ಬಿಎಂಡಬ್ಲ್ಯುನಿಂದ ಎಲೆಕ್ಟ್ರಿಕ್ ಎಸ್‌ಯುವಿ ಬರುತ್ತಾ?

By Nagaraja

ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ಅಮೆರಿಕ ಮೂಲದ ಎಲೆಕ್ಟ್ರಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ಟೆಸ್ಲಾ ಮೋಟಾರ್ಸ್‌ಗೆ ಸೆಡ್ಡು ನೀಡಲು ಹೊರಟಿರುವ ಜರ್ಮನಿ ಮೂಲದ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, ಕ್ರೀಡಾ ಬಳಕೆಯ ವಿದ್ಯುತ್ ಚಾಲಿತ ವಾಹನವನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಮಾಡೆಲ್ ಎಕ್ಸ್ ಎಂಬುದು ಟೆಸ್ಲಾದ ಎಲೆಕ್ಟ್ರಿಕ್ ಎಸ್ ಯುವಿಯಾಗಿರಲಿದೆ. ಇದಕ್ಕೆ ಪ್ರತ್ಯುತ್ತರವಾಗಿ ಬಿಎಂಡಬ್ಲ್ಯು ಬ್ಯಾಟರಿ ಚಾಲಿತ ಎಸ್ ಯುವಿ ಕಣಕ್ಕಿಳಿಸುವ ಯೋಜನೆ ಹೊಂದಿದೆ.

ಬಿಎಂಡಬ್ಲ್ಯು

ಜರ್ಮನಿ ಮಾಧ್ಯಮಗಳ ವರದಿಗಳ ಪ್ರಕಾರ ಯೋಜನೆ ಅಂತಿಮ ಹಂತದಲ್ಲಿದ್ದು, ಬಿಎಂಡಬ್ಲ್ಯುವಿನಿಂದ ಸದ್ಯದಲ್ಲೇ ಅಮೆರಿಕದಲ್ಲಿ ಎಲೆಕ್ಟ್ರಿಕ್ ಎಸ್ ಯುವಿ ನಿರ್ಮಾಣವಾಗಲಿದೆ. ಇದಕ್ಕೆ ಸಂಬಂಧಪಟ್ಟಂತೆ ನಾರ್ತ್ ಕರೋಲಿನಾ ಘಟಕಕ್ಕೆ ಬರೋಬ್ಬರಿ 1.29 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲಾಗುವುದು.

ಬಿಎಂಡಬ್ಲ್ಯು ಆಡಳಿತ ಮಂಡಳಿಯಿಂದ ಈ ಬಗ್ಗೆ ಯಾವುದೇ ಸ್ಪಷ್ಟನೆ ದೊರಕಿಲ್ಲ. ಇನ್ನೊಂದೆಡೆ ಟೆಸ್ಲಾ ಮಾಡೆಲ್ ಎಕ್ಸ್ ಅತಿ ಶೀಘ್ರದಲ್ಲೇ ವಿತರಕರನ್ನು ತಲುಪಲಿದೆ.

ಏತನಧ್ಯೆ ಜರ್ಮನಿಯದ್ದೇ ಆಗಿರುವ ಆಡಿ ಸಂಸ್ಥೆಯು ಸಹ ಇದಕ್ಕೆ ಸಮಾನವಾದ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿದೆ ಎಂಬ ಬಗ್ಗೆ ವರದಿಗಳಿವೆ. ಆದರೆ ಎಲ್ಲವೂ ಗೌಪ್ಯವಾಗಿಟ್ಟುಕೊಳ್ಳುವ ಮೂಲಕ ಮಾರಾಟ ನೀತಿ ಅನುಸರಿಸಲಾಗುತ್ತಿದೆ.

Article Published On: Friday, June 12, 2015, 14:22 [IST]
English summary
Tesla has got the game going with the Model X, an electric SUV and the Germans might have an answer to that with an electric SUV of their own.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+