ಎಲ್ಲ ಟೊಯೊಟಾ ಕಾರುಗಳಿಗೂ ಹೊಸ ಪಾರ್ಕಿಂಗ್ ತಂತ್ರಜ್ಞಾನ
ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ, ಮುಂದಿನ ವರ್ಷ ಜಾಗತಿಕವಾಗಿ ಮಾರಾಟ ಮಾಡಲಿರುವ ಎಲ್ಲ ಮಾದರಿಗಳಲ್ಲೂ ಹೊಸ ಪಾರ್ಕಿಂಗ್ ತಂತ್ರಗಾರಿಕೆ ಆಳವಡಿಸಲಿದೆ.
ಇದರಂತೆ ಇಂಟೆಲಿಜೆನ್ಸ್ ಕ್ಲಿಯರನ್ಸ್ ಸೋನರ್ (ಐಸಿಎಸ್) ತಂತ್ರಜ್ಞಾನದಲ್ಲಿ ಹೊಸ ಪ್ಯಾನರೋಮಿಕ್ ವ್ಯೂ ಮಾನಿಟರ್ ಆಳವಡಿಸುವ ಮೂಲಕ ವೀಕ್ಷಣೆಯ ನಿಖರತೆಯಲ್ಲಿ ಸುಧಾರಣೆ ತರಲಿದೆ.

ಇದು ಚಾಲಕರಿಗೆ ಪಾರ್ಕಿಂಗ್ ಮಾಡುವ ವೇಳೆ ಸುತ್ತುವರಿದ ಪ್ರದೇಶವನ್ನು ನಿಕಟವಾಗಿ ಗಮನಿಸಲು ಸಾಧ್ಯವಾಗಲಿದ್ದು, ಅತ್ಯಂತ ಇಕ್ಕಟ್ಟಿನ ವಾಹನ ನಿಲುಗಡೆ ಪ್ರದೇಶದಲ್ಲೂ ಪಾರ್ಕಿಂಗ್ ಅಥವಾ ನೇವಿಗೇಟ್ ಮಾಡಲು ಸಾಧ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
ಇದೇ ವೇಳೆ ಆಟೋಮ್ಯಾಟಡ್ ಬ್ರೇಕಿಂಗ್ ವೇಳೆ ಢಿಕ್ಕಿಯಾಗುವ ಸಾಧ್ಯತೆಯನ್ನು ತಡೆಯುವ ನಿಟ್ಟಿನಲ್ಲಿ ಐಸಿಎಸ್‌ನಲ್ಲಿ ಇಂಟೆಲಿಜೆಟ್ ಪಾರ್ಕ್ ಅಸಿಸ್ಟ್ ಸಹ ಬಳಕೆ ಮಾಡಲಾಗುವುದು. ಇನ್ನು ನಿಬಿಡ ಪಾರ್ಕಿಂಗ್ ಪ್ರದೇಶದಲ್ಲಿ ಹೊಸತಾದ ಮಲ್ಟಿ ಪಾಯಿಂಟ್ ಟರ್ನ್ ಸಪೋರ್ಟ್ ಕ್ರಿಯೆಯು ಸಹ ಆಳವಡಿಸಲಾಗುವುದು.
ಇನ್ನು ಪ್ಯಾರಲಲ್ ಪಾರ್ಕಿಂಗ್‌ನಲ್ಲಿ ನೆರವಾಗುವ ಮಗದೊಂದು ವೈಶಿಷ್ಟ್ಯವನ್ನು ಸಂಸ್ಥೆ ಅಭಿವೃದ್ಧಿಪಡಿಸಿದೆ. ಒಟ್ಟಾರೆಯಾಗಿ ಹೊಸ ತಂತ್ರಗಾರಿಕೆಯು ಟೊಯೊಟಾ ನಾವೀನ್ಯತೆಗೆ ಕಾರಣವಾಗಲಿದೆ.


Click it and Unblock the Notifications








