ಟೊಯೊಟಾದಿಂದ ಸಣ್ಣ ಕಾರು ಉತ್ಪಾದನೆಯಿಲ್ಲ

By Nagaraja

ಭಾರತದಲ್ಲಿ ಬಜೆಟ್ ಕಾರುಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳಾದ ಮಾರುತಿ ಸುಜುಕಿ ಹಾಗೂ ಹ್ಯುಂಡೈ ಮೋಟಾರು ಇಂಡಿಯಾ ಯಶಸ್ಸನ್ನು ಇದು ಎತ್ತಿ ಹಿಡಿಯುತ್ತದೆ.

ಆದರೆ ದೇಶದಲ್ಲಿ ಸಣ್ಣ ಕಾರಿನ ಸ್ಪರ್ಧೆಗಿಲ್ಲ ಎಂದು ಜಪಾನ್ ಮೂಲದ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ಟೊಯೊಟಾ ಸ್ಪಷ್ಟಪಡಿಸಿದೆ. ಸದ್ಯ ಟೊಯೊಟಾದಿಂದ ಲಭ್ಯವಾಗುತ್ತಿರುವ ಅತ್ಯಂತ ಅಗ್ಗದ ಕಾರೆಂದರೆ ಎಟಿಯೋಸ್ ಲಿವಾ ಹ್ಯಾಚ್‌ಬ್ಯಾಕ್ ಆಗಿದೆ. ಇದರ ದರ 4.80 ಲಕ್ಷ ರು.ಗಳಾಗಿವೆ.

Toyota Kirloskar

ಇನ್ನೊಂದೆಡೆ ಮಾರುತಿಯ ಅಲ್ಟೊ, ವ್ಯಾಗನಾರ್, ಹ್ಯುಂಡೈನ ಇಯಾನ್, ಐ10 ಹಾಗೆಯೇ ದಟ್ಸನ್ ಗೊ ಆವೃತ್ತಿಗಳು ನಾಲ್ಕು ಲಕ್ಷ ರು.ಗಳ ಅಸುಪಾಸಿನಲ್ಲಿ ಗಮನಾರ್ಹ ಮಾರಾಟ ಸಾಧಿಸಿವೆ. ಇಲ್ಲಿ ಗಮನಾರ್ಹ ಅಂಶವೆಂದರೆ ದೇಶದ ಒಟ್ಟು ಮಾರಾಟದ ಶೇಕಡಾ 50ರಷ್ಟು ಮಾರಾಟವು ಸಣ್ಣ ಕಾರುಗಳಿಂದಲೇ ಆಗುತ್ತಿವೆ.

ಹಾಗಾಗಿ ಟೊಯೊಟಾದಿಂದ ಉಂಟಾಗಿರುವ ಇಂತಹದೊಂದು ನಡೆ ಸಹಜವಾಗಿಯೇ ಆಶ್ಚರ್ಯವನ್ನುಂಟು ಮಾಡಿದೆ. ದೊಡ್ಡ ಕಾರುಗಳ ವಿಭಾಗದತ್ತ ಹೆಚ್ಚು ಗಮನ ಹರಿಸುತ್ತಿರುವುದೇ ಟೊಯೊಟಾದಿಂದ ಕಂಡುಬಂದಿರುವ ಇಂತಹದೊಂದು ನಡೆಯ ಹಿಂದಿರುವ ಕಾರಣವಾಗಿರಬಹುದು. ಅಲ್ಲದೆ ದೊಡ್ಡ ಕಾರುಗಳ ಮಾರಾಟದಲ್ಲಿ ಹೆಚ್ಚು ಲಾಭ ಗಳಿಸಬಹುದು ಎಂಬುದನ್ನು ಸಹ ಟೊಯೊಟಾ ಗಮನದಲ್ಲಿಟ್ಟುಕೊಂಡಿದೆ.

More from DriveSpark

Article Published On: Monday, April 14, 2014, 15:19 [IST]
English summary
Toyota will not participate in the entry level budget hatchback segment in India, Vikram Kirloskar, vice-chairman, Toyota Kirloskar has confirmed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+