ಸ್ವೀಡಿಷ್ ಪ್ರತಿಷ್ಠೆ ಎತ್ತಿ ಹಿಡಿದ 2015 ವೋಲ್ವೋ ಎಕ್ಸ್‌ಸಿ90

By Nagaraja

ಇಡೀ ವಾಹನ ಜಗತ್ತೇ ಎದುರು ನೋಡುತ್ತಿರುವ ಅತ್ಯಂತ ಬೇಡಿಕೆಯ 2015 ವೋಲ್ವೋ ಎಕ್ಸ್‌ಸಿ90 ಮಾರುಕಟ್ಟೆಗಿಳಿಯಲು ಸರ್ವ ಸನ್ನದ್ಧವಾಗುತ್ತಿದೆ.

ಐಷಾರಾಮಿ ಕಾರುಗಳಿಗೆ ಹೊಸ ಆಯಾಮ ಗಿಟ್ಟಿಸಿಕೊಂಡಿರುವ ವೋಲ್ವೋ ಎಕ್ಸ್‌ಸಿ90 ದಶಕಗಳ ಬಳಿಕ ಮಹತ್ತರ ಬದಲಾವಣೆಗಳನ್ನು ಗಿಟ್ಟಿಸಿಕೊಳ್ಳುತ್ತಿದೆ. ಇದೇ ಕಾರಣಕ್ಕಾಗಿ ವೋಲ್ವೋ ಸಾಂಪ್ರಾದಾಯಿಕ ವಿನ್ಯಾಸದಿಂದ ಹೊಸ ತತ್ವಶಾಸ್ತ್ರವು ಹೇಗೆ ಭಿನ್ನವಾಗಲಿದೆ ಎಂಬುದನ್ನು ಅರಿಯಲು ವಾಹನ ಪ್ರೇಮಿಗಳು ಕಾತರದಿಂದಿದ್ದಾರೆ.

ಸ್ವೀಡಿಷ್ ಪ್ರತಿಷ್ಠೆ ಎತ್ತಿ ಹಿಡಿದ 2015 ವೋಲ್ವೋ ಎಕ್ಸ್‌ಸಿ90

ಅಂತೂ ಇಂತೂ ಬಹುನಿರೀಕ್ಷಿತ 2015 ವೋಲ್ವೋ ಎಕ್ಸ್‌ಸಿ90 ಭರ್ಜರಿ ಅನಾವರಣ ಕಂಡಿದೆ. ಇದು ಇತರ ಎಸ್‌ಯುವಿಗಿಂತಲೂ ಹೇಗೆ ಭಿನ್ನವಾಗಲಿದೆ ಎಂಬುದನ್ನು ಚಿತ್ರಗಳ ಮೂಲಕ ಅರಿಯೋಣವೇ.

ಸ್ವೀಡಿಷ್ ಪ್ರತಿಷ್ಠೆ ಎತ್ತಿ ಹಿಡಿದ 2015 ವೋಲ್ವೋ ಎಕ್ಸ್‌ಸಿ90

2015 ಎಕ್ಸ್‌ಸಿ90 ಮುಖಾಂತರ ವೋಲ್ವೋ ಭವಿಷ್ಯದತ್ತ ದಿಟ್ಟ ಕಣ್ಣಾಯಿಸಿದೆ. ಕಾರಿನ ಮುಂಭಾಗದಲ್ಲಿ ಪಳಪಳನೆ ಹೊಳೆಯುತ್ತಿರುವ ಎಲ್‌ಇಡಿ ಡೇಟೈಮ್ ರನ್ನಿಂಗ್ ಹೆಡ್‌ಲೈಟ್ ಪ್ರಮುಖ ಆಕರ್ಷಣೆಯಾಗಿದೆ. ಇನ್ನು ಲಂಬವಾದ ರೇಖೆಗಳ ಗ್ರಿಲ್ ನಡುವೆ ಸಂಸ್ಥೆಯ ಲೊಗೊ ಎದ್ದು ಕಾಣಿಸುತ್ತಿದೆ.

