ಫೋಕ್ಸ್‌ವ್ಯಾಗನ್ 2ನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆ

By Nagaraja

ಜಗತ್ತಿನ ಕಾರು ಮಾರುಕಟ್ಟೆಯಲ್ಲಿ ತಮ್ಮ ಬ್ರಾಂಡ್ ಹೆಸರು ಉಳಿಸಿಕೊಂಡಿರುವ ಫೋಕ್ಸ್‌ವ್ಯಾಗನ್, ಅಮೆರಿಕ ಮೂಲದ ಜನರಲ್ ಮೋಟಾರ್ಸ್‌ನಂತಹ ಪ್ರಖ್ಯಾತ ವಾಹನ ಸಂಸ್ಥೆಯನ್ನು ಹಿಂದಿಕ್ಕುವ ಮೂಲಕ ಜಗತ್ತಿನಲ್ಲೇ ಎರಡನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಆದರೆ ಜರ್ಮನಿ ಹಾಗೂ ಅಮೆರಿಕದ ಈ ಎರಡೂ ಸಂಸ್ಥೆಗಳನ್ನು ಹಿಂದಿಕ್ಕಿರುವ ಟೊಯೊಟಾ ವಿಶ್ವದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯೆಂಬ ಕೀರ್ತಿ ಗಿಟ್ಟಿಸಿಕೊಂಡಿದೆ. 2013ನೇ ಸಾಲಿನ ಮಾರಾಟದ ಆಧಾರದಲ್ಲಿ ಪಟ್ಟಿ ತಯಾರಿಸಲಾಗಿದೆ.

 Volkswagen

2013ನೇ ವರ್ಷದಲ್ಲಿ ಫೋಕ್ಸ್‌ವ್ಯಾಗನ್ ಒಟ್ಟು 9.73 ಮಿಲಿಯನ್ ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದರಲ್ಲಿ ಜರ್ಮಿನಿಯ ಈ ಕಾರು ತಯಾರಕ ಸಂಸ್ಥೆಯ ಎಲ್ಲ ಸಹ ಬ್ರಾಂಡ್‌ಗಳು ಸೇರಿವೆ. ಅಂದರೆ ಸ್ಕಾನಿಯಾ, ಸೀಟ್, ಸ್ಕೋಡಾ, ಪೋರ್ಷೆ, ಆಡಿ, ಡುಕಾಟಿ, ಲಂಬೊರ್ಗಿನಿ, ಬೆಂಟ್ಲಿ, ಬುಕಾಟಿ ಮತ್ತು ಫೋಕ್ಸ್‌ವ್ಯಾಗನ್ ವಾಣಿಜ್ಯ ವಾಹನಗಳು ಇದರಲ್ಲಿದೆ.

2018ರ ವೇಳೆಗೆ 10 ಮಿಲಿಯನ್ ಯುನಿಟ್ ಮಾರಾಟ ಗುರಿಯಾಗಿರಿಸಿಕೊಂಡಿರುವ ಫೋಕ್ಸ್‌ವ್ಯಾಗನ್ ಜಗತ್ತಿನ ನಂ.1 ಕಾರು ತಯಾರಕ ಸಂಸ್ಥೆ ಪಟ್ಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಆದರೆ ಫೋಕ್ಸ್‌ವ್ಯಾಗನ್‌ಗೆ ಜಪಾನ್ ಮೂಲದ ಟೊಯೊಟಾದಿಂದ ನೇರ ಪೈಪೋಟಿ ಎದುರಾಗಲಿದೆ. ಯಾಕೆಂದರೆ ಕಳೆದ ವರ್ಷ 9.98 ಮಿಲಿಯನ್ ಯುನಿಟ್ ಟೊಯೊಟಾ ಮಾರಾಟ ಮಾಡಿದೆ. ಇನ್ನೊಂದೆಡೆ ಸ್ವಲ್ಪದರಲ್ಲೇ ನಂ.2 ಸ್ಥಾನ ಕಳೆದುಕೊಂಡಿರುವ ಜನರಲ್ ಮೋಟಾರ್ಸ್ 2013ರಲ್ಲಿ 9.71 ಮಿಲಿಯನ್ ಯುನಿಟ್ ಮಾರಾಟ ಮಾಡಿವೆ.

ಈ ಪೈಕಿ ಅತಿ ಹೆಚ್ಚು ಮಾರಾಟವಾದ ಟಾಪ್ ಹತ್ತರ ಪಟ್ಟಿಯಲ್ಲೂ ಫೋಕ್ಸ್‌ವ್ಯಾಗನ್ ಗಾಲ್ಫ್, ಫೋಕ್ಸ್‌ವ್ಯಾಗನ್ ಪ್ಯಾಸೆಟ್ ಮತ್ತು ಫೋಕ್ಸ್‌ವ್ಯಾಗನ್ ಬೀಟ್ಲ್ ಕಾಣಿಸಿಕೊಂಡಿದೆ.

More from DriveSpark

Article Published On: Saturday, February 1, 2014, 14:40 [IST]
English summary
Volkswagen beat rival General motors to the second place, in being the second largest car manufacturer in the world. Toyota took the cake by beating both the Germany and U.S.A, based on last years sales, which were revealed this friday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+