ಕೈಯಲ್ಲಿರುವ ವಾಚ್‌ನಿಂದಲೇ ಕಾರಿನ ನಿಯಂತ್ರಣ ಸಾಧಿಸಿ!

By Nagaraja

ನೀವೀಗ ನಿಮ್ಮ ಕೈಯಲ್ಲಿ ಕಟ್ಟಿರುವ ವಾಚ್‌ನಿಂದಲೇ ಕಾರಿನ ನಿಯಂತ್ರಣ ಸಾಧಿಸಬಹುದಾಗಿದೆ. ಎಲೆಕ್ಟ್ರಾನಿಕ್ ಉತ್ಪನ್ನಗಳ ದೈತ್ಯ ಆಪಲ್ ಸಹಯೋಗದಲ್ಲಿ ಇಂತಹದೊಂದು ನಾವೀನ್ಯತೆಯ ತಂತ್ರಜ್ಞಾನವನ್ನು ಜರ್ಮನಿಯ ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ಹೊರತಂದಿದೆ.

ಬಿಎಂಡಬ್ಲ್ಯು ಐ8 ಹಾಗೂ ಐ3 ಹೈಬ್ರಿಡ್ ಕಾರುಗಳಲ್ಲಿ ಇಂತಹದೊಂದು ತಂತ್ರಗಾರಿಕೆ ಕಂಡುಬಂದಿದೆ. ಇದಕ್ಕಾಗಿ ಮೊದಲ 'ಐ ರಿಮೋಟ್' ಎಂಬ ಕಾರು ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗಿದೆ. ಇದರಂತೆ ಆಪಲ್ ವಾಚ್‌ನಿಂದ ಐ3 ಎಲೆಕ್ಟ್ರಿಕ್ ಹಾಗೂ ಐ8 ಹೈಬ್ರಿಡ್ ಕಾರುಗಳ ನಿಯಂತ್ರಣ ಸಾಧಿಸಬಹುದಾಗಿದೆ.

bmw i apple watch

ಇತ್ತೀಚೆಗಷ್ಟೇ ಆಪಲ್ ಸಂಸ್ಥೆಯು ಹೊಸತಾದ ಆಪಲ್ ವಾಚ್ ಬಿಡುಗಡೆಗೊಳಿಸಿತ್ತು. ಇದರ ಬಲೆ 22,000 ರು.ಗಳಿಂದ ಆರಂಭವಾಗಿ ಗರಿಷ್ಠ 10 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ. ಇನ್ನು ಭಾರತದಲ್ಲಿ ಐ8 ಹೈಬ್ರಿಡ್ ಕಾರು ಮುಂಬೈ ಎಕ್ಸ್ ಶೋ ರೂಂ 2.29 ಕೋಟಿ ರು.ಗಳಷ್ಟು ದುಬಾರಿಯಾಗಿದೆ.

ಹೊಸ ಬಿಎಂಡಬ್ಲ್ಯು ಐ ರಿಮೋಟ್ ಕಾರು ಅಪ್ಲಿಕೇಷನ್ ಮಖಾಂತರ, ಹತ್ತಿರದ ಚಾರ್ಜಿಂಗ್ ಸ್ಟೇಷನ್, ವ್ಯಾಪ್ತಿ, ಬ್ಯಾಟರಿ ಮಟ್ಟವನ್ನು ಐಫೋನ್ ಅಥವಾ ಆಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗಳಲ್ಲಿ ನೋಡಬಹುದಾಗಿದೆ. ಅಷ್ಟೇ ಅಲ್ಲದೆ ಈ ಅಪ್ಲಿಕೇಷನ್ ಮೂಲಕ ಕಾರಿನ ಬಾಗಿಲು, ಗಾಜು ಹಾಗೂ ಢಿಕ್ಕಿ ಲಾಕ್ ಆಗಿದೆಯೇ ಎಂಬುದನ್ನು ಪರೀಶೀಲಿಸಬಹುದಾಗಿದೆ. ಇನ್ನು ಕಾರಿನ ಎಸಿಯ ಸಂಪೂರ್ಣ ನಿಯಂತ್ರಣ ಸಾಧಿಸಬಹುದಾಗಿದೆ.

ಇನ್ನೊಂದೆಡೆ ಆಪಲ್ ಸಂಸ್ಥೆಯು ಸಹ ಇದಕ್ಕೆ ಸಮಾನವಾದ 'ಕಾರ್ ಪ್ಲೇ' ಮಾಹಿತಿ ಮನರಂಜನಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಪ್ರಸಕ್ತ ಸಾಲಿನಲ್ಲೇ 40ಕ್ಕೂ ಹೆಚ್ಚು ಮಾದರಿಗಳಲ್ಲಿ ಆಳವಡಿಕೆಯಾಗಲಿದೆ. ನಿಸ್ಸಂಶಯವಾಗಿಯೂ ಈ ಪಟ್ಟಿಯಲ್ಲಿ ಬಿಎಂಡಬ್ಲ್ಯು ಸೇರಿರಲಿದೆ.

More from DriveSpark

Article Published On: Friday, March 13, 2015, 11:15 [IST]
English summary
BMW i3 and i8 to become the first cars to be compatible with Apple Watch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+