ಸತತ 4ನೇ ಬಾರಿಯೂ ಬೆಂಟ್ಲಿ ಶ್ರೇಷ್ಠ ಉದ್ಯೋಗದಾತ
ನೀವು ಹೊಸ ಕೆಲಸದ ಹುಡುಕಾಟದಲ್ಲಿದ್ದೀರಾ? ನೀವು ಆಟೋಮೊಬೈಲ್ ಎಂಜಿನಿಯಿರ್ ಓದಿದ್ದರೆ ನಿಮಗಿದು ಹೆಚ್ಚು ಹೊಂದಿಕೆಯಾಗಬಹುದು. ಆದರೆ ಒಂದೇ ಒಂದು ತೊಡಕು ಏನೆಂದರೆ ನೀವು ಬ್ರಿಟನ್‌ಗೆ ತೆರಳಬೇಕಾಗುತ್ತದೆ.
ನಾವು ಇಷ್ಟೆಲ್ಲ ವಿಷಯ ಹೇಳಲು ಕಾರಣವೊಂದಿದೆ. ಯಾಕೆಂದರೆ ಸತತ ನಾಲ್ಕನೇ ಬಾರಿಯೂ ಬ್ರಿಟನ್ ಮೂಲದ ಬೆಂಟ್ಲಿ ಸಂಸ್ಥೆಯು ಅಗ್ರ ಉದ್ಯೋಗದಾತ ಪ್ರಶಸ್ತಿಗೆ ಅರ್ಹವಾಗಿದೆ.

ತನ್ನ ಉದ್ಯೋಗಿಗಳ ಹತ್ತಿರ ಬ್ರಿಟನ್‌ನ ಈ ಜನಪ್ರಿಯ ಸಂಸ್ಥೆಯು ತೋರ್ಪಡಿಸುತ್ತಿರುವ ಬದ್ಧತೆಯು ಉದ್ಯೋಗಿಗಳ ವೈಯಕ್ತಿಕ ವಿಕಸನದಲ್ಲಿ ಹೆಚ್ಚು ನೆರವಾಗುತ್ತಿದೆ. ಬೆಂಟ್ಲಿ ಕ್ರ್ಯೂ ಮುಖ್ಯ ಕಚೇರಿಯಲ್ಲಿ 3,800ರಷ್ಟು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ.
ಬೆಂಟ್ಲಿ ಘಟಕದಲ್ಲಿ ಉದ್ಯೋಗಿಗಳಿಗೆ ತಮ್ಮ ಎಂಜಿನಿಯರ್ ಕೌಶಲ್ಯ ವೃದ್ಧಿಸಿಕೊಳ್ಳಲು ತರಬೇತಿ ನೀಡಲಾಗುತ್ತದೆ. ಇನ್ನೊಂದೆಡೆ ಸಂಸ್ಥೆಯು 2014ನೇ ಸಾಲಿನಲ್ಲಿ 11,020 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಮಾರಾಟ ಏರುಗತಿಯನ್ನು ಸಾಧಿಸಿತ್ತು.
ಹಾಗೊಂದು ವೇಳೆ ನೀವು ಕೂಡಾ ವಾಹನ ಸಂಸ್ಥೆಯಲ್ಲಿ ಕೆಲಸ ಮಾಡುವವರಾಗಿದ್ದರೆ ನಿಮ್ಮ ಅನುಭವವನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.


Click it and Unblock the Notifications








