ಭಾರತಕ್ಕೂ ಬರುತ್ತಾ ಹ್ಯುಂಡೈ ಲಗ್ಷುರಿ ಗಾಡಿ

By Nagaraja

ದಕ್ಷಿಣ ಕೊರಿಯಾ ಕಾರು ತಯಾರಕ ಸಂಸ್ಥೆಯಾದ ಹ್ಯುಂಡೈ ಕೇವಲ ಸಣ್ಣ ಕಾರುಗಳನ್ನು ಉತ್ಪಾದಿಸುವುದರಲ್ಲಿ ಮಾತ್ರ ಸಕ್ಷಮವಾಗಿದೆ ಎಂದು ನೀವು ಅಂದುಕೊಂಡಿದ್ದಲ್ಲಿ ತಪ್ಪಾದಿತ್ತು. ಯಾಕೆಂದರೆ ಎರಡನೇ ತಲೆಮಾರಿನ ಹ್ಯುಂಡೈ ಜೆನಿಸಿಸ್ ಈಗಾಗಲೇ ಭರ್ಜರಿ ಅನಾವರಣ ಕಂಡಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಪ್ರಮುಖವಾಗಿಯೂ ಜರ್ಮನಿಯ ಐಕಾನಿಕ್ ಕಾರು ಸಂಸ್ಥೆಯಾದ ಮರ್ಸಿಡಿಸ್ ಬೆಂಝ್ ಇ ಕ್ಲಾಸ್ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿರುವ ಹ್ಯುಂಡೈ ಜೆನಿಸಿಸ್ ಭಾರತ ಮಾರುಕಟ್ಟೆ ಪ್ರವೇಶಿಸಲಿದೆಯೇ ಎಂಬಿತ್ಯಾದಿ ಕುತೂಹಲಕಾರಿ ವಿವರಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

2015 ಹ್ಯುಂಡೈ ಜೆನಿಸಿಸ್

ಹ್ಯುಂಡೈ ಜೆನಿಸಿಸ್ ದಕ್ಷಿಣ ಕೊರಿಯಾ ವಾಹನ ತಯಾರಕ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಪ್ರೀಮಿಯಂ ಸೆಡಾನ್ ಕಾರಾಗಿದೆ. ಇದು 2015ರಲ್ಲಿ ಯುರೋಪ್, ಚೀನಾ, ರಷ್ಯಾ ಹಾಗೂ ಅಮೆರಿಕಾ ರಾಷ್ಟ್ರಗಳನ್ನು ಪ್ರವೇಶಿಸಲಿದೆ.

2015 ಹ್ಯುಂಡೈ ಜೆನಿಸಿಸ್

ಡೆಟ್ರಾಯ್ಟ್ ಮೋಟಾರ್ ಶೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಜೆನಿಸಿಸ್, ಫ್ಯೂಯಿಡಿಕ್ ಆಕೃತಿಯ 2.0 ವಿನ್ಯಾಸವನ್ನು ಪಡೆದುಕೊಂಡಿದೆ. ಇದು ತನ್ನ ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಉದ್ದಗಲವನ್ನು ಹೊಂದಿರುತ್ತದೆ. ಅಷ್ಟೇ ಅಲ್ಲದೆ ಕಾರಿನ ಒಳಮೈಯಲ್ಲಿ ಸಾಕಾಗುವಷ್ಟು ಸ್ಥಳಾವಕಾಶ ಕಲ್ಪಿಸಿಕೊಡಲಾಗಿದೆ.

2015 ಹ್ಯುಂಡೈ ಜೆನಿಸಿಸ್

ದಕ್ಷಿಣ ಕೊರಿಯೊದ ಜೆನಿಸಿಸ್ ವರ್ಷನ್ ನಾಲ್ಕು ವಿ6 ಮತ್ತು ವಿ8 ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 3.0 ಲೀಟರ್, 3.3 ಲೀ., 3.8 ಲೀ. ಮತ್ತು 5.0 ಲೀಟರ್ ವರ್ಷನ್ ಹೊಂದಿರಲಿದೆ. ಈ ಪೈಕಿ ಅತ್ಯಂತ ಶಕ್ತಿಶಾಲಿ ಎನಿಸಿಕೊಂಡಿರುವ 5.0 ಲೀಟರ್ ಜಿಡಿಐ ಎಂಜಿನ್ 419 ಅಶ್ವಶಕ್ತಿ ಉತ್ಪಾದಿಸುವುದಲ್ಲದೆ ಕೇವಲ 5.4 ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ.

