ಅವಿಗ್ನಾ ಮೋಟಾರ್ ಸ್ಪೋರ್ಟ್ಸ್‌ನಿಂದ ಎಟಿವಿ ವಾಹನಗಳು ಬಿಡುಗಡೆ
ಎಡಿ ಸಂಸ್ಥೆಯ ಭಾಗವಾಗಿರುವ ಅವಿಗ್ನಾ ಮೋಟಾರ್ ಸ್ಪೋರ್ಟ್ಸ್ ಕರ್ನಾಟಕದಲ್ಲಿ ವಿವಿಧ ಶ್ರೇಣಿಯ ಆಲ್ ಟರೈನ್ ವೆಹಿಕಲ್ಸ್ (ಎಟಿವಿ) ಹಾಗೂ ಕ್ವಾಡ್ ಬೈಕ್ ಗಳನ್ನು ಬಿಡುಗಡೆಗೊಳಿಸಿದೆ. ಇದೇ ವೇಳೆ ಉದ್ಯಾನನಗರಿ ಬೆಂಗಳೂರಿನಲ್ಲಿ ಚೊಚ್ಚಲ ಶೋ ರೂಂ ತೆರೆದುಕೊಂಡಿದೆ. ಇದು ಪ್ರೆಸ್ಟೀಜ್ ಆರ್ಚ್, ಇನ್‌ಫ್ರೆಂಟಿ ರಸ್ತೆಯಲ್ಲಿರಲಿದೆ.
ಮೋಟಾರು ಸ್ಪೋರ್ಟ್ ರೇಸಿಂಗ್, ಎಲೆಕ್ಟ್ರಿಕ್ ಗಾಲ್ಫ್ ಕಾರ್ಟ್ಸ್, ಆಂಫಿಬಿಯಸ್ (ಉಭಯಚರ) ವಾಟರ್ ಕ್ರಾಫ್ಟ್ ಮತ್ತು ಕೃಷಿ ವಾಹನಗಳನ್ನು ಹೊಂದಿರುವ ವಿಸ್ತಾರ ಶ್ರೇಣಿಯ ಎಟಿವಿಗಳನ್ನು ಹೊಂದಿದೆ. ಹಾಗೆಯೇ ಮೋಟಾರ್ ಸ್ಪೋರ್ಟ್ ಉತ್ಸಾಹಿಗಳಿಗೆ ಅತಿದೊಡ್ಡ ಎಎಂಎಸ್ ಗೇರ್ ಗಳ ಸಂಗ್ರಹವನ್ನು ಹೊಂದಿರಲಿದೆ. ಅಂತೆಯೇ ಹೆಣ್ಣೂರಿನಲ್ಲಿ ಆಱು ಕಿಲೋಮೀಟರ್ ಕೆಸರಿನ ಟ್ರ್ಯಾಕ್ ಗೆ ಕೂಡಾ ಹೂಡಿಕೆ ಮಾಡಲಾಗುತ್ತದೆ.

ಆಲ್ ಟರೈನ್ ವೆಹಿಕಲ್ಸ್ ಕ್ವಾಡ್ ಬೈಕ್, ಫೋರ್ ವೀಲರ್ ಅಥವಾ ಆಫ್ ರೋಡ್ ವೆಹಿಕಲ್ಸ್ ಹೀಗೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಇದನ್ನು ಮಿನಿ ಕಾರು ಮತ್ತು ಮೋಟಾರ್ ಸೈಕಲ್ ನಡುವೆ ಸಂಕರ ಎಂದು ವ್ಯಾಖ್ಯಾನಿಸಲಾಗುತ್ತದೆ. ಹೆಸರೇ ಸೂಚಿಸುವಂತೆ ಎಟಿವಿ ವಿಸ್ತಾರ ಬಗೆಯ ಭೂ ಪ್ರದೇಶದಲ್ಲಿ ಸಂಚರಿಸುತ್ತದೆ. ಎಟಿವಿಯನ್ನು ಸ್ಪೋರ್ಟ್ಸ್ ಜಾಯ್ ರೈಡರ್ ಆಗಿ ಅಥವಾ ಯುಟಿಲಿಟಿ ಯಂತ್ರವಾಗಿಯೂ ಬಳಸಬಹುದು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಅವಿಗ್ನಾ ಮೋಟಾರ್ ಸ್ಪೋರ್ಟ್ಸ್ ಇಂಡಿಯಾ ಸಂಸ್ಥಾಪಕ ಮತ್ತು ಸಿಇಒ ಶ್ರೀ ಅನುಪಮ್ ದೇಬ್, "ಭಾರತದಲ್ಲಿ ಚಿಕ್ಕ ಚಿಕ್ಕ ನಗರಗಳತ್ತವೂ ಗಮನ ನೀಡಿರುವ ಅವಿಗ್ನಾ ಮೋಟಾರ್ ಸ್ಪೋರ್ಟ್ಸ್ , ತನ್ನ ಸ್ಥಾನವನ್ನು ಎಟಿವಿ ಮತ್ತು ಕ್ವಾಡ್ ಬೈಕ್ ವಿಭಾಗದಲ್ಲಿ ಭದ್ರಪಡಿಸಿಕೊಂಡಿದೆ. ಸಂಸ್ಥೆಯ ಪ್ರಗತಿಗೆ ವಿವಿಧ ಉತ್ಪನ್ನ ಹಾಗೂ ವಿತರಣೆ ಜಾಲವನ್ನು ರಾಷ್ಟ್ರೀಯವಾಗಿ ಪ್ರಾರಂಭಿಸಲಾಗಿದ್ದು, ದೇಶದ್ಯಂತ ನೂತನ ಡೀಲರ್ ಶಿಪ್ ತೆರೆಯುವುದಕ್ಕೆ ತನ್ನ ಬದ್ಧತೆಯನ್ನು ಪ್ರತಿನಿಧಿಸುತ್ತಿದೆ ಮತ್ತು ಗ್ರಾಹಕರ ಅನುಭವಕ್ಕೆ ಹೊಸ ಮೈಲುಗಲ್ಲು ಒದಗಿಸಿದೆ. ಇವೆಲ್ಲದರ ಹೊರತಾಗಿ ಯಾವುದೇ ಷರತ್ತುಗಳಿಲ್ಲದೆ ಒಂದು ವರ್ಷದ ವಾಹನ ವಿಮೆಯನ್ನು ನೀಡಲಿದೆ" ಎಂದಿದ್ದಾರೆ.

