ದೋಷಪೂರಿತ ವಿನ್ಯಾಸ; ವೋಲ್ವೋ ರಸ್ತೆ ಸಂಚಾರಕ್ಕೆ ಯೋಗ್ಯವಲ್ಲ!
ಬೆಂಗಳೂರಿನಿಂದ ಹೈದರಾಬಾದ್ ಕಡೆಗೆ ತೆರಳಿದ್ದ ವೋಲ್ವೋ ಬಸ್‌ವೊಂದು ಆಗ್ನಿ ದುರಂತಕ್ಕೀಡಾಗಿರುವ ಘಟನೆ ನಮ್ಮ ನಿಮ್ಮೆಲ್ಲರಿಂದ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಪ್ರಸ್ತುತ ದುರಂತ ಬಗ್ಗೆ ತನಿಖಾ ನಡೆಸುತ್ತಿರುವ ಆಂಧ್ರ ಪ್ರದೇಶದ ಪೊಲೀಸ್ ಅಪರಾಧ ತನಿಖೆ ವಿಭಾಗ (ಸಿಐಡಿ), ವೋಲ್ವೋ ಬಸ್ ರಸ್ತೆ ಸಂಚಾರಕ್ಕೆ ಯೋಗ್ಯವಲ್ಲ ಎಂಬ ಆಶ್ಚರ್ಯಕರ ವಿಚಾರವನ್ನು ಹೊರತಂದಿದೆ.
ವೋಲ್ವೋ ಬಸ್ಸಿನ ಸುರಕ್ಷತೆ ಬಗ್ಗೆ ಅರಿಯಿರಿ
ನಿಮಗೆಲ್ಲರಿಗೂ ತಿಳಿದಿರುವಂತೆಯೇ ಸ್ವೀಡನ್‌ನ ಐಷಾರಾಮಿ ವೋಲ್ವೋ ಬಸ್ಸುಗಳನ್ನು ನಮ್ಮ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕರಾರಸಾನಿ) ಸೇರಿದಂತೆ ಹಲವಾರು ಖಾಸಗಿ ಸಂಸ್ಥೆಗಳು ತಮ್ಮ ಸೇವೆಗಾಗಿ ಬಳಸಿಕೊಳ್ಳುತ್ತಿದೆ. ಆದರೆ 2013 ಅಕ್ಟೋಬರ್ 30ರಂದು ಸಂಭವಿಸಿರುವ ಬಸ್ ದುರಂತದ ಬಗ್ಗೆ ತನಿಖೆ ನಡೆಸಿರುವ ಸಿಐಡಿ ಬೆರಗುಗೊಳಿಸುವಂತಹ ಮಾಹಿತಿಗಳನ್ನು ಬೆಳಕಿಗೆ ತಂದಿವೆ.

ದೋಷಪೂರಿತ ವಿನ್ಯಾಸ ವೋಲ್ವೋ ದುರಂತಕ್ಕೆ ಕಾರಣ
ಈ ಬಗ್ಗೆ ವರದಿ ಮಾಡಿರುವ ಸಿಐಡಿ, ದೋಷಪೂರಿತ ವಿನ್ಯಾಸವೇ ವೋಲ್ವೋ ಬಸ್ ದುರಂತಕ್ಕೀರುವ ಪ್ರಮುಖ ಕಾರಣ ಎಂದಿದೆ. ಅಲ್ಲದೆ ಚಾಲಕರ ನಿರ್ಲಕ್ಷ್ಯ ಮತ್ತು ಅಸಮರ್ಪಕ ರಸ್ತೆ ನಿರ್ವಹಣೆಯೂ ಅಪಘಾತಕ್ಕಿರುವ ಇತರ ಎರಡು ಪ್ರಮುಖ ಕಾರಣಗಳಾಗಿ ಪಟ್ಟಿ ಮಾಡಿವೆ.

ವೋಲ್ವೋ ಆರೋಪಿ
ಬಸ್ ದುರಂತದಲ್ಲಿ ವೋಲ್ವೋ ಸಂಸ್ಥೆಯನ್ನು ಸಹ ಆರೋಪ ಪಟ್ಟಿಯಲ್ಲಿ ಸೇರಿಸಿರುವ ತನಿಖಾ ಸಂಸ್ಥೆ, ಈ ನಿಟ್ಟಿನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಿದ್ದೇವೆ ಎಂದು ಹೆಚ್ಚುವರಿ ಮಾಹಾ ನಿರ್ದೇಶಕ (ಸಿಐಡಿ) ಟಿ. ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.

ಏನಿದು ದುರಂತ ಘಟನೆ?
ಕಳೆದ ವರ್ಷ ಅಕ್ಟೋಬರ್ 30ರಂದು ಬೆಂಗಳೂರಿನಿಂದ ಹೈದಾರಾಬಾದ್‌ಗೆ ಹೊರಟಿದ್ದ ಜಬ್ಬರ್ ಟ್ರಾವೆಲ್ಸ್‌ನ ವೋಲ್ವೋ ಬಸ್ ಆಂಧ್ರಪ್ರದೇಶದ ಮೆಹಬೂಬ್ ನಗರ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಅಡ್ಡಗಾಲುವೆಗೆ ಢಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿತು. ಕ್ಷಣಾರ್ಧದಲ್ಲೇ ಇಡೀ ಬಸ್ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಪ್ರಕರಣದಲ್ಲಿ 45 ಪ್ರಯಾಣಿಕರು ಸ್ಥಳದಲ್ಲೇ ಜೀವವನ್ನು ಕಳೆದುಕೊಂಡಿದ್ದರು.

