ಬಿಎಂಡಬ್ಲ್ಯು-ಟೊಯೊಟಾದಿಂದ ಎಂಟ್ರಿ ಲೆವೆಲ್ ಕಾರು?
ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ಹಾಗೂ ಜಪಾನ್‌ನ ಆಟೋ ದೈತ್ಯ ಟೊಯೊಟಾ ಪಾಲುದಾರಿಕೆಯಲ್ಲಿ ಹೊಸ ಎಂಟ್ರಿ ವೆವೆಲ್ ಕಾರು ಸಿದ್ಧಗೊಳ್ಳಲಿದೆ.
ನಮಗೆ ದೊರಕಿರುವ ಮಾಹಿತಿಗಳು ನಿಜವಾದ್ದಲ್ಲಿ ಬಿಎಂಡಬ್ಲ್ಯು ಹಾಗೂ ಟೊಯೊಟಾ ಜೊತೆಯಾಗಿ ಸಣ್ಣ ಹ್ಯಾಚ್‌ಬ್ಯಾಕ್ ಕಾರನ್ನು ಅಭಿವೃದ್ಧಿಪಡಿಸಲಿದೆ. ಈ ಹಿಂದೆಯೂ ಜತೆಯಾಗಿ ಕೆಲಸ ಮಾಡಿರುವ ಈ ಎರಡು ಸಂಸ್ಥೆಗಳಿಗೆ ಇದು ಹೊಸತೇನಲ್ಲ.

ಟೊಯೊಟಾದ ಡೀಸೆಲ್ ಎಂಜಿನ್ ನೆರವಿನಲ್ಲಿ ಮೊದಲ ಡೀಸೆಲ್ ಕಾರನ್ನು ಮಿನಿ ಬಿಡುಗಡೆ ಮಾಡಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಪ್ರಸ್ತುತ ಯೋಜನೆಯು 2003ರಲ್ಲಿ ಆರಂಭಿಸಿತ್ತು.
ತದಾ ಬಳಿಕ 2011ರಲ್ಲಿ ಮಗದೊಮ್ಮೆ ಜೊತೆಯಾಗಿತ್ತು. ಅಂದು ಟೊಯೊಟಾದ ಸುಪ್ರಾ ರಿಯರ್ ವೀಲ್ ಡ್ರೈವ್ ವ್ಯವಸ್ಥೆಗೆ ನೆರವಾಗುವ ಭರವಸೆಯನ್ನು ಬಿಎಂಡಬ್ಲ್ಯು ನೀಡಿತ್ತು. ಇದಕ್ಕೆ ಬದಲಾಗಿ ಟೊಯೊಟಾದ ಫ್ಯೂಯಲ್ ಸೆಲ್ ತಂತ್ರಗಾರಿಕೆಯನ್ನು ಹಂಚಿಕೊಳ್ಳುವಂತೆ ವಿನಂತಿಸಿತ್ತು.
ಈಗ ಮಿನಿಯ ಸಣ್ಣ ಕಾರು ಪರಿಚಯಿಸುವ ಯೋಜನೆಯನ್ನು ಇತ್ತಂಡಗಳು ಹೊಂದಿದೆ. ಇದು 'ಮೈನರ್' ಎಂದೆನಿಸಿಕೊಳ್ಳಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಸದ್ಯಕ್ಕೆ ಲಭ್ಯವಾಗಿಲ್ಲ. ಇದು ಇತ್ತೀಚೆಗಿನ ಆಟೋ ಶೋದಲ್ಲಿ ಪ್ರದರ್ಶನಗೊಂಡಿರುವ ಮಿನಿ ರಾಕೆಟ್ ಮ್ಯಾನ್ ಆಗಿದ್ದರೆ ತಳ್ಳಿಹಾಕುವಂತಿಲ್ಲ.


Click it and Unblock the Notifications








