ಆಸ್ಟ್ರೇಲಿಯಾ ಸಂಸ್ಥೆಯಿಂದ ಎಲೆಕ್ಟ್ರಿಕ್ ಆಫ್ ರೋಡ್ ಗಾಡಿ ತಯಾರಿ

Written By:

ಆಸ್ಟ್ರೇಲಿಯಾ ಮೂಲದ ರೆಡ್ ಆಟೋಮೋಟಿವ್, ಎಲೆಕ್ಟ್ರಿಕ್ ಆಫ್ ರೋಡರ್ ವಾಹನ ನಿರ್ಮಾಣಕ್ಕೆ ಮುಂದಾಗುತ್ತಿದೆ. ಇದು ಭವಿಷ್ಯದಲ್ಲೇ ರಸ್ತೆ ಪ್ರವೇಶಿಸಲಿದೆ ಎಂಬುದು ತಿಳಿದು ಬಂದಿದೆ.

ಆಫ್ ರೋಡ್ ಅಂದ ಮೇಲೆ ಇದೊಂದು ಪಕ್ಕ ಕ್ರೀಡಾ ಬಳಕೆಯ ವಾಹನವಾಗಿರಲಿದೆ. ಆದರೆ ಇನ್ನಷ್ಟೇ ನಾಮಕರಣವಾಗಬೇಕಾಗಿದೆ.

To Follow DriveSpark On Facebook, Click The Like Button
ಆಫ್ ರೋಡ್

ಮೂಲಗಳ ಪ್ರಕಾರ ಅಧ್ಯಯನ ಹಾಗೂ ಅಭಿವೃದ್ಧಿ ಪ್ರಾಥಮಿಕ ಹಂತದಲ್ಲಿದ್ದು, ಒಂದು ಅತ್ಯಾಕರ್ಷಕ ವಿದ್ಯುತ್ ಚಾಲಿತ ಆಫ್ ರೋಡ್ ವಾಹನ ತಯಾರಿಸಲು ಸಂಸ್ಥೆಯು ಬಹಳಷ್ಟು ಉತ್ಸುಕವಾಗಿದೆ.

ನಾಲ್ಕು ಎಲೆಕ್ಟ್ರಿಕ್ ಮೋಟಾರುಗಳಿಂದ ನಿಯಂತ್ರಿಸಲ್ಪಡುವ ಈ ವಾಹನದಲ್ಲಿ ಟು ಸ್ಪೀಡ್ ಗೇರ್ ಬಾಕ್ಸ್ ಆಳವಡಿಸುವ ಯೋಜನೆ ಹೊಂದಿದೆ. ಅಲ್ಲದೆ ನಾಲ್ಕು ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಹಾಗೂ ಗಂಟೆಗೆ ಗರಿಷ್ಠ 250 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

190 ಕೀ.ಮೀ. ವ್ಯಾಪ್ತಿಯ ವರೆಗೆ ಸಂಚರಿಸಲು ಸಾಮರ್ಥ್ಯ ಹೊಂದಿರುವ ಈ ಎಲೆಕ್ಟ್ರಿಕ್ ವಾಹನಕ್ಕೆ ಸಾಮಾನ್ಯ ಆಂತರಿಕ ದಹನಕಾರಿ ಎಂಜಿನ್ ಆಳವಡಿಸುವ ಮೂಲಕ 1200 ಕೀ.ಮೀ. ವರೆಗೆ ವ್ಯಾಪ್ತಿಯನ್ನು ವಿಸ್ತರಿಸುವುದು ಸಂಸ್ಥೆಯ ಯೋಜನೆಯಾಗಿದೆ. ಅಂತೆಯೇ ಭಾರವನ್ನು 3600 ಕೆ.ಜಿಗಳಿಗೆ ಕಾಪಾಡಿಕೊಳ್ಳಲಾಗುವುದು.

ಈ ಸಂಬಂಧ ಆಕರ್ಷಕ ಕಾನ್ಸೆಪ್ಟ್ ಚಿತ್ರವನ್ನು ಸಂಸ್ಥೆಯು ಬಿಡುಗಡೆಗೊಳಿಸಿತ್ತು ಮತ್ತಷ್ಟು ಆಕರ್ಷಣೆಗೆ ಪಾತ್ರವಾಗಿದೆ. ಮಾರುಕಟ್ಟೆಯಲ್ಲ ಟೆಸ್ಲಾ ಮಾಡೆಲ್ ಎಕ್ಸ್ ಮುಂತಾದ ಮಾದರಿಗಳ ಸವಾಲನ್ನು ಎದುರಿಸಲಿರುವ ರೆಡ್ ಆಟೋಮೋಟಿವ್ ಲೈಫ್ ಸ್ಟೈಲ್ ವಾಹನ ಆರಂಭದಲ್ಲಿ ಆಸ್ಟ್ರೇಲಿಯಾ ಜೊತೆಗೆ ಅಮೆರಿಕ ಹಾಗೂ ಯುರೋಪ್ ಮಾರುಕಟ್ಟೆಗಳಿಗೆ ಕಾಲಿಡಲಿದೆ.

English summary
An Australian Company's Plan Of Building A Very Capable Electric Off-Roader
Story first published: Saturday, November 28, 2015, 11:43 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark