18 ಚಕ್ರಗಳು, ಶೂನ್ಯ ಮಾಲಿನ್ಯ; ಇದುವೇ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಟ್ರಕ್

By Nagaraja

ಸುಸ್ಥಿರ ವಾಹಕದ ಜೊತೆ ಕೈಜೋಡಿಸಿಕೊಂಡಿರುವ ಜರ್ಮನಿಯ ಐಷಾರಾಮಿ ಸಂಸ್ಥೆಯಾಗಿರುವ ಬಿಎಂಡಬ್ಲ್ಯು, 40 ಟನ್ ಸಾಮರ್ಥ್ಯದ 18 ಚಕ್ರಗಳ ವಿದ್ಯುತ್ ಚಾಲಿತ ಟ್ರಕ್ ಪರಿಚಯಿಸಿದೆ.

ಶೂನ್ಯ ಮಾಲಿನ್ಯದ ಬಿಎಂಡಬ್ಲ್ಯು ನೂತನ ಟ್ರಕ್ ಸಂಪೂರ್ಣ ಪರಿಸರ ಸ್ನೇಹಿಯಾಗಿರಲಿದೆ. ದೈನಂದಿನ ಸರಕು ಸಾಗಾಣೆಯ ನಿಟ್ಟಿನಲ್ಲಿ ಬಿಎಂಡಬ್ಲ್ಯು ನೂತನ ಟ್ರಕ್ ಗಳು ಹೊಸ ಆಯಾಮವನ್ನು ನೀಡಲಿದೆ.

18 ಚಕ್ರಗಳು, ಶೂನ್ಯ ಮಾಲಿನ್ಯ; ಇದುವೇ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಟ್ರಕ್

ಹಾಲೆಂಡ್ ನ ವಾಹನ ತಯಾರಿಕ ಸಂಸ್ಥೆ ಟೆರಬರ್ಗ್ ಮತ್ತು ಜರ್ಮನಿಯ ಸರಕು ಸಂಸ್ಥೆ ಸ್ಕ್ರೀರ್ಮ್ ಸಂಸ್ಥೆಯ ಜೊತೆ ಸೇರಿಕೊಂಡು ಇದನ್ನು ಅಭಿವೃದ್ಧಿಪಡಿಸಲಾಗಿದೆ.

18 ಚಕ್ರಗಳು, ಶೂನ್ಯ ಮಾಲಿನ್ಯ; ಇದುವೇ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಟ್ರಕ್

ಅಲ್ಲದೆ ನಗರದ ಪ್ರದೇಶದ ಪರಿಸರ ಸ್ನೇಹಿ ಸರಕು ಸಾಗಾಣಿಕಾ ವಾಹನಗಳಿಗೆ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಟ್ರಕ್ ಗಳು ಹೊಸ ಆಯಾಮವನ್ನು ನೀಡಲಿದೆ ಎಂದು ಸಂಸ್ಥೆ ತಿಳಿಸಿದೆ.

18 ಚಕ್ರಗಳು, ಶೂನ್ಯ ಮಾಲಿನ್ಯ; ಇದುವೇ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಟ್ರಕ್

ಸಂಪೂರ್ಣವಾಗಿ ಚಾರ್ಜ್ ಮಾಡಿಸಿದ ಬಳಿಕ ಪ್ರಸ್ತುತ ಟ್ರಕ್ 62 ಮೈಲುಗಳಷ್ಟು ದೂರ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

18 ಚಕ್ರಗಳು, ಶೂನ್ಯ ಮಾಲಿನ್ಯ; ಇದುವೇ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಟ್ರಕ್

ಹಾಗೆಯೇ ಮೂರರಿಂದ ನಾಲ್ಕು ತಾಸಿನ ಅವಧಿಯಲ್ಲಿ ಸಂಪೂರ್ಣವಾಗಿ ರಿಚಾರ್ಜ್ ಮಾಡಿಸಬಹುದಾಗಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

18 ಚಕ್ರಗಳು, ಶೂನ್ಯ ಮಾಲಿನ್ಯ; ಇದುವೇ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಟ್ರಕ್

ಪ್ರಸ್ತುತ ತವರೂರು ಜರ್ಮನಿಗೆ ಎಂಟ್ರಿ ಕೊಟ್ಟಿರುವ ಬಿಎಂಡಬ್ಲ್ಯು ವಿದ್ಯುತ್ ಚಾಲಿತ ಟ್ರಕ್ ಗಳು ಜಾಗತಿಕ ಮಾರುಕಟ್ಟೆಗೂ ಎಂಟ್ರಿ ಕೊಡಲಿದೆ.

18 ಚಕ್ರಗಳು, ಶೂನ್ಯ ಮಾಲಿನ್ಯ; ಇದುವೇ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಟ್ರಕ್

ಇವೆಲ್ಲದರ ಮೂಲಕ ಐ8, ಐ3ಗಳಂತಹ ಹೈಬ್ರಿಡ್ ವಾಹನಗಳನ್ನು ಪರಿಚಯಿಸಿರುವ ಬಿಎಂಡಬ್ಲ್ಯು ನೂತನ ಟ್ರಕ್ ಮೂಲಕ ವಾಣಿಜ್ಯ ವಿಭಾಗದಲ್ಲೂ ಭವಿಷ್ಯದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.

Most Read Articles

Kannada
English summary
BMW premiers all-electric material transport truck in Germany
Story first published: Wednesday, July 15, 2015, 12:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X