2015ರಲ್ಲಿ ಫೋಕ್ಸ್‌ವ್ಯಾಗನ್ ಜೆಟ್ಟಾ ಫೇಸ್‌ಲಿಫ್ಟ್ ಎಂಟ್ರಿ
ಫೋಕ್ಸ್‌ವ್ಯಾಗನ್ ಜೆಟ್ಟಾ ಇನ್ನೊಂದು ವರ್ಷದಲ್ಲಿ ಹೊಸ ರೂಪ ಪಡೆದುಕೊಳ್ಳಲಿದೆ. ವರದಿಗಳ ಪ್ರಕಾರ ಫೋಕ್ಸ್‌ವ್ಯಾಗನ್ ಜೆಟ್ಟಾ ಫೇಸ್‌ಲಿಫ್ಟ ವರ್ಷನ್ 2015ರಲ್ಲಿ ಆಗಮನವಾಗಲಿದೆ.
ಹೆಚ್ಚು ಐಷಾರಾಮಿ ಇಂಟಿರಿಯರ್ ವೈಶಿಷ್ಟ್ಯಗಳನ್ನು ನೂತನ ಜೆಟ್ಟಾ ಪಡೆದುಕೊಳ್ಳಲಿದೆ. ಇತ್ತೀಚೆಗಷ್ಟೇ ಆಯೋಜನೆಯಾಗಿದ್ದ ನ್ಯೂಯಾರ್ಕ್ ಮೋಟಾರು ಶೋದಲ್ಲೂ ನೂತನ ಜೆಟ್ಟಾ ಕಾರನ್ನು ಫೋಕ್ಸ್‌ವ್ಯಾಗನ್ ಪ್ರದರ್ಶಿಸಿತ್ತು.

ನೂತನ 2015 ಜೆಟ್ಟಾ, 2.0 ಲೀಟರ್ ಡೀಸೆಲ್ ಟಿಡಿಐ ಎಂಜಿನ್ ಪಡೆದುಕೊಳ್ಳಲಿದೆ. ಇದು ಹಿಂದಿನ ಆವೃತ್ತಿಗಿಂತಲೂ 10 ಅಶ್ವಶಕ್ತಿ ಹೆಚ್ಚು ಉತ್ಪಾದಿಸಲಿದೆ.
ಹಾಗೆಯೇ ಫ್ರಂಟ್ ಗ್ರಿಲ್ ಹಾಗೂ ಹೆಡ್‌ಲೈಟ್ ನೋಟದಲ್ಲೂ ಬದಲಾವಣೆ ಕಂಡುಬರಲಿದೆ. ಇದರಲ್ಲಿ ಎಲ್‌ಇಡಿ ರನ್ನಿಂಗ್ ಲೈಟ್ಸ್ ಇರಲಿದೆ. ಹಾಗೆಯೇ 2015 ಫೋಕ್ಸ್‌ವ್ಯಾಗನ್ ಜೆಟ್ಟಾ ಬಂಪರ್ ಕ್ರೀಡಾತ್ಮಕ ವಿನ್ಯಾಸ ಕಾಪಾಡಿಕೊಳ್ಳಲಿದೆ.


Click it and Unblock the Notifications