2015 ಹ್ಯುಂಡೈ ಜೆನಿಸಿಸ್

ಎಲ್ಲ ಮಾದರಿಗಳು ಎಂಟು ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆಯಲಿದ್ದು, ಎಚ್‌ಟಿಆರ್‌ಎಸಿ ವ್ಯವಸ್ಥೆಯ ಮುಖಾಂತರ ಎಲ್ಲ ನಾಲ್ಕು ಚಕ್ರಗಳಿಗೆ ಶಕ್ತಿ ವಿತರಣೆಯಾಗಲಿದೆ. ಮುಂದುವರಿದ ಸ್ಮಾರ್ಟ್ ಕ್ರೂಸ್ ಕಂಟ್ರೋಲ್ ಮತ್ತು ಟ್ರಾಕ್ಷನ್ ಕೆಂಟ್ರೋಲ್ ಸಿಸ್ಟಂ ಸಹ ಕಾರಿನ ಸ್ಥಿರತೆಯನ್ನು ಹೆಚ್ಚಿಸಲಿದೆ.

2015 ಹ್ಯುಂಡೈ ಜೆನಿಸಿಸ್

ಕಾರಿನೊಳಗಿನ ಅಂದತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಇದು ಚರ್ಮದ ಹೋದಿಕೆಯ ಜತೆಗೆ ಸಿಒ2 ಕ್ಯಾಬಿನ್ ಸೆನ್ಸಾರ್ ಕಂಟ್ರೋಲ್, ಹ್ಯುಂಡೈ ನೆಕ್ಸ್ಟ್ ಜನರೇಷನ್ ಮಾಹಿತಿ ಸಿಸ್ಟಂ, ಗೂಗಲ್ ಮ್ಯಾಪ್ಸ್ ನೇವಿಗೇಷನ್ ಜತೆಗೆ 9.2 ಟಚ್‌ಸ್ಕ್ರೀನ್ ಡಿಸ್‌ಪ್ಲೇ ಹೊಂದಿದೆ.

2015 ಹ್ಯುಂಡೈ ಜೆನಿಸಿಸ್

ಇನ್ನು ಸುರಕ್ಷತೆಗೂ ಪ್ರಾಮುಖ್ಯತೆ ಕೊಡಲಾಗಿದ್ದು, ಆಟೋಮ್ಯಾಟಿಕ್ ಎಮರ್ಜನ್ಸಿ ಬ್ರೇಕಿಂಗ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ ಸಿಸ್ಟಂ ಜತೆ ಇಂಟೆಗ್ರೇಟಡ್ ಹೆಡ್ ಅಪ್ ಡಿಸ್‌ಪ್ಲೇಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಆಳವಡಿಸಲಾಗಿದೆ.

2015 ಹ್ಯುಂಡೈ ಜೆನಿಸಿಸ್

2015 ಹ್ಯುಂಡೈ ಜೆನಿಸಿಸ್ ಜಗತ್ತಿನ ಪ್ರಮುಖ ದೇಶಗಳನ್ನು ಪ್ರವೇಶಿಸುವುದಾದರೂ ಸದ್ಯಕ್ಕಂತೂ ಭಾರತಕ್ಕೆ ಎಂಟ್ರಿ ಕೊಡುವುದಿಲ್ಲ. ಗರಿಷ್ಠ ಮಾರಾಟ ಗಿಟ್ಟಿಸಿಕೊಳ್ಳುವುದು ಕಂಪನಿಯ ಇರಾದೆಯಾಗಿದೆ. ಇದರ ದರ 40 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

More from DriveSpark

Article Published On: Thursday, November 28, 2013, 10:13 [IST]
English summary
Hyundai Genesis is the South Korean automaker's flagship premium sedan model, the second generation of which has now been revealed. The Mercedes-Benz E-Class rival from Hyundai will initially go on sale in its home country
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+