ಬರುತ್ತಿದೆ ಅಯಸ್ಕಾಂತ ನಿಯಂತ್ರಿತ ವೋಲ್ವೋ ಸ್ವಯಂಚಾಲಿತ ಕಾರು

By Nagaraja

ನಿಮಗೆಲ್ಲರಿಗೂ ತಿಳಿದಿರುವ ಹಾಗೆಯೇ, ವೋಲ್ವೋ ಸಂಸ್ಥೆಯು ನೂತನ ಸ್ವಯಂಚಾಲಿತ ಕಾರನ್ನು ಅಭಿವೃದ್ಧಿಪಡಿಸುವುದರಲ್ಲಿ ತಲ್ಲೀನವಾಗಿದೆ. ಇದರಲ್ಲಿ ಆಳವಡಿಸಲಾಗಿರುವ ಆಧುನಿಕ ತಂತ್ರಾಂಶಗಳು ಭವಿಷ್ಯದ ಸಂಚಾರವನ್ನು ಇನ್ನಷ್ಟು ಸುಲಭವಾಗಿಸಲಿದೆ.

ವೋಲ್ವೋ ಜತೆಗೆ ಜಗತ್ತಿನ ಇತರ ವಾಹನ ತಯಾರಕ ಸಂಸ್ಥೆಗಳು ಸಹ ತಮ್ಮ ತಮ್ಮ ಸ್ವಯಂಚಾಲಿತ ಕಾರುಗಳ ಅಭಿವೃದ್ಧಿಯಲ್ಲಿ ತೊಡಗಿವೆ. ಆದರೆ ಅವುಗಳೆಲ್ಲ ಇದಕ್ಕಾಗಿ ಜಿಪಿಎಸ್, ಕ್ಯಾಮೆರಾ ಹಾಗೂ ರಾಡಾರ್‌ಗಳ ನೆರವು ಪಡೆದಿತ್ತು.

Volvo

ಮೇಲೆ ತಿಳಿಸಿದ ತಂತ್ರಾಂಶಗಳಿಗೆಲ್ಲ ಒಂದು ಮಿತಿಯಿರುತ್ತದೆ. ಸರಿಯಾದ ಪರಿಸ್ಥಿತಿಯಿಲ್ಲದಿದ್ದಲ್ಲಿ ಇಂತಹ ತಂತ್ರಗಾರಿಕೆಯು ಸರಿಯಾಗಿ ಕಾರ್ಯನಿರ್ವಹಿಸಲ್ಲ. ಉದಾಹರಣೆಗಾಗಿ ಹವಮಾನ ವೈಪರೀತ್ಯವುಂಟಾದ್ದಾಗ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕ್ಯಾಮೆರಾದ ನಿಖರ ವೀಕ್ಷಣೆಗೆ ಅಡ್ಡಿಯುಂಟಾಗುವ ಸಾಧ್ಯತೆಯಿದೆ.

ಈ ಸಮಸ್ಯೆ ನಿವಾರಿಸುವ ಸಲುವಾಗಿ ಸ್ವಯಂಚಾಲಿತ ಕಾರುಗಳಿಗೆ ಅಯಂಸ್ಕಾತ ನೆರವು ಪಡೆಯುವ ಯೋಚನೆ ಹೊಳೆದಿದೆ. ಈ ಸಂಬಂಧ ವಿಶೇಷವಾಗಿ ಸಿದ್ಧಪಡಿಸಲಾಗಿರುವ 100 ಮೀಟರ್ ದೂರದ ರಸ್ತೆಯಲ್ಲಿ ವೋಲ್ವೋ ಸ್ವಯಂಚಾಲಿತ ಕಾರಿನ ಪರೀಕ್ಷೆ ನಡೆಸಲಾಗಿದ್ದು, ಇಲ್ಲಿ ಭೂಮಿಯ ಎಂಟು ಇಂಚು ಕಳಸ್ತರದಲ್ಲಿ ಅಯಸ್ಕಾಂತ ಲಗತ್ತಿಸಲಾಗಿತ್ತು.

ಇದರ ಜತೆಗೆ ಕಾರಿನಲ್ಲೂ ಅಯಸ್ಕಾಂತ ಸೆನ್ಸಾರುಗಳನ್ನು ಆಳವಡಿಸಲಾಗಿತ್ತು. ಅಂತಿಮವಾಗಿ ಪರೀಕ್ಷೆಯ ಫಲಿತಾಂಶವೆಂಬಂತೆ ಮ್ಯಾಗ್ನೆಟ್ ಬಳಕೆಯು ಹೆಚ್ಚು ವಿಶ್ವಾಸಾರ್ಹ, ಬಾಳ್ವಿಕೆ ಹಾಗೂ ಕಡಿಮೆ ವೆಚ್ಚ ಎಂಬುದು ಸಾಬೀತಾಗಿದೆ. ಇಲ್ಲಿ ರಸ್ತೆ ನಿರ್ವಹಣಾ ಪರಿಣಾಮಗಳನ್ನು ಮೌಲ್ಯಮಾಪನ ಮಾಡಲಾಗಿದೆ.

ವಿವಿಧ ರೀತಿಯ ವೇಗತೆಯಲ್ಲೂ ಮ್ಯಾಗ್ನೆಟ್ ನಿಯಂತ್ರಿತ ಸ್ವಯಂಚಾಲಿತ ಕಾರು ಹೆಚ್ಚು ಪರಿಣಾಮಕಾರಿಯಾಗಿರುವುದು ಕಂಡುಬಂದಿದೆ. ಇದೀಗ ನೈಜ ಟ್ರಾಫಿಕ್ ಪರಿಸ್ಥಿತಿಯಲ್ಲೂ ಇದರ ಸರಿಯಾದ ಪರೀಕ್ಷೆ ನಡೆಯಲಿರುವುದಾಗಿ ಸಂಸ್ಥೆ ತಿಳಿಸಿದೆ. ಇವೆಲ್ಲವೂ ಸ್ವಯಂಚಾಲಿತ ಕಾರುಗಳ ಸುರಕ್ಷತೆಯನ್ನು ಇಮ್ಮಡಿಗೊಳಿಸಲಿದೆ.

More from DriveSpark

Article Published On: Saturday, March 15, 2014, 13:57 [IST]
English summary
We know that Volvo is actively working on researching and developing self driving cars for the future. So are several other automakers. So far the most popular technology employed to guide and keep autonomous cars in lane has been GPS, working in conjunction with on-board cameras and radars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+