ಫೋಕ್ಸ್‌ವ್ಯಾಗನ್ ಬಜೆಟ್ ಕಾರಿಗೆ ಗ್ರೀನ್ ಲೈಟ್
ಇದೀಗ ಎಲ್ಲವೂ ಅಂತಿಮಗೊಂಡಿದ್ದು, ಫೋಕ್ಸ್‌ವ್ಯಾಗನ್ ಬಜೆಟ್ ಕಾರು 2017ನೇ ಸಾಲಿನಲ್ಲಿ ಚೀನಾವನ್ನು ಪ್ರವೇಶಿಸಲಿದೆ. ತನ್ನದೇ ಆದ ವಿಶಿಷ್ಟ ಬ್ರಾಂಡ್‌ನಿಂದ ಗುರುತಿಸಲ್ಪಡುವ ಫೋಕ್ಸ್‌ವ್ಯಾಗನ್ ಬಜೆಟ್ ಕಾರು ಚೀನಾದಲ್ಲಿ 5.69 ಲಕ್ಷ ರು.ಗಳಷ್ಟು ದುಬಾರಿಯಾಗಲಿದೆ.
ಎಸ್‌ಎಐಸಿ ಜತೆ ಸೇರಿಕೊಂಡು ಫೋಕ್ಸ್‌ವ್ಯಾಗನ್ ಬಜೆಟ್ ಕಾರು ಆಗಮನವಾಗಲಿದೆ. ಫೋಕ್ಸ್‌ವ್ಯಾಗನ್ ಈಗಾಗಲೇ, ಸ್ಯಾಂಟಾನಾ, ಪ್ಯಾಸೆಟ್, ಲೇವಿಡಾ ಹಾಗೂ ಟೈಗುನ್‌ಗಾಗಿ ಎಸ್‌ಎಐಸಿ ಜೊತೆ ಪಾಲುದಾರಿಕೆ ಹೊಂದಿತ್ತು.

ಬಲ್ಲ ಮೂಲಗಳ ಪ್ರಕಾರ ಸ್ಯಾಂಟಾನಾ ಫ್ಲ್ಯಾಟ್‌ನಲ್ಲಿ ನೂತನ ಕಾರು ತಯಾರಾಗಲಿದೆ. 2013ನೇ ಸಾಲಿನಲ್ಲಿ ಚೀನಾ ಮಾರುಕಟ್ಟೆಯನ್ನು ಮುನ್ನಡೆಸಿರುವ ಫೋಕ್ಸ್‌ವ್ಯಾಗನ್ 3.27 ಯುನಿಟ್ ಮಾರಾಟ ಮಾಡುವ ಮೂಲಕ ಶೇಕಡಾ 16ರಷ್ಟು ಏರಿಕೆ ದಾಖಲಿಸಿತ್ತು.
ಅಲ್ಲದೆ ಚೀನಾದಲ್ಲಿ ಮುಂದಿನ ನಾಲ್ಕು ವರ್ಷಗಳಿಗೆ 14,799 ಹೂಡಿಕೆಯನ್ನು ಫೋಕ್ಸ್‌ವ್ಯಾಗನ್ ಸಂಸ್ಥೆ ಘೋಷಿಸಿದೆ.


Click it and Unblock the Notifications








