ಬಿಎಂಡಬ್ಲ್ಯು ಪರಿಷ್ಕೃತ 1 ಸಿರೀಸ್ ಕಾರಿಗೆ ಮಹತ್ವವೇನು?

Written By:

ಜರ್ಮನಿಯ ಪ್ರೀಮಿಯಂ ಸಂಸ್ಥೆಯಾಗಿರುವ ಬಿಎಂಡಬ್ಲ್ಯುಸದ್ಯದಲ್ಲೇ ಭಾರತಕ್ಕೆ 1 ಸಿರೀಸ್ ಕಾರಿನ ಪರಿಷ್ಕೃತ ಮಾದರಿಯನ್ನು ಬಿಡುಗಡೆ ಮಾಡಲಿದೆ. ಇದು ದೇಶದ ಮಾರುಕಟ್ಟೆಯಲ್ಲಿ ಉತ್ತಮ ಮಾರಾಟ ಕಾಯ್ದುಕೊಳ್ಳುವ ನಿರೀಕ್ಷೆಯನ್ನಿಟ್ಟುಕೊಂಡಿದೆ.

ಇದು ಭಾರತದಲ್ಲಿ ಬಿಎಂಡಬ್ಲ್ಯು ಸಂಸ್ಥೆಯಿಂದ ಮಾರಾಟವಾಗುತ್ತಿರುವ ಏಕಮಾತ್ರ ಹ್ಯಾಚ್ ಬ್ಯಾಕ್ ಕಾರಾಗಿದೆ. ಹಾಗಾಗಿ ಆಡಂಬರ ಕಾರುಗಳನ್ನು ಇಷ್ಟಪಡುವ ಗ್ರಾಹಕರಿಗಿದು ಅತ್ಯುತ್ತಮ ಆಯ್ಕೆಯಾಗಿರಲಿದೆ.

BMW 1 series

ಜಾಗತಿಕ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು 1 ಸಿರೀಸ್ ಕಾರು ಹ್ಯಾಚ್ ಬ್ಯಾಕ್ ಹಾಗೂ ಸೆಡಾನ್ ಮಾದರಿಗಳಲ್ಲಿ ದೊರಕುತ್ತದೆ. ಆದರೆ ಭಾರತಕ್ಕೆ ಹ್ಯಾಚ್ ಬ್ಯಾಕ್ ಮಾದರಿ ಮೊದಲು ಪ್ರವೇಶಿಸಲಿದ್ದು, ಬಳಿಕ ಸೆಡಾನ್ ಹಿಂಬಾಲಿಸುವ ಸಾಧ್ಯತೆಯಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಗಳಲ್ಲಿ 1 ಸಿರೀಸ್ ಲಭ್ಯವಾಗಲಿದೆ. ಹಾಗೆಯೇ 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರಲಿದೆ. ಇನ್ನು ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಹೆಚ್ಚು ಆಕರ್ಷಕವಾಗಿಸಲಿದೆ.

English summary
German luxury car manufacturer, BMW currently offers the 1 Series as their most affordable product. It is also their only hatchback offering in the Indian market.
Story first published: Saturday, April 11, 2015, 14:56 [IST]
Please Wait while comments are loading...

Latest Photos