ಒಂದಲ್ಲ, ಎರಡಲ್ಲ ಆಡಿಯಿಂದ 10 ಕಾರು ಅಭಿವೃದ್ಧಿ

By Nagaraja

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಆಡಿ, ಒಂದಲ್ಲ ಎರಡಲ್ಲ ಭರ್ಜರಿ 10 ಮಾದರಿಗಳನ್ನು ಅಭಿವೃದ್ಧಿಪಡಿಸಲಿದೆ. ಇದಕ್ಕಾಗಿ ಭರ್ಜರಿ 24 ಬಿಲಿಯನ್ ಯುರೋ ಹೂಡಿಕೆ ಮಾಡಲಿದೆ.

2019ರ ವೇಳೆಗೆ ಈ ಮೊತ್ತವನ್ನು ಹೂಡಿಕೆ ಮಾಡುವುದು ಸಂಸ್ಥೆಯ ಇರಾದೆಯಾಗಿದೆ. ಅಲ್ಲದೆ ಹೂಡಿಕೆಯ ಶೇಕಡಾ 70ರಷ್ಟು ಭಾಗವು ಹೊಸ ಮಾದರಿಗಳ ತಯಾರಿ ಹಾಗೂ ತಾಂತ್ರಿಕ ಅಭಿವೃದ್ಧಿಗೆ ಮೀಸಲಿರಿಸಲಾಗುವುದು ಎಂಬುದನ್ನು ಸಂಸ್ಥೆ ಸ್ಪಷ್ಟಪಡಿಸಿದೆ. ಬಾಕಿ ಉಳಿದ ಶೇ. 30ರಷ್ಟು ಮೊತ್ತವು ಅತ್ಯುತ್ತಮ ಸಂವಹನ ಹಾಗೂ ಡ್ರೈವಿಂಗ್ ಅಸಿಸ್ಟನ್ಸ್ ಸಿಸ್ಟಂ ಅಭಿವೃದ್ಧಿಗೆ ಮೀಸಲಿಡಲಾಗುವುದು.

AUDI

ಹೊಸ ಪೀಳಿಗೆಯ ದಹನಕಾರಿ ಎಂಜಿನ್ ಅಭಿವೃದ್ಧಿಪಡಿಸುವುದು ಸಂಸ್ಥೆಯ ಯೋಜನೆಯಾಗಿದ್ದು, ಇದು ಹೆಚ್ಚು ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

ಇನ್ನುಳಿದಂತೆ ಪರಿಸರ ಸ್ನೇಹಿ ಹೈಬ್ರಿಡ್ ಹಾಗೂ ಫ್ಯೂಯಲ್ ಸೆಲ್ ವಾಹನಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ. ಈ ಎಲ್ಲ ಮಾದರಿಗಳು ನಿರಂತರ ಅಂತರಾಳದಲ್ಲಿ 2020ರ ವೇಳೆಯಾಗುವಾಗ ಬಿಡುಗಡೆಯಾಗಲಿದೆ.

Most Read Articles

Kannada
English summary
Audi has announced plans to invest 24 billion Euros to develop 10 new models. The German luxury carmaker will invest this amount through 2019.
Story first published: Thursday, January 1, 2015, 12:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X