ಎಆರ್‌ಎಐ ಎಲೆಕ್ಟ್ರಿಕ್ ಪರೀಕ್ಷಾರ್ಥ ಘಟಕಕ್ಕೆ 80 ಕೋಟಿ ನೆರವು
ಕೇಂದ್ರ ಸರಕಾರದ ಮಹತ್ತರ ಫೇಮ್ (ಅತಿ ವೇಗದಲ್ಲಿ ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಒಗ್ಗುವಿಕೆ ಮತ್ತು ತಯಾರಿ) ಯೋಜನೆಯ ಭಾಗವಾಗಿ ಭಾರತೀಯ ವಾಹನ ಅಧ್ಯಯನ ಸಂಸ್ಥೆಯು (ARAI) ಎಲೆಕ್ಟ್ರಿಕ್ ಪರೀಕ್ಷಾರ್ಥ ಘಟಕಕ್ಕೆ ಬರೋಬ್ಬರಿ 80 ಕೋಟಿ ರುಪಾಯಿಗಳ ನೆರವು ನೀಡಲು ನಿರ್ಧರಿಸಿದೆ.
ಈ ಸಂಬಂಧ ಕೇಂದ್ರ ಸರಕಾರವು ಈಗಾಗಲೇ 30 ಕೋಟಿ ರುಪಾಯಿಗಳ ನೆರವು ನೀಡಿದ್ದು, ಬಾಕಿ ಉಳಿದ ಮೊತ್ತವನ್ನು ಮುಂದಿನ ವರ್ಷ ಹಸ್ತಾಂತರಿಸಲಿದೆ. ನೂತನ ಎಲೆಕ್ಟ್ರಿಕ್ ವಾಹನ ಘಟಕವು ಪುಣೆಯಲ್ಲಿ ತಲೆಯೆತ್ತಲಿದೆ.

ಇಲ್ಲಿನ ಅಧ್ಯಯನ ಹಾಗೂ ಅಭಿವೃದ್ಧಿ ಘಟಕದಲ್ಲಿ ವಿದ್ಯುತ್ ಚಾಲಿತ ವಾಹನಗಳ ವೃದ್ಧಿಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು. ಅಲ್ಲದೆ ಬಸ್ ಗಳ ನಿರ್ಮಾಣದಲ್ಲೂ ಹಗುರ ಭಾರದ ಉಪಕರಣಗಳನ್ನು ಬಳಕೆ ಮಾಡಲಾಗುವುದು.
ಸುಸ್ಥಿರ ಪರಿಸರ ಸಂಚಾರ ವಾಹಕಕ್ಕೆ ಶಾಶ್ವತ ಪರಿಹಾರ ಹುಡುಕುವುದು ಯೋಜನೆಯ ಉದ್ದೇಶವಾಗಿರಲಿದೆ. ಅಲ್ಲದೆ ಈಗಿರುವ ಸಾರ್ವಜನಿಕ ವಾಹನಗಳನ್ನು ಹೈಬ್ರಿಡ್ ಅಥವಾ ಎಲೆಕ್ಟ್ರಿಕ್ ಆಗಿ ಪರಿವರ್ತಿಸುವ ಗುರಿಯನ್ನು ಎಆರ್‌ಎಐ ಹೊಂದಿದೆ.
ಭಾರತವು ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿದ್ದು, 2020ರ ವೇಳೆಯಾಗುವಾಗ 5ರಿಂದ 7 ದಶಲಕ್ಷದಷ್ಟು ಎಲೆಕ್ಟ್ರಿಕ್ ಹಾಗೂ ಪ್ಲಗ್ ಇನ್ ಎಲೆಕ್ಟ್ರಿಕ್ ವಾಹನಗಳು ಕಂಡುಬರಲಿದೆ.


Click it and Unblock the Notifications