ಫೋಕ್ಸ್‌ವ್ಯಾಗನ್ ಬಜೆಟ್ ಕಾರು ಮೊದಲು ಚೀನಾದಲ್ಲಿ ಬಿಡುಗಡೆ

By Nagaraja

ಬಜೆಟ್ ಕಾರು ಬ್ರಾಂಡ್ ನಿರ್ಮಿಸುವ ಫೋಕ್ಸ್‌ವ್ಯಾಗನ್ ಕನಸು ಇನ್ನು ಹತ್ತಿರ ಸಮೀಪಿಸಿದೆ. ತಾಜಾ ವರದಿಗಳಂತೆಯೇ, ಯುರೋಪ್‌ನ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್, ಬಜೆಟ್ ಕಾರಿನ ಕಾನ್ಸೆಪ್ಟ್ ಹಾಗೂ ವಿನ್ಯಾಸಕ್ಕೆ ಸಂಬಂಧಿಸಿದಂತೆ ಅಂತಿಮ ಹಂತವನ್ನು ತಲುಪಿದೆ.

ಈ ಬಗ್ಗೆ ಬೀಜಿಂಗ್ ಆಟೋ ಶೋದಲ್ಲಿ ಮಾತನಾಡಿರುವ ಹ್ಯಾನ್ಸ್ ಡಿಮಂಟ್, ಬಜೆಟ್ ಕಾರು ಬ್ರಾಂಡ್ ಸಂಪೂರ್ಣವಾಗಿಯೂ ಚೀನಾದಲ್ಲೇ ಉತ್ಪಾದನೆಯಾಗಲಿದೆ ಎಂದಿದ್ದಾರೆ.

Volkswagen Budget Car

ಇದಕ್ಕೂ ಮೊದಲು ಫೋಕ್ಸ್‌ವ್ಯಾಗನ್ ಬಜೆಟ್ ಕಾರು ನಿರ್ಮಾಣ ಯೋಜನೆಗೆ ಹಲವಾರು ತೊಡಕುಗಳು ಎದುರಾಗಿದ್ದವು. ಯೋಜಿತ ಬಜೆಟ್‌ನಲ್ಲೇ ಕಾರಿನ ಗುಣಮಟ್ಟತೆ ಕಾಪಾಡಿಕೊಳ್ಳುವುದು ಹಾಗೂ ಆಂತರಿಕ ಸುರಕ್ಷತೆಗಳಂತಹ ವಿಚಾರಗಳನ್ನು ಎದುರಿಸಿತ್ತು.

ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಎಲ್ಲ ತೊಡಕುಗಳನ್ನು ನಿವಾರಿಸಿರುವ ಫೋಕ್ಸ್‌ವ್ಯಾಗನ್ ಬಜೆಟ್ ಕಾರು ಬ್ರಾಂಡ್‌ನ ಮೊದಲ ಮಾದರಿಯು 8300 ಅಮೆರಿಕನ್ ಡಾಲರ್‌ಗಳಿಂದ 11 ಅಮೆರಿಕನ್ ಡಾಲರ್‌ನಲ್ಲಿ ಚೀನಾವನ್ನು ತಲುಪಲಿದೆ.

ಕಡಿಮೆ ದರದ ಕಾರುಗಳು ಅತಿದೊಡ್ಡ ಮಾರುಕಟ್ಟೆಯನ್ನು ಹೊಂದಿರುವ ಚೀನಾ, ಫೋಕ್ಸ್‌ವ್ಯಾಗನ್ ಬಜೆಟ್ ಕಾರು ಬಿಡುಗಡೆಗೆ ಯೋಗ್ಯವೆನಿಸಿದೆ. ಇದೇ ಕಾರಣಕ್ಕಾಗಿ ಚೀನಾದಲ್ಲಿ ಮೊದಲು ಬಿಡುಗಡೆ ಮಾಡಲಿದೆ. ಹಾಗೆಯೇ ಮುಂಬರುವ ದಿನಗಳಲ್ಲಿ ಭಾರತ, ರಷ್ಯಾ ಹಾಗೂ ದಕ್ಷಿಣ ಪೂರ್ವ ರಾಷ್ಟ್ರಗಳಲ್ಲೂ ಬಜೆಟ್ ಕಾರು ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಎಲ್ಲದರ ಮೂಲಕ 2018ರ ವೇಳೆಯಾಗುವಾಗ ವಿಶ್ವದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಯೆನಿಸಿಕೊಳ್ಳುವುದು ಫೋಕ್ಸ್‌ವ್ಯಾಗನ್ ಗುರಿಯಾಗಿದೆ.

More from DriveSpark

Article Published On: Friday, May 2, 2014, 11:33 [IST]
English summary
Volkswagen's dream of creating a new budget car brand is one step closer to reality, going by a new report. Europe's largest automaker is said to have reached a final decision regarding the design and concept for its budget car.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+