ಟೊಯೊಟಾ ಬಿಕ್ಕಟ್ಟು; ಕೆಲಸ ಪುನಾರರಂಭಕ್ಕೆ ಕಾರ್ಮಿಕರ ನಕಾರ
ಟೊಯೊಟಾ ಕಿರ್ಲೊಸ್ಕರ್ ಕಾರ್ಮಿಕರು ನಡೆಸುತ್ತಿರುವ ಮುಷ್ಕರ ಇನ್ನಷ್ಟು ಇಕ್ಕಟ್ಟಿನ ಪರಿಸ್ಥಿತಿಗೆ ಬಂದು ತಲುಪಿದೆ. ಬೆಂಗಳೂರಿನ ಹೊರವಲಯದ ಬಿಡದಿಯಲ್ಲಿ ಸ್ಥಿತಗೊಂಡಿರುವ ಕಂಪನಿಯ ಎರಡು ಘಟಕದ ಬೀಗ ಮುದ್ರೆಗಳನ್ನು ತೆರವುಗೊಳಿಸಲಾಗಿದ್ದು, ಸೋಮವಾರದಿಂದ ಕೆಲಸ ಪುನರಾರಂಭಿಸಲಾಗುವುದು ಎಂಬ ಕಂಪನಿ ಘೋಷಣೆ ಇದ್ದರೂ ಕಾರ್ಮಿಕರು ಮಾತ್ರ ಕೆಲಸಕ್ಕೆ ಹಾಜರಾಗದೇ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸೋಮವಾರ ಬೆಳಗ್ಗಯೇ ಘಟಕದ ಮುಂದೆ ಹಾಜರಾಗಿದ್ದ ಕಾರ್ಮಿಕರು, ಯಾವುದೇ ಕಾರಣಕ್ಕೂ ಕಂಪನಿಯ ಷರತ್ತುಗಳಿಗೆ ಸಹಿ ಹಾಕುವ ಪ್ರಶ್ನೆಯೇ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಸಾರಿದ್ದಾರೆ.

ಕೆಲಸಕ್ಕೆ ಆಗಮಿಸಿದ್ದ 500ರಷ್ಟು ಕಾರ್ಮಿಕರು ಹೇಳುವ ಪ್ರಕಾರ, ಮೊದಲ ಶಿಫ್ಟ್ ಅನ್ವಯ ಬೆಳಗ್ಗೆಯೇ ಕೆಲಸಕ್ಕೆ ಆಗಮಿಸಿದ್ದೆವು. ಆದರೆ ಆಡಳಿತ ಮಂಡಳಿ ಷರತ್ತಿಗೆ ಸಹಿ ಹಾಕುವಂತೆ ಒತ್ತಾಯಿಸಿದ್ದರು. ಸಹಿ ಹಾಕಿದ್ದಲ್ಲಿ ಮಾತ್ರ ಕೆಲಸಕ್ಕೆ ಹಾಜರಾಗಲು ಸಾಧ್ಯ ಎಂಬ ಬೇಡಿಕೆಯೊಡ್ಡಿದ್ದರು. ಯಾವುದೇ ಕಾರಣಕ್ಕೂ ಇದನ್ನು ಒಪ್ಪಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲ ಕಳೆದ ವಾರಂತ್ಯದಲ್ಲಿ ನಡೆದ ಸಂಧಾನ ಸಭೆಯಲ್ಲಿ ರು. 3,050ರಷ್ಟು ವೇತನ ಪರಿಷ್ಕರಣೆಗೆ ಕಂಪನಿ ಒಪ್ಪಿಗೆ ಸೂಚಿಸಿತ್ತು. ಈ ನಡುವೆ ಕೆಲಸದಿಂದ ತೆಗೆದು ಹಾಕಿರುವ 17 ಕೆಲಸಗಾರರನ್ನು ವಾಪಾಸ್ ಕರೆಯಿಸಿಕೊಳ್ಳುವಂತೆಯೂ ಕೆಲಸಗಾರರು ಒತ್ತಾಯ ಹೇರಿದ್ದಾರೆ.


Click it and Unblock the Notifications








