ಪುರುಷರ ಕಿರುಕುಳ; ಓಡಾಟ ನಿಲ್ಲಿಸಿದ ಪಿಂಕ್ ಆಟೋ ಚಾಲಕಿಯರು
ಪುರುಷ ಆಟೋ ಚಾಲಕರ ಕಿರುಕುಳ ತಾಳಲಾರದೇ ಮಹಿಳಾ ಚಾಲಕಿಯರು ನೇತೃತ್ವ ವಹಿಸುತ್ತಿರುವ ಜಾರ್ಖಂಡ್‌ನ 'ಪಿಂಕ್ ಆಟೋ'ಗಳು ತಮ್ಮ ಓಡಾಟವನ್ನು ನಿಲುಗಡೆಗೊಳಿಸಿದೆ.
ಮಹಿಳಾ ಪ್ರಯಾಣಿಕರಿಗೂ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಒಂದು ವಾರಗಳ ಹಿಂದೆಯಷ್ಟೇ ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಮಹಿಳಾ ಚಾಲಕಿಯರೇ ನೇತೃತ್ವ ವಹಿಸುವ ಪಿಂಕ್ ಆಟೋಗಳನ್ನು ಜಾರಿಗೆ ತರಲಾಗಿತ್ತು. ಆದರೆ ಆಟೋಗಳನ್ನು ಸ್ಟಾಂಡ್‌ನಲ್ಲಿ ನಿಲ್ಲಿಸಿದ್ದ ವೇಳೆ ಇತರ ಪುರುಷ ಆಟೋ ಚಾಲಕರು ತಮ್ಮ ವಿರುದ್ಧ ಅವಾಚ್ಯ ಪದಗಳನ್ನು ಪ್ರಯೋಗ ಮಾಡುತ್ತಿರುವುದಾಗಿ ಮಹಿಳಾ ಚಾಲಕಿಯರು ಆರೋಪಿಸಿದ್ದಾರೆ.

ಇದರ ವಿರುದ್ಧ ಸಿಡಿದೆದ್ದಿರುವ ಮಹಿಳಾ ಚಾಲಕಿಯರು ಪಿಂಕ್ ಆಟೋ ಸೇವೆಯನ್ನು ಸ್ಧಿಗತಿಗೊಳಿಸಲು ನಿರ್ಧರಿಸಿದ್ದಾರೆ. ಈ ಮೂಲಕ ಆಡಳಿತ ವರ್ಗಕ್ಕೆ ಬಿಸಿ ಮುಟ್ಟಿಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಹೇಳಿಕೆ ಕೊಟ್ಟಿರುವ ಪಿಂಕ್ ಆಟೋ ಚಾಲಕಿ ಹೀರಾ ದೇವಿ, "ಇಂತಹ ಪ್ರಸಂಗಗಳು ಪದೇ ಪದೇ ನಡೆಯುತ್ತಲೇ ಇದೆ. ಪುರುಷ ಆಟೋ ಚಾಲಕರು ತಮ್ಮ ವಿರುದ್ಧ ನಿಂದನೀಯ ಪದಗಳನ್ನು ಬಳಸುತ್ತಿದ್ದು, ಇದು ನಿಮ್ಮಿಂದಾಗುವ ಕೆಲಸವಲ್ಲ; ಒಂದು ತಿಂಗಳೊಳಗೆ ಆಟೋ ಬಿಟ್ಟು ಓಡಿ ಹೋಗ್ತೀರಾ ಎಂಬೆಲ್ಲ ಪದಗಳನ್ನು ಬಳಸುತ್ತಿರುವಾಗಿ ಆರೋಪಿಸಿದ್ದಾರೆ. ಸಾಧ್ಯವಾದಷ್ಟು ನಾವು ಇಂತಹ ಪ್ರಸಂಗಗಳನ್ನು ಕಡೆಗಣಿಸಿದ್ದೇವೆ. ಆದರೆ ಕಿರುಕುಳಕ್ಕೂ ಒಂದು ಮಿತಿಯಿರುತ್ತದೆ" ಎಂದು ಆಕ್ರೋಶ ಭರಿತರಾಗಿ ನುಡಿದಿದ್ದಾರೆ.


Click it and Unblock the Notifications