ವೋಲ್ವೋ ಎಕ್ಸ್‌ಸಿ90 ಮೊದಲ ಎಡಿಷನ್ 47 ತಾಸಿನಲ್ಲೇ ಮಾರಾಟ
ಸ್ವೀಡನ್‌ನ ದೈತ್ಯ ಕಾರು ತಯಾರಕ ಸಂಸ್ಥೆಯಾಗಿರುವ ವೋಲ್ವೋ, ತನ್ನ ಬಹುನಿರೀಕ್ಷಿತ ಎಕ್ಸ್‌ಸಿ90 ಮೊದಲ ಎಡಿಷನ್ ಎಸ್‌ಯುವಿ ಮಾದರಿಯ 1,927 ಯುನಿಟ್‌ಗಳನ್ನು ಕೇವಲ 47 ಗಂಟೆಗಳಲ್ಲೇ ಮಾರಾಟ ಮಾಡಿರುವ ಸಾಧನೆ ಮಾಡಿದೆ.
ಕಳೆದ ತಿಂಗಳಿನಲ್ಲಷ್ಟೇ ವೋಲ್ವೋ ಸಂಸ್ಥೆಯು ಎಲ್ಲ ಹೊಸತನದ ಎಕ್ಸ್‌ಸಿ90 ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆ ಮಾಡಿತ್ತು. ಇದರಂತೆ ಮೊದಲ ಎಡಿಷನ್ ಮಾರಾಟ ಪ್ರಕ್ರಿಯೆಯನ್ನು ಆರಂಭಿಸಿತ್ತು. ಆನ್‌ಲೈನ್ ಮುಖಾಂತರ ಎಕ್ಸ್‌ಕ್ಲೂಸಿವ್ 1927 ಯುನಿಟ್‌ಗಳನ್ನು ಮಾರಾಟಕ್ಕಿಟ್ಟಿದ್ದ ವೋಲ್ವೋ ಅಭೂತಪೂರ್ವ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ವೋಲ್ವೋ ಸಂಸ್ಥೆಯ ಪ್ರಕಾರ ಎಕ್ಸ್‌ಸಿ90 ಮಾರಾಟ ಆರಂಭಿಸಿರುವ 47 ಗಂಟೆಗಳಲ್ಲೇ 1927 ಯುನಿಟ್ ಸೇಲ್ ಮಾಡುವಲ್ಲಿ ಯಶಸ್ವಿಯಾಗಿದೆ. ಇದು ವೋಲ್ವೋ ಕಾರುಗಳ ಮೇಲಿನ ಜನರ ನಂಬಿಕೆಗೆ ಕಾರಣವಾಗಿದೆ.
ಅಂದ ಹಾಗೆ ಹೊಸ ವೋಲ್ವೋ ಎಕ್ಸ್‌ಸಿ90 ಮಾದರಿಯು ಒನಿಕ್ಸ್ ಬ್ಲ್ಯಾಕ್ ಎಕ್ಸ್‌ಟೀರಿಯರ್ ಜೊತೆ 21 ಇಂಚು ಅಲಾಯ್ ವೀಲ್, ನಪ್ಪ ಲೆಥರ್ ಸೀಟು, ಲೆಥರ್ ಹೋದಿಕೆಯ ಡ್ಯಾಶ್‌ಬೋರ್ಡ್ ಮತ್ತು ಲಿನಿಯರ್ ವಾಲ್ನಟ್ ಇಂಟಿರಿಯರ್ ಹೊಂದಿದೆ. ಇದು ಬೋವರ್ ಮತ್ತು ವಿಲ್ಕಿನ್ ಆಡಿಯೋ ಸಿಸ್ಟಂ ಸಹ ಹೊಂದಿರಲಿದೆ.

ಇನ್ನು ಮೊದಲ ಎಡಿಷನ್ ವೋಲ್ವೋ ಎಕ್ಸ್‌ಸಿ90 ಫೋರ್ ಸಿಲಿಂಡರ್ ಡ್ರೈವ್ ಇ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದರ ಡಿ5 ಟ್ವಿನ್ ಟರ್ಬೊ ಚಾರ್ಜ್ಡ್ ಡೀಸೆಲ್ ಎಂಜಿನ್ 225 ಪಿಎಸ್ ಪವರ್ (470 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಅಂತೆಯೇ ಎಂಟು ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸಹ ಇರಲಿದೆ.


Click it and Unblock the Notifications








