ಇನ್ನು ಮುಂದೆ ಟ್ಯಾಕ್ಸಿಯಲ್ಲಿ ವಾಂತಿ ಮಾಡಿದ್ರೆ ನೊ ಪ್ರಾಬ್ಲಂ!

By Nagaraja

ವಾಹನದಲ್ಲಿ ದೂರ ಸಂಚಾರದ ವೇಳೆ ವಾಂತಿ ಮಾಡುವ ಅಭ್ಯಾಸ ನಿಮಗಿದೆಯೇ? ಸಮಸ್ಯೆ ಇಲ್ಲ ಬಿಡಿ. ಇನ್ನು ಮುಂದೆ ಟ್ಯಾಕ್ಸಿಯಲ್ಲಿ ವಾಂತಿ ಮಾಡಿದರೆ ನೊ ಪ್ರಾಬ್ಲಂ!

ಹ್ಹಂ! ಇದೇನಿದು ಅಂತ ಗಾಬರಿಯಾಗಬೇಡಿ! ಸದ್ಯ ಇಂತಹದೊಂದು ನಿಯಮ ನಮ್ಮ ಭಾರತಕ್ಕೆ ಬಂದಿಲ್ಲ. ಬದಲಾಗಿ ದಕ್ಷಿಣ ಕೊರಿಯಾದಲ್ಲಿ ಇದು ನನಸಾಗುತ್ತಿದೆ.

korean taxi

ಆದರೆ ಸುಮ್ ಸುಮ್ನೇ ನೀವು ವಾಂತಿ ಮಾಡಿ ಜಾಗ ಖಾಲಿ ಮಾಡುವಂತಿಲ್ಲ. ಬದಲಾಗಿ 8.500 ರು.ಗಳಷ್ಟು ದಂಡ ಪಾವತಿಸಬೇಕಾಗಿದೆ. ಹೇಗಿದೆ ನೋಡಿ ಹೊಸ ಉಪಾಯ?

ಅಷ್ಟಕ್ಕೂ ಇಂತಹದೊಂದು ನಿಲುವು ಅನುಸರಿಸಲು ಕಾರಣವೊಂದಿದೆ. ದಕ್ಷಿಣ ಕೊರಿಯಾದಲ್ಲಿ ಪಾನಮತ್ತರಾಗಿ ಟ್ಯಾಕ್ಸಿಗಳಲ್ಲಿ ಸಂಚರಿಸುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಕಾರಿನಲ್ಲೇ ತಮ್ಮ ಕೆಲಸ ಮಾಡಿ ಬಿಟ್ಟು ಹೊರಟು ಹೋಗುತ್ತಾರೆ.

ಸದ್ಯ ದಕ್ಷಿಣ ಕೊರಿಯಾದ್ಯಾಂತ ನಿಯಮ ಜಾರಿಗೆ ಬಂದಿಲ್ಲ. ಬದಲಾಗಿ ರಾಜಧಾನಿ ಸಿಯೋಲ್‌ನಲ್ಲಿರುವ ಎರಡು ಚಾಲಕರ ಸಂಸ್ಥೆಯು ಇಂತಹದೊಂದು ನೀತಿಯನ್ನು ಅನುಸರಿಸಿದ್ದಾರೆ.

ಹಾಗಿದ್ದರೆ ಟ್ಯಾಕ್ಸಿ ಪ್ರಿಯ ಭಾರತದಲ್ಲೂ ಇದೇ ನಿಯಮ ಜಾರಿಗೆ ಬಂದರೆ ಹೇಗಿರಬಹುದು? ನಿಮ್ಮ ಬಹುಮೂಲ್ಯ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

Most Read Articles

Kannada
English summary
Think, then drink. That's what the two drivers associations are saying to customers of their cab services in the South Korean capital city of Seoul. 
Story first published: Monday, February 2, 2015, 10:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X