ಸಜ್ಜಾಗಿರಿ; ಬರುತ್ತಿದೆ ಹೋಂಡಾದಿಂದ ಹೊಸ ಕಾರು
ವಾಹನ ಪ್ರೇಮಿಗಳಿಗೆ ಮಗದೊಂದು ಖುಷಿ ಸುದ್ದಿ ಬಂದಿದ್ದು, ದೇಶದ ಮುಂಚೂಣಿಯ ವಾಹನ ಸಂಸ್ಥೆಗಳಲ್ಲಿ ಒಂದಾಗಿರುವ ಹೋಂಡಾ, ಸದ್ಯದಲ್ಲೇ ಅತಿ ನೂತನ ಕಾರೊಂದನ್ನು ಬಿಡುಗಡೆ ಮಾಡಲಿದೆ.
ಆದರೆ ಈ ಬಗೆಗಿನ ವಿವರಗಳನ್ನು ಗೌಪ್ಯವಾಗಿಟ್ಟುಕೊಂಡಿರುವ ಹೋಂಡಾ, ಕೇವಲ ಟೀಸರ್ ವೀಡಿಯೋ ಜೊತೆಗೆ ಚಿತ್ರವನ್ನಷ್ಟೇ ಬಿಡುಗಡೆ ಮಾಡಿದೆ. ಇದು ವಾಹನ ಪ್ರೇಮಿಗಳಲ್ಲಿ ಇನ್ನಷ್ಟು ಕುತೂಹಲ ಮಾಡುವಲ್ಲಿ ಕಾರಣವಾಗಿದೆ.

ವಾಹನ ತಜ್ಞರ ಪ್ರಕಾರ ಹೋಂಡಾ ಮುಂಬರುವ ಕಾರು ಬಹುನಿರೀಕ್ಷಿತ ಜಾಝ್ ಆಗಿರಲಿದೆ. ಕಳೆದ ಒಂದೆರಡು ವರ್ಷಗಳಿಂದ ಸುದ್ದಿಯಲ್ಲಿರುವ ಹೋಂಡಾ ತವರೂರಾದ ಜಪಾನ್ ನಲ್ಲಿ ಭಾರಿ ಯಶಸ್ಸು ಕಂಡಿತ್ತು.
ಪ್ರಸ್ತುತ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರು ಅತಿ ಶೀಘ್ರದಲ್ಲೇ ಭಾರತ ಮಾರುಕಟ್ಟೆ ತಲುಪಲಿದೆ. ವೀಡಿಯೋದಲ್ಲಿ ತೋರಿಸಿರುವ ಚಿತ್ರಣಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ಮತ್ತಷ್ಟು ಪುಷ್ಠಿಯನ್ನು ನೀಡುತ್ತದೆ.
ಒಟ್ಟಿನಲ್ಲಿ ಹೋಂಡಾ ಜಾಝ್ ಶುಭ ಸಮಾಚಾರವನ್ನು ಹೋಂಡಾ ಯಾವಾಗ ಬಿಡುಗಡೆ ಮಾಡಲಿದೆ ಎಂಬುದು ರೋಚಕತೆಗೆ ಕಾರಣವಾಗಿದೆ. ಯಾಕೆಂದರೆ ಈಗಾಗಲೇ ಅಮೇಜ್, ಸಿಟಿ, ಮೊಬಿಲಿಯೊಗಳಂತಹ ಮಾದರಿಗಳ ಮೂಲಕ ಭಾರಿ ಸದ್ದು ಮಾಡಿರುವ ಹೋಂಡಾ ಜಾಝ್ ಮುಖಾಂತರವೂ ತನ್ನ ಯಶಸ್ಸನ್ನು ಮುಂದುವರಿಸುವ ಯೋಜನೆ ಹೊಂದಿದೆ.


Click it and Unblock the Notifications








