ಬಿಎಂಡಬ್ಲ್ಯು ಎಂ6 ಗ್ರ್ಯಾನ್ ಕೂಪೆ ಭಾರತದಲ್ಲಿ ಬಿಡುಗಡೆ
ಜರ್ಮನಿಯ ಪ್ರೀಮಿಯಂ ಕಾರು ಸಂಸ್ಥೆ ಬಿಎಂಡಬ್ಲ್ಯು ಅತಿ ನೂತನ ಎಂ6 ಗ್ರ್ಯಾನ್ ಕೂಪೆ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಕಂಪ್ಲೀಟ್ ಬಿಲ್ಟ್ ಅಪ್ (ಸಿಬಿಯು) ಮುಖಾಂತರ ಭಾರತವನ್ನು ತಲುಪಲಿದೆ.
ಬೆಲೆ ಮಾಹಿತಿ: 1.71 ಕೋಟಿ ರು. (ಎಕ್ಸ್ ಶೋ ರೂಂ ದೆಹಲಿ)
ನೂತನ ಬಿಎಂಡಬ್ಲ್ಯು ಎಂ6 ಗ್ರ್ಯಾನ್ ಕೂಪೆ ಮಾದರಿಯು ಎಂ ಟ್ವಿನ್ ಪವರ್ ಟರ್ಬೊ 8 ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 680 ಎನ್‌ಎಂ ತಿರುಗುಬಲದಲ್ಲಿ 560 ಅಶ್ವಶಕ್ತಿ ಉತ್ಪಾದಿಸಲಿದೆ.

ವೇಗವರ್ಧನೆ: 4.2 ಸೆಕೆಂಡುಗಳಲ್ಲೇ 0-100 ಕೀ.ಮೀ. ವೇಗವರ್ಧನೆ
ಗರಿಷ್ಠ ವೇಗ: ಗಂಟೆಗೆ 250 ಕೀ.ಮೀ.
ಒಂಬತ್ತು ಆಕರ್ಷಕ ಬಣ್ಣಗಳು
- ಆಲ್ಪೈನ್ ವೈಟ್,
- ಬ್ಲ್ಯಾಕ್ ಸಪೈರ್,
- ಸಿಲ್ವರ್ ಸ್ಟೋನ್,
- ಸ್ಪೇಸ್ ಗ್ರೇ,
- ಜಾಟೋಬಾ,
- ಸ್ಯಾನ್ ಮರೈನ್ ಬ್ಲೂ,
- ಸಖೀರ್ ಆರೆಂಜ್,
- ಸಿಂಗಾಪುರ ಗ್ರೇ,
- ಇಂಪಿರಿಯಲ್ ಬ್ಲೂ

ಹೊರಮೈ
- ಎಲ್‌ಇಡಿ ಹೆಡ್ ಲೈಟ್,
- ಡಬಲ್ ಬಾರ್ ಕಿಡ್ನಿ ಗ್ರಿಲ್,
- ಹಗುರ ಭಾರದ ಕಾರ್ಬನ್ ರೂಫ್
ಸುರಕ್ಷತೆ
- ಆರು ಏರ್ ಬ್ಯಾಗ್,
- ಆಕ್ಟಿವ್ ಎಂ ಡಿಫೆರೆನ್ಸಿಯಲ್,
- ಎಂ ಡೈನಾಮಿಕ್ ಡ್ಯಾಂಪರ್ ಕಂಟ್ರೋಲ್,
- ಎಂ ಡೈನಾಮಿಕ್ ಮೋಡ್,
- ಎಂ ಕೌಂಪಡ್ ಬ್ರೇಕ್,
- ಆಕ್ಟಿವ್ ಪ್ರೊಟೆಕ್ಷನ್ ಜೊತೆ ಆಟೆಕ್ಷನ್ ಅಸಿಸ್ಟ್ ಮತ್ತು ಆಕ್ಟಿವ್ ಹೆಡ್ ರೆಡ್ (ಮುಂಭಾಗ)



Click it and Unblock the Notifications