ಟೊಯೊಟಾ ಭವಿಷ್ಯತ್ತಿನ 'ಮಿರಾಯ್' ಕಾರು ಅನಾವರಣ

By Nagaraja

ಭವಿಷ್ಯತ್ತಿನ ಸಂಚಾರ ವಾಹಕ ರೂಪಿಸುವುದಲ್ಲಿ ತಲ್ಲೀನವಾಗಿರುವ ಜಪಾನ್ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ, ಹೊಸತಾದ ಮಿರಾಯ್ ಫ್ಲೂಯಲ್ ಸೆಲ್ ವಾಹನವನ್ನು ಅನಾವರಣಗೊಳಿಸಿದೆ.

ಈಗಾಗಲೇ ಫ್ಲೂಯಲ್ ಸೆಲ್ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಟೊಯೊಟಾ ಭವಿಷ್ಯದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಮಾಲಿನ್ಯ ರಹಿತ ಸುಸ್ಥಿರ ಭವಿಷ್ಯ ರೂಪಿಸುವುದೇ ಸಂಸ್ಥೆಯ ಗುರಿಯಾಗಿದೆ.


ಈ ನಿಟ್ಟಿನಲ್ಲಿ ತ್ವರಿತ ಗತಿಯಲ್ಲಿ ಬದಲಿ ವ್ಯವಸ್ಥೆ ಕಂಡುಕೊಳ್ಳಬೇಕಾಗಿದೆ. ಇಡೀ ವಾಹನ ಜಗತ್ತು ಇದಕ್ಕೆ ಹೊಂದಿಕೊಳ್ಳಬೇಕಾಗಿದೆ. ಇದರಂತೆ ಮಿರಾಯ್ ಫ್ಯೂಚರಿಸ್ಟಿಕ್ ಫ್ಲೂಯಲ್ ಸೆಲ್ ವಾಹನವನ್ನು ಜಗತ್ತಿನ ಮುಂದಿರಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಟೊಯೊಟಾದ ಅಧ್ಯಕ್ಷ ಅಕಿಯೊ ಟೊಯೊಡಾ, "ವಾಹನೋದ್ಯಮ ಇತಿಹಾಸದಲ್ಲಿ ನಾವು ಮಹತ್ವದ ತಿರುವಿನ ಹಂತದಲ್ಲಿದ್ದು, ಇಲ್ಲಿ ವಾಹನ ಪ್ರೇಮಿಗಳು ಪರಿಸರ ಸ್ನೇಹಿ ಚಾಲನೆ ಮಾಡುವುದನ್ನು ಹೆಚ್ಚು ಇಷ್ಟಪಡಲಿದ್ದಾರೆ" ಎಂದಿದ್ದಾರೆ.

toyota mirai fcv

ಮಾತು ಮುಂದುವರಿಸಿದ ಅವರು "ಇದು ಅಂತಹ ಮಹತ್ತರ ತಿರುವಾಗಿರಲಿದ್ದು, ಅಲ್ಲಿ ಒಂದು ಸಿಂಗಲ್ ಹೈಡ್ರೋಜನ್ ಟ್ಯಾಂಕ್ ತುಂಬಿದರೆ 480 ಕೀ.ಮೀ. ವರೆಗೆ ಸಂಚರಿಸಬಹುದಾಗಿದೆ. ಅಲ್ಲದೆ ಕೇವಲ ಐದು ನಿಮಿಷಗಳಲ್ಲಿ ಮರು ತುಂಬುವ ಸಾಮರ್ಥ್ಯ ಹೊಂದಿದ್ದು, ಕೇವಲ ನೀರಾವಿ ಮಾತ್ರ ಹೊರಸೂಸಲಿದೆ" ಎಂದು ವಿವರಿಸಿದ್ದಾರೆ.

"ನಮ್ಮ ತಂಡದ ಹಲವಾರು ವರ್ಷಗಳ ಅವಿರತ ಪ್ರಯತ್ನ ಇದರಲ್ಲಿ ಅಡಗಿದ್ದು, ಟೊಯೊಟಾವು ಸುರಕ್ಷಿತ, ಹಸಿರು ಹಾಗೂ ಸರಳ ಭವಿಷ್ಯದಲ್ಲಿ ನಂಬಿಕೆಯನ್ನಿರಿಸಿಕೊಂಡಿದೆ" ಎಂದಿದ್ದಾರೆ.

ಟೊಯೊಟಾ ಎಂಜಿನಿಯರ್‌ಗಳ ಪ್ರಕಾರ ಸಾಮಾನ್ಯ ರಸ್ತೆ ಹಾಗೂ ಸರ್ಕ್ಯೂಟ್‌ನಲ್ಲಿ ಮಿರಾಯ್ ಪರೀಕ್ಷಾರ್ಥ ಚಾಲನೆ ನಡೆಸಲಾಗಿದೆ. ಅಲ್ಲದೆ ಕ್ರಾಶ್ ಟೆಸ್ಟ್ ಪರೀಕ್ಷೆಗೂ ಇದನ್ನು ರವಾನಿಸಲಾಗುತ್ತಿದೆ. ಅತ್ಯಂತ ಬಿಸಿ ಹಾಗೂ ಚಳಿಯ ತಾಪಮಾನದಲ್ಲೂ ಇದರ ಪರೀಕ್ಷೆ ನಡೆಸಲಾಗಿದೆ ಎಂದಿದ್ದಾರೆ.

More from DriveSpark

Article Published On: Tuesday, November 18, 2014, 10:15 [IST]
English summary
Now Toyota has revealed their futuristic fuel cell vehicle, that they have christened as ‘Mirai'. During the initial stages its concept form was called the FC-V. In Japanese language the term ‘Mirai' translates to Future, which is an apt name for this vehicle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+