ವೋಲ್ವೋ ರಸ್ತೆ ಸಂಚಾರಕ್ಕೆ ಯೋಗ್ಯವಲ್ಲ
ಇದೇ ಸಂದರ್ಭದಲ್ಲಿ ಮಗದೊಂದು ಅತಿ ಮುಖ್ಯ ವಿಚಾರವನ್ನು ಬೊಟ್ಟು ಮಾಡಿರುವ ಸಿಐಡಿ ತನಿಖಾ ತಂಡವು, ವೋಲ್ವೋ ಬಸ್ ದೋಷಪೂರಿತ ವಿನ್ಯಾಸ ಹೊಂದಿರುವುದಷ್ಟೇ ಅಲ್ಲದೆ ರಸ್ತೆ ಸಂಚಾರಕ್ಕೆ ಯೋಗ್ಯವಲ್ಲ. ಹಾಗಾಗಿ ತಕ್ಷಣವೇ ವೋಲ್ವೋ ರಸ್ತೆ ಸಂಚಾರವನ್ನು ತಡೆಗಟ್ಟಬೇಕಾಗಿದೆ ಎಂಬುದನ್ನು ತಿಳಿಸಿದೆ.

ಬೆಂಕಿ ಹೇಗೆ ಕಾಣಿಸಿಕೊಂಡಿತು?
ವೋಲ್ವೋ ಬಸ್ಸಿನ ಪ್ರಾಥಮಿಕ ಹಾಗೂ ಎರಡನೆಯ ಇಂಧನ ಟ್ಯಾಂಕ್ ಬ್ಯಾಟರಿ ಕಂಪಾರ್ಟ್‌ಮೆಂಟ್ ಹಾಗೂ ರಸ್ತೆಗೆ ಅತಿ ಸಮೀಪದಲ್ಲಿತ್ತು. ಬಸ್ ಅಡ್ಡಗಾಲುವೆಗೆ ಢಿಕ್ಕಿ ಹೊಡೆದ ಸಂದರ್ಭದಲ್ಲಿ ಕಬ್ಬಿಣದ ಕೊಳವೆಯೊಂದು ತೂರಿ ಬಂದ ಪರಿಣಾಮ ಇಂಧನ ಚೆಲ್ಲಿಕೊಂಡಿತ್ತು. ಈ ಸಂದರ್ಭದಲ್ಲಿ ಬ್ಯಾಟರಿ ಕಂಪಾರ್ಟ್‌ನಲ್ಲಿ ಕಾಣಿಸಿಕೊಂಡ ಬೆಂಕಿಯ ಕಿಡಿಯಿಂದಾಗಿ ಫ್ಲ್ಯಾಸಿಕ್ಟ್‌ನಿಂದ ಮಾಡಿದ ಇಂಧನ ಟ್ಯಾಂಕ್‌ಗೂ ಬೆಂಕಿ ಹೊತ್ತಿಕೊಂಡಿರುವುದಾಗಿ ತಿಳಿಸಿದೆ.

ತುರ್ತು ಬಾಗಿಲಿಗೆ ಅಡ್ಡಗಾಲು
ಹೆಚ್ಚಿನ ಆದಾಯ ಗಳಿಸುವ ನಿಟ್ಟಿನಲ್ಲಿ ತುರ್ತು ನಿರ್ಗಮನದ ಬಾಗಿಲಿಗೆ ಅಡ್ಡವಾಗಿ ಆಸನ ಲಗತ್ತಿಸಿರುವುದು ಹಾಗೆಯೇ ಇದಕ್ಕಾಗಿ ಬಸ್ಸಿನ ಒಳಾಂಗಣ ವಿನ್ಯಾಸವನ್ನು ಬದಲಾಯಿಸುವ ಮೂಲಕ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯಲು ಬಸ್ ಮಾಲಿಕರು ಹಾಗೂ ನಿರ್ವಾಹಕರು ಶ್ರಮಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಅಸಮರ್ಪಕ ರಸ್ತೆ, ಚಾಲಕನ ನಿರ್ಲಕ್ಷ್ಯ
ಅಸಮರ್ಪಕ ರಸ್ತೆ ಹಾಗೂ ಚಾಲಕ ನಿರ್ಲಕ್ಷ್ಯವೂ ವೋಲ್ವೋ ಬಸ್ ದುರಂತಕ್ಕೀರುವ ಕಾರಣಗಳಾಗಿವೆ ಎಂಬುದನ್ನು ಸಿಐಡಿ ತಿಳಿಸಿದೆ. ಹಾಗೆಯೇ ಪಿವಿಸಿ ಇಂಟಿರಿಯರ್‌ನಿಂದಾಗಿ ಬೆಂಕಿ ಸುಲಭವಾಗಿ ಹರಡಲು ಸಾಧ್ಯವಾಗಿತ್ತು ಎಂಬುದನ್ನು ವರದಿಯಲ್ಲಿ ತಿಳಿಸಿದೆ.


Click it and Unblock the Notifications