ವಿಶೇಷವೆಂದರೆ ಅವಿಗ್ನಾ ಮೋಟಾರ್ ಸ್ಪೋರ್ಟ್ಸ್ ಪ್ರತಿ ರಾಜ್ಯಗಳಲ್ಲೂ ಒಂದರಿಂದ ಎರಡು ಎಕರೆಗಳಷ್ಟು ಡರ್ಟ್ ಟ್ರ್ಯಾಕ್ ಗಳನ್ನು ಅಭಿವೃದ್ಧಿಪಡಿಸಲಿದೆ. ಅಲ್ಲದೆ ಎಲ್ಲ ಡೀಲರ್ ಶಿಪ್ ಗಳು ಸೇಲ್ಸ್, ಸರ್ವೀಸ್ ಹಾಗೂ ಸ್ಪೇರ್ ಪಾರ್ಟ್ಸ್ ಸೌಲಭ್ಯಗಳನ್ನು ಹೊಂದಿರಲಿದೆ.

ಅವಿಗ್ನಾ ಮೋಟಾರ್ ಸ್ಪೋರ್ಟ್ಸ್ ನಲ್ಲಿ 110 ಸಿಸಿ ನಿಂದ ಆರಂಭವಾಗಿ 200 ಸಿಸಿ ಪ್ಲಸ್, 150 ಸಿಸಿ ಪ್ಲಸ್ 500 ಸಿಸಿ ಪ್ಲಸ್ ಮತ್ತು 1200 ಸಿಸಿ ವರೆಗೆ ವಾಹನಗಳು ಲಭ್ಯವಾಗಲಿದೆ. ಇವೆಲ್ಲವನ್ನು ಭಾರತಕ್ಕೆ ಕಂಪ್ಲೀಟ್ ನೌಕ್ಡ್ ಡೌನ್ ಸಿದ್ಧಾಂತದಲ್ಲಿ ತಂದು ಮಾರಾಟ ಮಾಡಲಾಗುವುದು.

ಈ ಎಲ್ಲ ಉತ್ಪನ್ನಗಳು 1.5 ಲಕ್ಷ ರು.ಗಳಿಂದ 18 ಲಕ್ಷ ರು.ಗಳ ವರೆಗೆ ದುಬಾರಿಯೆನಿಸಲಿದೆ. ಎಟಿವಿಗಳಿಗೆ ಭಾರತ ಒಳಗೊಂಡು ಹಲವು ದೇಶಗಳಲ್ಲಿ ರಿಜಿಸ್ಟ್ರೇಷನ್ ಅಗತ್ಯವಿಲ್ಲ ಮತ್ತು ಡ್ರೈವಿಂಗ್ ಲೈಸನ್ಸ್ ಅಗತ್ಯವಿಲ್ಲ. ಕಾರ್ನಾಟಕ ರಾಜ್ಯಗಳಲ್ಲಿ ಆರ್ ಟಿಒ ನೋಂದಣಿ ಲಭ್ಯ.


Click it and Unblock the Notifications








