ಫೋಕ್ಸ್‌ವ್ಯಾಗನ್ ಟೋರೆಗ್ ಮತ್ತು ಬೀಟ್ಲ್ ಮರು ಲಾಂಚ್?
ಇತರ ಕಾರು ತಯಾರಕ ಸಂಸ್ಥೆಗಳ ವಿಭಿನ್ನವಾಗಿ ಫೋಕ್ಸ್‌ವ್ಯಾಗನ್ ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ನೂತನ ಮಾದರಿಗಳನ್ನು ಪರಿಚಯಿಸಲು ಉತ್ಸುಕವಾಗಿದೆ. ಜರ್ಮನಿಯ ಈ ವಾಹನ ತಯಾರಕ ಸಂಸ್ಥೆಯಿಂದ ಮಗದೊಂದು ಶುಭ ಸುದ್ದಿ ಬಂದಿದ್ದು, ಐಕಾನಿಕ್ ಟೋರೆಗ್ ಹಾಗೂ ಬೀಟ್ಲ್ ಆವೃತ್ತಿಗಳು ದೇಶಕ್ಕೆ ಮರು ಪರಿಚಯವಾಗಲಿದೆ.
ಕೇವಲ ದರ ಕಡಿಮೆ ಮಾಡುವುದಕೋಸ್ಕರ ತನ್ನ ಗುಣಮಟ್ಟತೆ ಹಾಗೂ ಸಾಮರ್ಥ್ಯದ ವಿಚಾರದಲ್ಲಿ ಯಾವುದೇ ರಾಜಿಗೂ ತಯಾರಾಗದ ಫೋಕ್ಸ್‌ವ್ಯಾಗನ್, ಶ್ರೇಷ್ಠ ಮಾದರಿಗಳನ್ನು ದೇಶಕ್ಕೆ ಪರಿಚಯಿಸುವ ಯೋಜನೆಯನ್ನು ಸಹ ಹೊಂದಿದೆ.

ಮುಂಬರುವ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಸ್ಮರ್ಧೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಫೋಕ್ಸ್‌ವ್ಯಾಗನ್ ನೂತನ ಮಾದರಿಗಳನ್ನು ಪರಿಚಯಸಲಿದೆ. ಇದರಲ್ಲಿ ಬಜೆಟ್ ಕಾರುಗಳು ಸಹ ಸೇರಿಕೊಂಡಿರಲಿದೆ.
ಮಗದೊಂದು ಕಡೆ ಪ್ರೀಮಿಯಂ ಸ್ಥಾನಮಾನ ಕಾಪಾಡಿಕೊಂಡು ಹೋಗುವ ಜವಾಬ್ದಾರಿಯೂ ಸಂಸ್ಥೆ ಮೇಲಿದೆ. ಈ ನಿಟ್ಟಿನಲ್ಲಿ ಟೋರೆಗ್ ಹಾಗೂ ಬೀಟ್ಲ್ ಮಗದೊಮ್ಮೆ ದೇಶದ ರಸ್ತೆಗಳಲ್ಲಿ ಸದ್ದು ಮಾಡುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ನಿಮ್ಮ ಮಾಹಿತಿಗಾಗಿ, ಈ ಹಿಂದೆಯೂ ದೇಶಕ್ಕೆ ಪರಿಚಯವಾಗಿದ್ದ ಟೋರೆಗ್ ಹಾಗೂ ಬೀಟ್ಲ್ ಮಾದರಿಗಳನ್ನು ಕಳಪೆ ಮಾರಾಟದಿಂದಾಗಿ ನಿಲುಗಡೆಗೊಳಿಸಲಾಗಿತ್ತು. ಈ ನಿರ್ದಿಷ್ಟ ಮಾದರಿಗಳನ್ನು ಸ್ಮರ್ಧಾತ್ಮಕ ದರಗಳಲ್ಲಿ ಮಾರಾಟ ಮಾಡುವ ನಿಟ್ಟಿನಲ್ಲಿ ದೇಶಿಯವಾಗಿ ಜೋಡಣೆ ಮಾಡುವ ಯೋಜನೆಯು ಫೋಕ್ಸ್‌ವ್ಯಾಗನ್ ಪರಿಗಣನೆಯಲ್ಲಿದೆ. ಟೋರೆಗ್ ಹಾಗೂ ಬೀಟ್ಲ್ ಜತೆಗೆ ಟೈಗನ್ ಕಾಂಪಾಕ್ಟ್ ಎಸ್‌ಯುವಿ ಸಹ ಫೋಕ್ಸ್‌ವ್ಯಾಗನ್ ಪಟ್ಟಿಯಲ್ಲಿದೆ.


Click it and Unblock the Notifications