ಸ್ವೀಡಿಷ್ ಪ್ರತಿಷ್ಠೆ ಎತ್ತಿ ಹಿಡಿದ 2015 ವೋಲ್ವೋ ಎಕ್ಸ್‌ಸಿ90

ಇನ್ನು ಕಾರಿ ಬದಿ ಭಾಗವನ್ನು ಗಮನಿಸಿದರೆ ಏಕಮಾತ್ರ ಲೋಹದ ನಿರ್ಮಿಸಿರುವುದು ಸ್ಪಷ್ಟವಾಗುತ್ತದೆ. ಇದರ ಮೇಲೆರುವ ಪ್ರಭಾವತ್ಮಾಕ ಗೆರೆಗಳು ಅತ್ಯುತ್ತಮ ರಸ್ತೆ ಸಾನಿಧ್ಯವನ್ನು ಪ್ರಸ್ತುತಪಡಿಸಲಿದೆ. ಇದು 22 ಇಂಚುಗಳು ವೀಲ್ ಆರ್ಚ್ ಪಡೆದುಕೊಂಡಿದೆ. ಒಟ್ಟಿನಲ್ಲಿ ಉತ್ತಮ ಗೋಚರತೆಯನ್ನು ಕಾಪಾಡಿಕೊಳ್ಳಲಾಗಿದೆ.

ಸ್ವೀಡಿಷ್ ಪ್ರತಿಷ್ಠೆ ಎತ್ತಿ ಹಿಡಿದ 2015 ವೋಲ್ವೋ ಎಕ್ಸ್‌ಸಿ90

ಹಿಂದುಗಡೆಯೂ ವೋಲ್ವೋ ಎಕ್ಸ್‌ಸಿ90 ಅತ್ಯುತ್ತಮ ವಿನ್ಯಾಸವನ್ನು ಕಾಪಾಡಿಕೊಳ್ಳಲಾಗಿದೆ. ಹಾಗೆಯೇ ಹಿಂದಿನ ತಲೆಮಾರಿನ ಮೂಲ ವಿನ್ಯಾಸವನ್ನು ಕಾಯ್ದುಕೊಳ್ಳಲಾಗಿದೆ.

ಸ್ವೀಡಿಷ್ ಪ್ರತಿಷ್ಠೆ ಎತ್ತಿ ಹಿಡಿದ 2015 ವೋಲ್ವೋ ಎಕ್ಸ್‌ಸಿ90

ಇದರ ಮೂರು ಸಾಲುಗಳ ಅತ್ಯಾಕರ್ಷಕ ಒಳಮೈನಿಂದಾಗಿ ವೋಲ್ವೋ ಎಕ್ಸ್‌ಸಿ90 ಇತರ ಕಾರುಗಳಿಂದ ಭಿನ್ನವಾಗಿ ಅನಿಸುತ್ತಿದೆ. ಕಾರಿನ ಇಂಟಿರಿಯರ್ ರಚನೆಗೆ ವೋಲ್ವೋ ಹೆಚ್ಚಿನ ಪ್ರಾಮುಖ್ಯತೆ ನೀಡಿರುವುದು ಗಮನಕ್ಕೆ ಬರುತ್ತದೆ.

ಸ್ವೀಡಿಷ್ ಪ್ರತಿಷ್ಠೆ ಎತ್ತಿ ಹಿಡಿದ 2015 ವೋಲ್ವೋ ಎಕ್ಸ್‌ಸಿ90

ಎಲ್ಲ ಐಷಾರಾಮಿ ಕಾರುಗಳಿಗೂ ಪ್ರೀಮಿಯಂ ಶಬ್ದದ ಅಗತ್ಯವಿರುತ್ತದೆ. ಇಲ್ಲೂ 19 ಸ್ಪೀಕರುಗಳ 1400 ವ್ಯಾಟ್ ಬೋವರ್ ಮತ್ತು ವಿಲ್ಕಿನ್ ಆಡಿಯೋ ಸಿಸ್ಟಂ ಲಗತ್ತಿಸಲಾಗಿದೆ. ಇದರಲ್ಲಿ ವಿರಳವಾಗಿ ಕಾಣಸಿಗುವ ಗಾಳಿ ಹಾದು ಹೋಗುವ ಸಬ್‌ವೂಫರ್ ಸಹ ಕಾರಿನಲ್ಲಿ ಲಗತ್ತಿಸಲಾಗಿದೆ.

