ಸುರಕ್ಷಾ ಗುಣಮಟ್ಟ ವೃದ್ಧಿಸಲು ತಯಾರು: ಮಾರುತಿ
ಗಮನಾರ್ಹ ಬದಲಾವಣೆಯೊಂದರಲ್ಲಿ ಕೇಂದ್ರ ಸರಕಾರ ವಾಹನಗಳ ಸುರಕ್ಷಾ ಗುಣಮಟ್ಟದಲ್ಲಿ ವ್ಯಾಪಕ ಸುಧಾರಣೆ ತರುವ ನಿಟ್ಟಿನಲ್ಲಿ ಕಡ್ಡಾಯ ಕ್ರಾಶ್ ಟೆಸ್ಟ್ (ಅಪಘಾತ ಪರೀಕ್ಷೆ) ಆಳವಡಿಸುವ ಬಗ್ಗೆ ಗಾಢ ಚಿಂತನೆಯಲ್ಲಿ ತೊಡಗಿದೆ.
ಈ ನಡುವೆ ಹೇಳಿಕೆ ಕೊಟ್ಟಿರುವ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಕಾರಿನ ಸುರಕ್ಷಾ ಗುಣಮಟ್ಟತೆಯನ್ನು ವೃದ್ಧಿಸಿಕೊಳ್ಳಲು ತಾವು ತಯಾರಾಗಿದ್ದೇವೆ ಎಂದಿದೆ.

ಇದಕ್ಕೂ ಮುಂಚೆ ಯುರೋ ಎನ್‌ಸಿಎಪಿನಿಂದ ನಡೆಸಲಾದ ಕ್ರಾಶ್ ಟೆಸ್ಟ್‌ನಲ್ಲಿ ಮಾರುತಿಯ ಜನಪ್ರಿಯ ಸ್ವಿಫ್ಟ್ ಸೇರಿದಂತೆ ಭಾರತ ಮೂಲದ ಬಹುತೇಕ ಎಲ್ಲ ಮಾದರಿಗಳನ್ನು ಭಾರಿ ವೈಫಲ್ಯವನ್ನು ಅನುಭವಿಸಿತ್ತು. ಇದು ದೇಶದ ರಸ್ತೆಯಲ್ಲಿ ಚಲಿಸುವ ವಾಹನಗಳ ಗುಣಮಟ್ಟತೆಯ ಬಗ್ಗೆ ಆತಂಕ ಮೂಡುವಲ್ಲಿ ಕಾರಣವಾಗಿತ್ತು.
ಈ ಬಗ್ಗೆ ಹೇಳಿಕೆ ಕೊಟ್ಟಿರುವ ಮಾರುತಿಯ ಕಾರ್ಯನಿರ್ವಾಹಕ ನಿರ್ದೇಶಕ ಆರ್ ಎಸ್ ಕಲ್ಸಿ, "ಸದ್ಯ ನಾವು ಭಾರತ ಸರಕಾರ ಕೊಟ್ಟಿರುವ ಸುರಕ್ಷಾ ಗುಣಮಟ್ಟತೆಯನ್ನು ಪಾಲಿಸುತ್ತಿದ್ದು, ಅಗತ್ಯವಿದ್ದಲ್ಲಿ ಇದನ್ನು ವೃದ್ಧಿಸಿಕೊಳ್ಳಲು ತಯಾರಾಗಿದ್ದೇವೆ" ಎಂದಿದ್ದಾರೆ.
"ಭಾರತ ಸರಕಾರ ವಿಧಿಸಿರುವ ಎಲ್ಲ ಸುರಕ್ಷಾ ಮಾನದಂಡಗಳನ್ನು ನಾವು ಪಾಲಿಸುತ್ತಿದ್ದೇವೆ. ಹಾಗೊಂದು ವೇಳೆ ಸರಕಾರವು ಇದನ್ನು ಬದಲಾಯಿಸಲು ಸೂಚಿಸಿದ್ದಲ್ಲಿ ನಾವದನ್ನು ಪಾಲಿಸಲಿದ್ದೇವೆ" ಎಂದವರು ಸೇರಿಸಿದರು.
ಈ ಸಂಬಂಧ ತಮ್ಮ ಅಭಿಮತ ವ್ಯಕ್ತಪಡಿಸಿರುವ ರಾಷ್ಟ್ರೀಯ ಆಟೋಮೋಟಿವ್ ಟೆಸ್ಟಿಂಗ್ ಆಂಡ್ ಆರ್ ಆಂಡ್ ಡಿ ಮೂಲಸೌಲಭ್ಯ ಯೋಜನೆ (ಎನ್‌ಎಟಿಆರ್‌ಐಪಿ) ಸಿಇಒ ಹಾಗೂ ಐಎಎಸ್ ಅಧಿಕಾರಿಯಾಗಿರುವ ನಿತಿನ್ ಆರ್ ಗೋಖರ್ಣ, "ಅಂತರಾಷ್ಟ್ರೀಯ ಮಟ್ಟದಲ್ಲಿ ಗಂಟೆಗೆ 64 ಕೀ.ಮೀ. ವೇಗದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಆದರೆ ಭಾರತದಲ್ಲಿ ಇಲ್ಲಿನ ರಸ್ತೆ ಪರಿಸ್ಥಿತಿಗೆ ಅನುಗುಣವಾಗಿ ಗಂಟೆಗೆ 56 ಕೀ.ಮೀ. ವೇಗದಲ್ಲಿ ಅಪಘಾತ ಪರೀಕ್ಷೆ ನಡೆಸಲಾಗುತ್ತದೆ. ಹಾಗಾಗಿ ಎರಡು ಪರೀಕ್ಷೆಗಳು ಸಮಾನ ಫಲಿತಾಂಶ ನೀಡಲು ಸಾಧ್ಯವಿಲ್ಲ" ಎಂದಿದ್ದಾರೆ.
ಮೆಟ್ಜೆಲೆರ್ ರೋಡ್ ಟೆಕ್ ಝಡ್6 ಟ್ಯೂಬ್ ಲೆಸ್ - ಶೇ. 10ರಷ್ಟು ರಿಯಾಯಿತಿ


Click it and Unblock the Notifications