ವೋಲ್ವೋ ಕಾರುಗಳು ಇನ್ನು ಒಂದು ಕ್ಲಿಕ್ ದೂರ ಮಾತ್ರ!
ಇಡೀ ಜಗತ್ತೇ ಆನ್ಲೈನ್ ಎಂಬ ಅಂತರ್ಜಾಲ ಪುಟದಲ್ಲಿ ಜಾಲಾಡುತ್ತಿದೆ. ನಿಮಗೆ ಏನೇ ಬೇಕಾದರೂ ಅಂತರ್ಜಾಲದಲ್ಲಿ ಹುಡುಕಬಹುದು. ಬಟ್ಟೆ ಬರೆಗಳಿಂದ ಹಿಡಿದು ಸಕಲ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ನೀವಿಲ್ಲಿ ಖರೀದಿಸಬಹುದು.
ಆಧುನಿಕ ಜಗತ್ತಿನಲ್ಲಿ ಗಣಕಯಂತ್ರಗಳ ಬಳಕೆಯ ವರ್ಧನೆಯಿಂದಾಗಿ ಇ-ವಾಣಿಜ್ಯ ಕೂಡಾ ವರ್ಧಿಸಿದೆ. ಈಗ ಸ್ವಿಡನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ವೋಲ್ವೋ, ಅಂತರ್ಜಾಲದಲ್ಲಿ ವಾಹನಗಳ ಮಾರಾಟ ಮಾಡುವುದಾಗಿ ಘೋಷಿಸಿದೆ.

ಹೌದು, ವೋಲ್ವೋ ಕಾರುಗಳಿನ್ನು ಒಂದು ಕ್ಲಿಕ್ ದೂರ ಮಾತ್ರ. ಇದರೊಂದಿಗೆ ಡಿಜಿಟಲ್ ಮಾರಾಟದೊಂದಿಗೆ ವೋಲ್ವೋ ಕೈಜೋಡಿಸಿಕೊಳ್ಳಲಿದೆ. ಸಂಸ್ಥೆಯ ಎಲ್ಲ ಶ್ರೇಣಿಯ ವಾಹನಗಳನ್ನು ಆನ್ಲೈನ್‌ನಲ್ಲಿ ಗ್ರಾಹಕರಿಗೆ ಸುಲಭವಾಗಿ ಕೈಗೆಟಕುವಂತೆ ಮಾಡುವುದು ಸಂಸ್ಥೆಯ ಇರಾದೆಯಾಗಿದೆ.
ಹಾಗಿದ್ದರೂ ಜಾಗತಿಕವಾಗಿ 2,000 ವಿತರಕ ಜಾಲವನ್ನು ಹೊಂದಿರುವ ವೋಲ್ವೋಗೆ ಇದರಿಂದ ತನ್ನ ಡೀಲರ್ ಹಾಗೂ ಔಟ್ಲೆಟ್‌ಗೆ ಯಾವುದೇ ತೊಂದರೆಯುಂಟಾಗುವುದಿಲ್ಲ ಎಂಬುದನ್ನು ಖಚಿತಪಡಿಸಿದೆ.
ಆರಂಭದಲ್ಲಿ ಇ-ವಾಣಿಜ್ಯ ವ್ಯವಹಾರ ಗ್ರಾಹಕರಲ್ಲಿ ಅಸಾಮಾಧನವನ್ನುಂಟು ಮಾಡಬಹುದು. ಆದರೆ ಇಲ್ಲಿಂದಲೇ ಡೀಲರ್ ಸಂಪರ್ಕವನ್ನು ಗಿಟ್ಟಿಸಿಕೊಳ್ಳಬಹುದಾಗಿದೆ ಎಂಬುದನ್ನು ಸಂಸ್ಥೆ ತಿಳಿಸಿದೆ.


Click it and Unblock the Notifications