ಡೀಲರ್ ಸಂತೃಪ್ತಿಯಲ್ಲಿ ಮಾರುತಿಯನ್ನು ಮೀರಿಸಿದ ಟೊಯೊಟಾ
ನಿಮಗಿದು ನಂಬಲು ಸಾಧ್ಯವೇ? ನೀವು ನಂಬಲೇಬೇಕು. ಯಾಕೆಂದರೆ ಡೀಲರ್ ಸಂತೃಪ್ತಿಯಲ್ಲಿ ದೇಶದ ನಂಬರ್ ವನ್ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿಯನ್ನೇ ಟೊಯೊಟಾ ಮೀರಿಸಿದೆ.
ಇದರರ್ಥ ಮಾರುತಿ ಸುಜುಕಿ ಕಳಪೆ ಡೀಲರ್‌ಶಿಪ್ ಸಂತೃಪ್ತಿಯನ್ನು ಹೊಂದಿದೆ ಎಂಬುದಲ್ಲ. ಬದಲಾಗಿ ಮಾರುತಿಗಿಂತಲೂ ಹೆಚ್ಚು ರೇಟಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಟೊಯೊಟಾ ಯಶಸ್ವಿಯಾಗಿದೆ.

ಜೆಡಿ ಪವರ್ ಏಷಿಯಾ ಫಿಸಿಫಿಕ್ ಬಿಡುಗಡೆ ಮಾಡಿರುವ 2014 ಇಂಡಿಯಾ ಡೀಲರ್ ಸಂತೃಪ್ತಿ ಆಟೋಮೋಟಿವ್ ವಾಹನ ಇಂಡೆಕ್ಸ್ (DSWAMI) ಅಧ್ಯಯನ ವರದಿಯಲ್ಲಿ ಇದು ದಾಖಲಾಗಿದೆ. ಫೆಬ್ರವರಿಯಿಂದ ಮಾರ್ಚ್ ತಿಂಗಳ ವರೆಗೆ ನಡೆಸಿರುವ ಅಧ್ಯಯನದಲ್ಲಿ ದೇಶದ 200ಕ್ಕೂ ಹೆಚ್ಚು ನಗರಗಳ 658 ಡೀಲರ್‌ಶಿಪ್‌ಗಳ ಜನರಲ್ ಮ್ಯಾನೇಜರ್‌ಗಳ ಪ್ರತಿಕ್ರಿಯೆ ಆಧಾರದಲ್ಲಿ ಇದನ್ನು ಸಂಗ್ರಹಿಸಲಾಗಿದೆ.
ಫೆಡರೇಷನ್ ಆಫ್ ಆಟೋಮೊಬೈಲ್ ಡೀಲರ್ಸ್ ಸಂಸ್ಥೆ (FADA) ಸಹಭಾಗಿತ್ವದಲ್ಲಿ ಜೆಡಿ ಪವರ್ ಅಧ್ಯಯನ ಹಮ್ಮಿಕೊಂಡಿತ್ತು. ಈ ಮೂಲಕ ಪ್ರಸಕ್ತ ಸಾಲಿನಲ್ಲಿ ಸರಾಸರಿ ಡೀಲರ್ ಸಂತೃಪ್ತಿಯಲ್ಲಿ ಗರಿಷ್ಠ 1000 ಅಂಕಗಳಲ್ಲಿ 827 ದಾಖಲಾಗಿದೆ. ಕಳೆದ ವರ್ಷವಿದು 817 ಆಗಿತ್ತು. ಈ ಮೂಲಕ ಟೊಯೊಟಾ ಹಾಗೂ ಮಾರುತಿ ಸಂಸ್ಥೆಗಳು ಅನುಕ್ರಮವಾಗಿ 925 ಹಾಗೂ 884 ಅಂಕಗಳನ್ನು ಗಿಟ್ಟಿಸಿಕೊಂಡಿದೆ.


Click it and Unblock the Notifications








