ಫೋಕ್ಸ್‌ವ್ಯಾಗನ್ ವೆಂಟೊ ಪ್ರಿಫೇರ್ಡ್ ಎಡಿಷನ್ ಲಾಂಚ್
2013ನೇ ಸಾಲಿನಲ್ಲಿ ಫೋಕ್ಸ್‌ವ್ಯಾಗನ್ ವೆಂಟೊ ಸೆಡಾನ್ ಕಾರು ನಿರೀಕ್ಷಿಸಿದಷ್ಟು ಯಶ ಸಾಧಿಸಲಿಲ್ಲ. ಹಾಗಿರುವಂತೆಯೇ ನೂತನ ವೆಂಟೊ ಪ್ರಿಫೇರ್ಡ್ ಎಡಿಷನ್ ಅನ್ನು ಈ ಜರ್ಮನಿಯ ಮೂಲದ ವಾಹನ ತಯಾರಕ ಸಂಸ್ಥೆಯು ಲಾಂಚ್ ಮಾಡಿದೆ. ಕಂಫರ್ಟ್‌ಲೈನ್ ಡೀಸೆಲ್ ವೆರಿಯಂಟ್‌ನಲ್ಲಿ ಮಾತ್ರ ಈ ನೂತನ ಎಡಿಷನ್ ಲಭ್ಯವಿರಲಿದೆ. ಇದು ಕೆಲವೊಂದು ಕಾಸ್ಮೆಟಿಕ್ ಬದಲಾವಣೆ ಪಡೆದುಕೊಂಡಿದೆ.
ಕಾರಿನ ಹೊರಗಡೆ ವಿಂಡೋ ಬದಿಗಳಲ್ಲಿ ಕ್ರೋಮ್ ಟ್ರಿಮ್, ಸೈಡ್ ಡೌರ್ ಪ್ರೊಟೆಕ್ಟರ್ ಬೂಟ್ ಸ್ಪಾಯ್ಲರ್ ಹಾಗೂ ಅಲಾಯ್ ವೀಲ್ಸ್ ಪಡೆದುಕೊಂಡಿದೆ. ಹಾಗೆಯೇ ಬೂಟ್ ಲಿಡ್‌ನಲ್ಲಿ ಫ್ರಿಫೇರ್ಡ್ ಬ್ಯಾಡ್ಜ್ ಕೂಡಾ ಇರಲಿದೆ.

ಇನ್ನು ಕಾರಿನೊಳಗೆ ರಿವರ್ಸ್ ಕ್ಯಾಮೆರಾ, ನೇವಿಗೇಷನ್ ಸಿಸ್ಟಂ ಹಾಗೂ ಡೋರ್ ಸ್ಟೆಪ್ ಸಿಲ್ ಪ್ಲೇಟ್ ಹೊಂದಿರಲಿದೆ. ಇವೆಲ್ಲದರ ಜತೆಗೆ ಒಂದು ವರ್ಷದ ವರೆಗೆ ಉಚಿತ ವಿಮಾ ಸೌಲಭ್ಯ ಹಾಗೂ ನಾಲ್ಕು ವರ್ಷಗಳ ವರೆಗೆ ರೋಡ್ ಸೈಡ್ ಅಸಿಸ್ಟಂಟ್ ಸೇವೆ ಲಭ್ಯವಿರಲಿದೆ.
ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದು 1.6 ಲೀಟರ್, 4 ಸಿಲಿಂಡರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಳಳ್ಳಲಿದೆ. ಅಂತಿಮವಾಗಿ ದರದ ಬಗ್ಗೆ ಮಾತನಾಡುವುದಾದ್ದಲ್ಲಿ ನೂತನ ವೆಂಟೊ ಪ್ರಿಫೇರ್ಡ್ ಎಡಿಷನ್ ಮುಂಬೈ ಎಕ್ಸ್ ಶೋ ರೂಂ ದರ 10.74 ಲಕ್ಷ ರು.ಗಳಾಗಿವೆ.
ಮಗದೊಂದು ಗಮನಾರ್ಹ ಬೆಳವಣಿಯೊಂದರಲ್ಲಿ ಕಳಪೆ ಮಾರಾಟದ ಹಿನ್ನಲೆಯಲ್ಲಿ ಫೋಕ್ಸ್‌ವ್ಯಾಗನ್ ಪೊಲೊ ಹಾಗೂ ವೆಂಟೊ ಬೇಸ್ ವೆರಿಯಂಟ್ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ.
ಇಂದಿನ ಫೇಸ್‌ಬುಕ್ ಲೇಖನ


Click it and Unblock the Notifications








