ಬಿಎಂಡಬ್ಲ್ಯು 1 ಸಿರೀಸ್ ಫೇಸ್ ಲಿಫ್ಟ್ ಭಾರತದಲ್ಲಿ ಬಿಡುಗಡೆ

Written By:

ಜರ್ಮನಿಯ ಮಗದೊಂದು ಐಷಾರಾಮಿ ವಾಹನ ತಯಾರಿಕ ಸಂಸ್ಥೆ ಬಿಎಂಡಬ್ಲ್ಯು, ತನ್ನ ಜನಪ್ರಿಯ ಮಾದರಿಗಳಲ್ಲಿ ಒಂದಾಗಿರುವ 1 ಸಿರೀಸ್ ಪರಿಷ್ಕೃತ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಬೆಲೆ ಮಾಹಿತಿ: 29.9 ಲಕ್ಷ ರು. (ಎಕ್ಸ್ ಶೋ ರೂಂ ಪುಣೆ)

ಬಿಎಂಡಬ್ಲ್ಯು 1 ಸಿರೀಸ್ ಫೇಸ್ ಲಿಫ್ಟ್ ಮಾದರಿಯು 118ಡಿ ಸ್ಪೋರ್ಟ್ ಲೈನ್ ವೆರಿಯಂಟ್ ನಲ್ಲಿ ಮಾತ್ರ ಲಭ್ಯವಾಗಲಿದೆ. ಪ್ರಸ್ತುತ ಕಾರು ಇದಕ್ಕೂ ಮೊದಲು 2015 ಜಿನೆವಾ ಮೋಟಾರು ಶೋದಲ್ಲಿ ಅನಾವರಣಗೊಂಡಿತ್ತು.

ಬಿಎಂಡಬ್ಲ್ಯು 1 ಸಿರೀಸ್

ಎಂಜಿನ್ ತಾಂತ್ರಿಕತೆ

 • 2.0 ಲೀಟರ್ ಫೋರ್ ಸಿಲಿಂಡರ್ ಎಂಜಿನ್,
 • 150 ಅಶ್ವಶಕ್ತಿ, 320 ಎನ್‍‌ಎಂ ತಿರುಗುಬಲ,
 • 8 ಸ್ಪೀಡ್ ಝಡ್ ಎಫ್ ಆಟೋಮ್ಯಾಟಿಕ್ ಗೇರ್ ಬಾಕ್ಸ್

ವೈಶಿಷ್ಟ್ಯಗಳು

 • ಬೈ-ಕ್ಸೆನಾನ್ ಹೆಡ್ ಲ್ಯಾಂಪ್,
 • ದೊಡ್ಡದಾದ ಗ್ರಿಲ್,
 • ಅಂದತೆ ವೃದ್ಧಿ
 • ಎಲ್ ಆಕಾರದ ಟೈಲ್ ಲ್ಯಾಂಪ್,
 • ಟ್ವಿನ್ ಎಕ್ಸಾಸ್ಟ್ ಕೊಳವೆ
ಬಿಎಂಡಬ್ಲ್ಯು 1 ಸಿರೀಸ್

ಒಳಮೈ

 • ಪರಿಷ್ಕೃತ ಹೋದಿಕೆ,
 • ಕ್ರೋಮ್ ಆವರಣ,
 • ಐಡ್ರೈವ್ ಕಂಟ್ರೋಲರ್,
 • ಮ್ಯಾಟ್ ಸಿಲ್ವರ್ ಆಸೆಂಟ್,
 • ಸ್ಟ್ಯಾಂಡರ್ಡ್ ಸಿಂಗಲ್ ಝೋನ್ ಆಟೋಮ್ಯಾಟಿಕ್ ಕಂಟ್ರೋಲ್,
 • ಡ್ಯುಯಲ್ ಝೋನ್ ಸಿಸ್ಟಂ (ಐಚ್ಛಿಕ).
 • 6.5 ಇಂಚುಗಳ ಡಿಸ್‌ಪ್ಲೇ
ಬಿಎಂಡಬ್ಲ್ಯು 1 ಸಿರೀಸ್

ಆಯಾಮ

 • 4329 ಎಂಎಂ ಉದ್ದ,
 • 1765 ಎಂಎಂ ಅಗಲ,
 • 1440 ಎಂಎಂ ಎತ್ತರ
English summary
BMW 1 Series Facelift launched in india

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark