ಜಿನೆವಾದಲ್ಲಿ ಮೋಡಿ ಮಾಡಲಿರುವ 2016 ರೇಂಜ್ ರೋವರ್ ಇವೋಕ್
ಇಡೀ ವಾಹನ ಜಗತ್ತೇ 2015 ಜಿನೆವಾ ಮೋಟಾರು ಶೋಗಾಗಿ ಕಾತರದಿಂದ ಕಾಯುತ್ತಿದೆ. ವಿಶ್ವದ ಬಹುತೇಕ ಎಲ್ಲ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಗಳು ಜಿನೆವಾದಲ್ಲಿ ತನ್ನ ನೂತನ ಉತ್ಪನ್ನುಗಳನ್ನು ಪ್ರದರ್ಶಿಸಲು ಕಾತರದಿಂದ ಕಾಯುತ್ತಿದೆ.
ಈಗ ಐಷಾರಾಮಿ ಎಸ್‌ಯುವಿ ಸಂಸ್ಥೆಗಳಲ್ಲಿ ತನ್ನದೇ ಆದ ವಿಶಿಷ್ಟತೆ ಕಾಪಾಡಿಕೊಂಡಿರುವ ಲ್ಯಾಂಡ್ ರೋವರ್, 2016 ರೇಂಜ್ ರೋವರ್ ಇವೋಕ್ ಪ್ರದರ್ಶಿಸಲು ತುದಿಗಾಲಲ್ಲಿ ನಿಂತಿದೆ.

ಇದರಂತೆ ಕಾರಿಗೆ ಸಂಬಂಧಪಟ್ಟಂತೆ ಟೀಸರ್ ಚಿತ್ರವನ್ನು ಹೊರ ಬಟ್ಟಿದೆ. ಇದರಲ್ಲಿ ಹೆಡ್ ಲ್ಯಾಂಪ್ ಸಿಗ್ನೇಚರ್ ಮಾತ್ರ ಬಹಿರಂಗಪಡಿಸಲಾಗಿದ್ದು, ಹೆಚ್ಚಿನ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಬಹುನಿರೀಕ್ಷಿತ 2015 ಜಿನೆವಾ ಮೋಟಾರು ಶೋ ಮಾರ್ಚ್ 3ರಂದು ಆರಂಭವಾಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಲ್ಯಾಂಡ್ ರೋವರ್ ವಿನ್ಯಾಸ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಗ್ಯಾರಿ ಮೆಕ್ ಗೋವರ್ನ್, "ಇವೋಕ್ ಐಕಾನಿಕ್ ವಿನ್ಯಾಸಕ್ಕೆ ಯಾವುದೇ ಚ್ಯುತಿ ಬರದಂತೆ ನೋಡಿಕೊಳ್ಳುವುದು ನಮ್ಮ ಮುಂದಿರುವ ದೊಡ್ಡ ಸವಾಲಾಗಿತ್ತು. ನೂತನ ವಿನ್ಯಾಸವು ಹೆಚ್ಚಿನ ರಸ್ತೆ ಸಾನಿಧ್ಯವನ್ನು ತೋರ್ಪಡಿಸಲಿದೆ" ಎಂದು ವಿವರಿಸಿದ್ದಾರೆ.
ವೈಶಿಷ್ಟ್ಯಗಳು
ಸಂಪೂರ್ಣ ಎಲ್‌ಇಡಿ ಅಡಾಪ್ಟಿವ್ ಹೆಡ್ ಲ್ಯಾಂಪ್,
ವಿಶಿಷ್ಟ ಹೆಡ್ ಲೈಂಡ್ ಗ್ರಾಫಿಕ್ಸ್,
ಹೊಸ ಎಂಜಿನ್ ಆಯ್ಕೆ,
ಹೆಚ್ಚಿನ ಸುರಕ್ಷತೆ, ಅನುಕೂಲತೆ,
ಒಳಮೈ ವೈಶಿಷ್ಟ್ಯಗಳು


Click it and Unblock the Notifications








