ದೈಹಿಕ ಅಸಮರ್ಥರ ನೆರವಿಗೆ ಫೋಕ್ಸ್‌ವ್ಯಾಗನ್
ವಾಹನ ತಯಾರಕ ಸಂಸ್ಥೆಗಳು ಸಹ ಸಾಮಾಜಿಕ ಕಳಕಳಿಯನ್ನು ಹೊಂದಿರುತ್ತದೆ ಎಂಬುದಕ್ಕೆ ಇಂದೊಂದು ಉತ್ತಮ ಉದಾಹರಣೆಯಾಗಿದೆ. ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್ ಇಂಡಿಯಾ, ದೈಹಿಕ ಅಸಮರ್ಥರ ನೆರವಿಗಾಗಿ ಆಯೋಜಿಸಲಾಗಿರುವ ವಿಂಗ್ಸ್ ಫಾರ್ ಲೈಫ್ ವರ್ಲ್ಡ್ ರನ್ ಮ್ಯಾರಥನ್‌ಗೆ ಕ್ಯಾಚರ್ಸ್ ಕಾರು ಒದಗಿಸುವ ಮೂಲಕ ಸಹಾಯ ಹಸ್ತ ಚಾಚಿದೆ.
ಫೋಕ್ಸ್‌ವ್ಯಾಗನ್‌ನ ಕ್ಯಾಚರ್ಸ್ ಎಸ್‌ಯುವಿ ಕಾರು, ಸಹಾಯ ವಾಹನವಾಗಿದ್ದು, ಮ್ಯಾರಾಥನ್ ವೇಳೆ ಓಟಗಾರರ ಹಿಂದೆಯೇ ಚಲಿಸುತ್ತಾ ಅಗತ್ಯ ನೆರವುಗಳನ್ನು ಒದಗಿಸಿದೆ.

ನಡೆದಾಡಲು ಸಾಧ್ಯವಾಗದ ಜನರಿಗಾಗಿ ಈ ಮ್ಯಾರಾಥನ್ ಓಟವನ್ನು ವಿಶ್ವದ್ಯಾಂತ ಹಮ್ಮಿಕೊಳ್ಳಲಾಗಿದ್ದು, 164 ರಾಷ್ಟ್ರಗಳ 50,000ಕ್ಕೂ ಮಂದಿ ತಮ್ಮ ಹೆಸರು ನೊಂದಾಯಿಸಿಕೊಂಡಿದ್ದಾರೆ. ಇದು ಆರು ಖಂಡಗಳ 32 ದೇಶಗಳನ್ನು ಸುತ್ತಾಡಲಿದೆ.
ಇದರಲ್ಲಿ ಸಂಗ್ರಹಿಸಲಾಗುವ ನಿಧಿಯನ್ನು ವಿಂಗ್ಸ್ ಫಾರ್ ಲೈಫ್ ಸಹಾಯಾರ್ಥ ಸಂಸ್ಥೆ ಬೆನ್ನುಹುರಿ ಗಾಯದಿಂದ ನರಳುತ್ತಿರುವವರ ಸಂಶೋಧನೆಗಾಗಿ ಬಳಸಿಕೊಳ್ಳಲಾಗುವುದು.

ಇದರಂತೆ ಭಾರತದಲ್ಲಿ ಹರಿಯಾಣಕ್ಕೆ ಮೇ 4ರಂದು ವಿಂಗ್ಸ್ ಫಾರ್ ಲೈಫ್ ವರ್ಲ್ಡ್ ರನ್ ಪ್ರವೇಶಿಸಿತ್ತು. ಇದಕ್ಕೆ ಹರಿಯಾಣ ರಾಜ್ಯ ಸರಕಾರ ಹಾಗೂ ಹರಿಯಾಣ ಒಲಿಂಪಿಕ್ಸ್ ಸಂಸ್ಥೆ ಸಹ ಬೆಂಬಲ ಘೋಷಿಸಿತ್ತು.
ಈ ಸಂದರ್ಭದಲ್ಲಿ ಸಾವಿರಾರು ಅಥ್ಲೀಟ್‌ಗಳು ಭಾಗವಹಿಸಿದ್ದರು. ಬ್ಯಾಡ್ಮಿಂಟನ್ ಡಬಲ್ಸ್ ಆಟಗಾರ್ತಿ ಅಶ್ವಿನಿ ಪೊನ್ನಪ್, ಮಹಿಳಾ ಗ್ರಾಂಡ್ ಮಾಸ್ಟರ್ ತನಿಯಾ ಸಚ್‌ದೇವ್, ಒಲಿಂಪಿಯನ್ ಯೋಗೇಶ್ವರ ದತ್, ಅರ್ಜುನ ಪ್ರಶಸ್ತಿ ವಿಜೇತ ರಾಜ್‌ಕುಮಾರ್ ಸಾಂಗ್ವಾನ್, ಭಾರತ ಹಾಕಿ ತಂಡದ ಮಾಜಿ ನಾಯಕಿ ಪ್ರಿತಮ್ ರಾಣಿ ಸಿವಾಚ್ ಮತ್ತು ಮಮ್ತಾ ಕರಾಬ್, ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನಿಶಾ ಸೈಯದ್ ಮತ್ತು ಅರ್ಜುನ ಪ್ರಶಸ್ತಿ ವಿಜೇತ ಕುಸ್ತಿಪಟು ರಾಜೆಂಧರ್ ಕುಮಾರ್ ಸಹ ಉಪಸ್ಥಿತರಿದ್ದರು.

ಮ್ಯಾರಾಥನ್ ವಿಜೇತರು - 2014 ಭಾರತ (ಚಿತ್ರಗಳಲ್ಲಿ)
ಪುರಷ ವಿಭಾಗ- ಐಸಾಕ್ ಕಿಪೆರ್‌ನಾಯ್ (ಕೀನ್ಯಾ)
ಮಹಿಳಾ ವಿಭಾಗ - ವಹಿದಾ ರಹಮಾನ್ (ಭಾರತ)


Click it and Unblock the Notifications








