3 ದಿನದಲ್ಲೇ 3000 ಬುಕ್ಕಿಂಗ್ಸ್; ಇದು ಸಿಯಾಝ್ ಬೇಟೆ

By Nagaraja

ಬಿಡುಗಡೆಗೂ ಮುನ್ನವೇ ಭರ್ಜರಿ ಮಾರಾಟ ಉತ್ತೇಜನ ಗಿಟ್ಟಿಸಿಕೊಂಡಿರುವ ಮಾರುತಿಯ ಅತಿ ನೂತನ ಸಿಯಾಝ್, ಮುಗಂಡ ಬುಕ್ಕಿಂಗ್ ಪ್ರಿಕ್ರಿಯೆ ಆರಂಭಗೊಂಡಿರುವ ಕೇವಲ ಮೂರು ದಿನಗಳಲ್ಲೇ 3,000ದಷ್ಟು ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಹಳೆ ತಲೆಮಾರಿನ ಎಸ್‌ಎಕ್ಸ್4 ಬದಲಿ ಕಾರಾಗಿ ಮಾರುಕಟ್ಟೆ ಪ್ರವೇಶಿಸಲಿರುವ ಸಿಯಾಝ್, ಮುಂಬರುವ ಅಕ್ಟೋಬರ್ ತಿಂಗಳಲ್ಲಿ ನಡೆಯಲ್ಲಿರುವ ಹಬ್ಬದ ಆವೃತ್ತಿಯ ವೇಳೆಯಲ್ಲಿ ಬಿಡುಗಡೆಗೊಳ್ಳಲಿದೆ. ಇದರಂತೆ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಲಾಗಿದೆ.

Ciaz

ಹೋಂಡಾದ ಪರಿಷ್ಕೃತ ಸಿಟಿ ಕಾರಿಗೆ ನೇರ ಪ್ರತಿಸ್ಪರ್ಧಿಯಾಗಿರುವ ಸಿಯಾಝ್, ಸ್ಪರ್ಧಾತ್ಮಕ ದರಗಳಲ್ಲಿ ಆಗಮನವಾಗಿರುವುದು ಗ್ರಾಹಕರನ್ನು ಹೆಚ್ಚು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹಾಗಾಗಿ ಸಂಸ್ಥೆಯು ನಿರ್ಮಾಣ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿರುವುದು ಅನಿವಾರ್ಯವಾಗಿದೆ.

ಇನ್ನೊಂದೆಡೆ ಸೆಲೆರಿಯೊ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಕಾರು ತನ್ನ ಉತ್ತಮ ಮಾರುಕಟ್ಟೆಯನ್ನು ಕಾಯ್ದುಕೊಂಡಿದೆ. ಹಾಗಿರುವಾಗ ಕಾಯುವಿಕೆ ಅವಧಿಯನ್ನು ಕಡಿತಗೊಳಿಸುವತ್ತ ಮಾರುತಿ ಗಮನ ವಹಿಸಬೇಕಾಗುತ್ತದೆ.

ಬಿಡುಗಡೆ ಬೆನ್ನಲ್ಲೇ ಬಹುನಿರೀಕ್ಷಿತ ಸಿಯಾಝ್ ಕಾರಿನ ವಿತರಣಾ ಪ್ರಕ್ರಿಯೆ ಆರಂಭಿಸಲಿರುವ ಮಾರುತಿ 7.25 ಲಕ್ಷ ರು.ಗಳಿಂದ 10.5 ಲಕ್ಷ ರು.ಗಳ ದರ ನಿರ್ಣಯಿಸುವ ಸಾಧ್ಯತೆಯಿದೆ.

ಮಾರುತಿ ಪಾಲಿಗೆ ಅತಿ ಹೆಚ್ಚು ಲಾಭ ಉದ್ದೇಶವರಿಸಿಕೊಂಡು ನಿರ್ಮಿಸಲಾಗುತ್ತಿರುವ ಸಿಯಾಝ್ ಮಾದರಿಗಾಗಿ ಬರೋಬ್ಬರಿ 620 ಕೋಟಿ ಹೂಡಿಕೆ ಮಾಡಲಾಗಿತ್ತು. ಇದು ಭಾರತ ಜೊತೆಗೆ ಚೀನಾ ಮಾರುಕಟ್ಟೆಯನ್ನು ಗುರಿಯಿರಿಸಿಕೊಂಡಿದೆ.

ಕೇವಲ ಹೋಂಡಾ ಸಿಟಿ ಮಾತ್ರವಲ್ಲದೆ ಹ್ಯುಂಡೈ ವರ್ನಾ ಮಾದರಿಗಳಿಗೂ ಸಿಯಾಝ್ ಸ್ಪರ್ಧೆ ಒಡ್ಡಲಿದೆ. ಇದರ 1.4 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಎಂಜಿನ್‌ಗಳು ಅನುಕ್ರಮವಾಗಿ ಪ್ರತಿ ಲೀಟರ್‌ಗೆ 20.7 ಮತ್ತು 26.2 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

More from DriveSpark

Article Published On: Monday, September 8, 2014, 11:10 [IST]
English summary
Within three days Ciaz gets 3,000 bookings
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+