ಪ್ಯಾರಿಸ್‌ನಲ್ಲಿ ಟೊಯೊಟಾದಿಂದ ಹೊಸ ಕ್ರಾಸೋವರ್ ಪ್ರದರ್ಶನ

By Nagaraja

2014 ಪ್ಯಾರಿಸ್ ಮೋಟಾರು ಶೋ ಪ್ರಾರಂಭಕ್ಕೆ ದಿನಗಣನೆ ಆರಂಭವಾಗಿದೆ. ಇದರಂತೆ ಜಗತ್ತಿನ ಎಲ್ಲ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳು ತಮ್ಮ ನೂತನ ಮಾದರಿಗಳನ್ನು ಪ್ರದರ್ಶಿಸಲು ತುದಿಗಾಲಲ್ಲಿ ನಿಂತಿದೆ.

ಜಪಾನ್‌ನ ಪ್ರತಿಷ್ಟಿತ ಸಂಸ್ಥೆಯಾಗಿರುವ ಟೊಯೊಟಾ ಸಹ ಇದರಿಂದ ಹೊರತಾಗಿಲ್ಲ. ವರದಿಗಳ ಪ್ರಕಾರ 2014 ಪ್ಯಾರಿಸ್ ಮೋಟಾರು ಶೋದಲ್ಲಿ ಟೊಯೊಟಾ ಸಂಸ್ಥೆಯು ಹೊಸತಾದ ಕ್ರಾಸೋವರ್ ಮಾದರಿಯನ್ನು ಪ್ರದರ್ಶಿಸಲಿದೆ.

Toyota

ಸಂಸ್ಥೆಯು ನೂತನ ಕಾನ್ಸೆಪ್ಟ್ ಕಾರನ್ನು ಸಿ-ಎಚ್‌ಆರ್ ಎಂದು ಹೆಸರಿಸಿಕೊಂಡಿದೆ. ಇದು ಕಾಂಪಾಕ್ಟ್ ಕ್ರಾಸೋವರ್ ಆಗಿದ್ದು, 2014 ಅಕ್ಟೋಬರ್ 2ರಂದು ಅನಾವರಣಗೊಳ್ಳಲಿದೆ.

ಇದರ ಜೊತೆಗೆ ಇನ್ನಿತರ ಮಹತ್ವದ ಮಾದರಿಗಳನ್ನು ಪ್ರದರ್ಶಿಸುವ ಇರಾದೆಯನ್ನು ಸಂಸ್ಥೆ ಹೊಂದಿದೆ. ಇದರಲ್ಲಿ ಫ್ಲೂಯಲ್ ಸೆಲ್ ಸೆಡಾನ್ ಪ್ರಮುಖವಾಗಿದೆ. ಈ ಮಹತ್ತರ ವೆರಿಯಂಟ್ 2015ನೇ ಸಾಲಿನಲ್ಲಿ ಯುರೋಪ್ ಮಾರುಕಟ್ಟೆ ಪ್ರವೇಶಿಸಲಿದೆ.

ಕೆಲವು ತಿಂಗಳುಗಳ ಹಿಂದೆಯಷ್ಟೇ ಭಾರತದಲ್ಲಿ ಎಟಿಯೋಸ್ ಕ್ರಾಸೋವರ್ ಮಾದರಿಯನ್ನು ಪ್ರದರ್ಶಿಸಿರುವ ಟೊಯೊಟಾ, ಮುಂದಿನ ದಿನಗಳಲ್ಲಿ ಪೂರ್ಣ ರೂಪದ ಎಸ್‌ಯುವಿ ಮತ್ತು ಕಾಂಪಾಕ್ಟ್ ಎಸ್‌ಯುವಿ ಪರಿಚಯಿಸುವ ಇರಾದೆ ಹೊಂದಿದೆ. ಈ ನಿಟ್ಟಿನಲ್ಲಿ ಇದೀಗ ಜರಗಲಿರುವ ಪ್ಯಾರಿಸ್ ಮೋಟಾರು ಶೋ ಭಾರತೀಯರ ಪಾಲಿಗೂ ಮಹತ್ವದೆನಿಸಲಿದೆ.

More from DriveSpark

Article Published On: Tuesday, September 16, 2014, 11:14 [IST]
English summary
The 2014 Paris Motor Show is around the corner and every manufacturer is gearing up to showcase their new products and concepts. Japanese automobile giant Toyota also will be showcasing an interesting concept at the Motor Show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+