ಫೋಕ್ಸ್‌ವ್ಯಾಗನ್ ವೆಂಟೊ ಫೇಸ್‌ಲಿಫ್ಟ್ ಬಿಡುಗಡೆಗೆ ವೇದಿಕೆ ಸಿದ್ಧ

By Nagaraja

ದೀಪಾವಳಿ ಹಬ್ಬದ ಆವೃತ್ತಿ ಸಮೀಪಿಸುತ್ತಿರುವಂತೆಯೇ ದೇಶದ ಪ್ರಮುಖ ವಾಹನ ತಯಾರಕ ಸಂಸ್ಥೆಗಳು ಸಹ ತಾಜಾ ಹಾಗೂ ಅಪ್‌ಗ್ರೇಡ್ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದರಲ್ಲಿ ತಲ್ಲೀನವಾಗಿದೆ.

ಇದರಂತೆ ಜರ್ಮನಿಯ ಪ್ರೀಮಿಯಂ ವಾಹನ ತಯಾರಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್ ತನ್ನ ವೆಂಟೊ ಫೇಸ್‌ಲಿಫ್ಟ್ ಮಾದರಿಯನ್ನು ಮುಂಬರುವ 2014 ಸೆಪ್ಟೆಂಬರ್ 24ರಂದು ಬಿಡುಗಡೆ ಮಾಡಲಿದೆ.

 Volkswagen Vento facelift

ವಿಶೇಷವೆಂದರೆ ಸ್ಕೋಡಾದ ಬಹುನಿರೀಕ್ಷಿತ ರಾಪಿಡ್ ಮಾದರಿಗಿಂತಲೂ ಒಂದು ವಾರದ ಮುಂಚಿತವಾಗಿ ಸ್ಕೋಡಾ ವೆಂಟೊ ಪ್ರವೇಶ ಕಾಣಲಿದೆ. ಅಲ್ಲದೆ ಹೊಸತಾದ ಡಿಎಸ್‌ಜಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಡೀಸೆಲ್ ಮಾದರಿ ಬಿಡುಗಡೆಯನ್ನು ವಾಹನ ಪ್ರೇಮಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಸಿ ಸೆಗ್ಮೆಂಟ್ ಪ್ರೀಮಿಯಂ ಸೆಡಾನ್ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ, ಹ್ಯುಂಡೈ ವರ್ನಾ, ಫೋರ್ಡ್ ಫಿಯೆಸ್ಟಾ, ಫಿಯೆಟ್ ಲಿನಿಯಾ, ನಿಸ್ಸಾನ ಸನ್ನಿ, ರೆನೊ ಸ್ಕಾಲಾ ಮತ್ತು ಇನ್ನಷ್ಟೇ ಬಿಡುಗಡೆಯಾಗಲಿರುವ ಮಾರುತಿ ಸಿಯಾಝ್ ಮಾದರಿಗಳಿಗೆ ಹೊಸ ಫೋಕ್ಸ್‌ವ್ಯಾಗನ್ ವೆಂಟೊ ಪ್ರತಿಸ್ಪರ್ದೆಯಾಗಲಿದೆ.

2014 ಫೋಕ್ಸ್‌ವ್ಯಾಗನ್ ವೆಂಟೊ 1.5 ಟಿಡಿಐ ಒಯಿಲ್ ಬರ್ನರ್ 105 ಅಶ್ವಶಕ್ತಿ (250 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಜೊತೆಗೆ 6 ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಇರಲಿದೆ.

More from DriveSpark

Article Published On: Saturday, September 20, 2014, 15:38 [IST]
English summary
Volkswagen Vento facelift Launching Soon ahead of festival session.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+