ಸ್ವೀಡಿಷ್ ಪ್ರತಿಷ್ಠೆ ಎತ್ತಿ ಹಿಡಿದ 2015 ವೋಲ್ವೋ ಎಕ್ಸ್‌ಸಿ90

ಅಂದ ಹಾಗೆ ವೋಲ್ವೋ ಎಕ್ಸ್‌ಸಿ90 ಎಸ್‌ಯುವಿನಲ್ಲಿ ಅತ್ಯಂತ ಇಂಧನ ಕ್ಷಮತೆಯ ನಾಲ್ಕು ಸಿಲಿಂಡರ್ ಎಂಜಿನ್ ಆಳವಡಿಸಲಾಗಿದೆ. ಇದರ ಗ್ಯಾಸ್ ಬರ್ನಿಂಗ್, ಟರ್ಬೊಚಾರ್ಜ್ಡ್ ಮತ್ತು ಸೂಪರ್ ಚಾರ್ಜ್ಡ್ ಟಿ6 ಎಂಜಿನ್‌ಗಳು 316 ಬಿಎಚ್‌ಪಿ ಟಿ5 ಡೀಸೆಲ್ ಎಂಜಿನ್ 225 ಅಶ್ವಶಕ್ತಿ ಉಥ್ಪಾದಿಸಲಿದೆ. ಇದರಲ್ಲಿ ಪ್ಲಗ್ ಇನ್ ಹೈಬ್ರಿಡ್ ಆಯ್ಕೆಯೂ ಇರುತ್ತದೆ. ಈ ಮೂಲಕ ಗರಿಷ್ಠ 400 ಅಶ್ವಶಕ್ತಿ ಉತ್ಪಾದಿಸಬಹುದಾಗಿದೆ. ವೋಲ್ವೋ ಡ್ರೈವ್ ಇ ಫ್ಯಾಮಿಲಿಯಿಂದ ಆಗಮನವಾಗಿರುವ ಈ ಎಲ್ಲ ಎಂಜಿನ್‌ಗಳು ಎಂಟು ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.

ಸ್ವೀಡಿಷ್ ಪ್ರತಿಷ್ಠೆ ಎತ್ತಿ ಹಿಡಿದ 2015 ವೋಲ್ವೋ ಎಕ್ಸ್‌ಸಿ90

2020ರ ವೇಳೆಗೆ ಸಂಪೂರ್ಣ ಸುರಕ್ಷಿತ ವೋಲ್ವೋ ಕಾರನ್ನು ಸೃಷ್ಟಿಮಾಡುವುದು ಸಂಸ್ಥೆಯ ಗುರಿಯಾಗಿದೆ. ಈ ನಿಟ್ಟಿನಲ್ಲಿ ವೋಲ್ವೋ ಎಕ್ಸ್‌ಸಿ90 ಕಾರಲ್ಲಿ ಗರಿಷ್ಠ ಸುರಕ್ಷತಾ ಮಾನದಂಡಗಳನ್ನು ಅನುಸರಿಸಲಾಗಿದೆ. ಇದು ರನ್ ಆಫ್-ರೋಡ್ ಪ್ಯಾಕೇಜ್ ಹಾಗೂ ಆಟೋ ಬ್ರೇಕಿಂಗ್ ಹೊಂದಿರಲಿದೆ. ಇದು 'ಸಿಟಿ ಸೇಫ್ಟಿ' ಆಟೋ ಬ್ರೇಕಿಂಗ್ ತಂತ್ರಜ್ಞಾನವನ್ನು ಪಡೆಯಲಿದ್ದು, ಈ ಮೂಲಕ ವಾಹನ, ಸೈಕಲ್ ಹಾಗೂ ಪಾದಚಾರಿಗಳನ್ನು ಪಚ್ಚೆಹಚ್ಚಲು ನೆರವಾಗಲಿದೆ. ಹಾಗಿದ್ದರೂ ಭಾರತದಲ್ಲಿ ಈ ತಂತ್ರಗಾರಿಕೆ ಪ್ರಾಯೋಗಿಕವಾಗಿ ಹೇಗೆ ಯಶಸ್ಸು ಕಾಣಲಿದೆ ಎಂಬುದು ಪ್ರಶ್ನೆಯ ವಿಚಾರವಾಗಿದೆ.

ಸ್ವೀಡಿಷ್ ಪ್ರತಿಷ್ಠೆ ಎತ್ತಿ ಹಿಡಿದ 2015 ವೋಲ್ವೋ ಎಕ್ಸ್‌ಸಿ90

ಒಟ್ಟಿನಲ್ಲಿ ಸ್ಕೇಲಬಲ್ ಪ್ರೊಡಕ್ಟ್ ಆರ್ಕಿಟೇಕ್ಚರ್ (ಎಸ್‌ಪಿಎ) ಬಿಡುಗಡೆ ಮಾಡಿರುವ ವೋಲ್ವೋ, ತನ್ನ ಬಹುನಿರೀಕ್ಷಿತ ಎಕ್ಸ್‌ಸಿ90 ಎಸ್‌ಯುವಿ ಕಾರಿನ ಮೇಲೆ ಅತೀವ ನಿರೀಕ್ಷೆಯನ್ನಿಟ್ಟುಕೊಂಡಿದೆ.

More from DriveSpark

Article Published On: Thursday, August 28, 2014, 12:20 [IST]
English summary
Looks like there's going to be at least some restrained congratulatory back slapping in Volvo circles, because first impressions of the 2015 Volvo XC90 are wowing the world.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+