ.
ಕಾರ್ಮಿಕ ಸಂಘಟನೆಗಳು ರು. 4000 ವರೆಗೆ ವೇತನ ಪರಿಷ್ಕರಣೆ ಜತೆಗೆ ಅಮಾನತು ಮಾಡಿರುವ 32 ಕೆಲಸಗಾರರನ್ನು ಮರಳಿ ಕೆಲಸಕ್ಕೆ ಸೇರ್ಪಡೆಗೊಳಿಸುವಂತೆ ಬೇಡಿಕೆ ಮುಂದಿಟ್ಟಿದ್ದರು. ಇದಕ್ಕೂ ಮೊದಲು ನಡೆದಿದ್ದ ಸಂಧಾನ ಸಭೆಯಲ್ಲಿ ಬೀಗ ಮುದ್ರೆ ತೆರವುಗೊಳಿಸಿದ್ದ ಟೊಯೊಟಾ, ಉತ್ತಮ ನಡವಳಿಕೆಗಾಗಿ ಮುಚ್ಚಳಿಕೆ ಪತ್ರಕ್ಕೆ ಸಹಿ ಮಾಡುವ ಮೂಲಕ ಕೆಲಸಕ್ಕೆ ಹಾಜರಾಗಬಹುದೆಂದು ಸೂಚಿಸಿತ್ತು.
ಇಂದಿನ ಫೇಸ್‌ಬುಕ್ ವೀಡಿಯೋ


Click it and Unblock the Notifications








