ಸ್ಪರ್ಧಾತ್ಮಕ ಬೆಲೆ ಕಾಪಾಡಲು ಭಾರತದಿಂದಲೇ ಬಿಎಂಡಬ್ಲ್ಯು ಬಿಡಿಭಾಗ ಖರೀದಿ
ಐಷಾರಾಮಿ ಕಾರುಗಳ ಓಟದಲ್ಲಿ ಸ್ವಲ್ಪ ಹಿಂದೆ ಬಿದ್ದಿರುವ ಬಿಎಂಡಬ್ಲ್ಯು ಇಂಡಿಯಾ ತ್ವರಿತವಾಗಿ ಇದಕ್ಕೊಂದು ಉಪಾಯವನ್ನು ಕಂಡುಕೊಂಡಿದೆ. ಭಾರತದಿಂದಲೇ ಬಿಡಿಭಾಗಗಳನ್ನು ಖರೀದಿ ಮಾಡುವ ಮೂಲಕ ತನ್ನ ನೆಚ್ಚಿನ ಆವೃತ್ತಿಗಳ ಸ್ಪರ್ಧಾತ್ಮಕ ಬೆಲೆ ಕಾಯ್ದುಕೊಳ್ಳುವ ಇರಾದೆಯಲ್ಲಿದೆ.
ಜರ್ಮನಿಯ ಮೂಲದ ಬಿಎಂಡಬ್ಲ್ಯು ಸಂಸ್ಥೆಯು ಚೆನ್ನೈಯಲ್ಲಿರುವ ತನ್ನ ಘಟಕದಲ್ಲಿ ಸ್ಥಳೀಯವಾಗಿ ವಾಹನಗಳನ್ನು ನಿರ್ಮಾಣ ಮಾಡಲಿದೆ. ಇದರಂತೆ ಉಪಕರಣಗಳಿಗಾಗಿ ಏಳು ದೇಶೀಯ ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ಕಳೆದ ವರ್ಷ ಮಾರಾಟದಲ್ಲಿ ಸ್ವಲ್ಪ ಹಿಂದೆ ಬಿದ್ದಿರುವ ಬಿಎಂಡಬ್ಲ್ಯು 2015ನೇ ಸಾಲಿನಲ್ಲಿ ತನ್ನ ವೃದ್ಧಿ ದರವನ್ನು ಇಮ್ಮಡಿಗೊಳಿಸುವ ಇರಾದೆಯಲ್ಲಿದೆ. ಬಿಎಂಡಬ್ಲ್ಯು ಈಗ ಫೋರ್ಸ್ ಮೋಟಾರ್ಸ್, ಝಡ್‌ಎಫ್ ಹೀರೊ ಚಾಸೀ, ಡ್ರಾಕ್ಸ್‌ಮೇರ್ ಇಂಡಿಯಾ, ಟೆನೆಕೊ ಆಟೋಮೋಟಿವ್ ಇಂಡಿಯಾ, ವಾವೊ ಇಂಡಿಯಾ, ಮಹಲ್ ಬೆಹ್ರ್ ಮತ್ತು ಲೀರ್ ಇಂಡಿಯಾ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
ನಿರ್ಮಾಣ ಪ್ರಕ್ರಿಯೆಯನ್ನು ಹೆಚ್ಚೆಚ್ಚು ಸ್ಥಳೀಯವಾಗಿಸುವುದರರೊಂದಿಗೆ ಬೆಲೆಯಲ್ಲೂ ಗಣನೀಯ ಇಳಿಕೆ ಕಂಡುಬರುವ ಸಾಧ್ಯತೆಯಿದೆ. ಈ ಮೂಲಕ ಕೇಂದ್ರ ಸರಕಾರದ 'ಮೇಕ್ ಇನ್ ಇಂಡಿಯಾ' ಅಭಿಯಾನವನ್ನು ಪ್ರೋತ್ಸಾಹಿಸಲಿದೆ.
2012ನೇ ಸಾಲಿನಲ್ಲಿ 9,375 ಯುನಿಟ್‌ಗಳಿಷ್ಟಿದ್ದ ಬಿಎಂಡಬ್ಲ್ಯು ಮಾರಾಟವು 2014ರಲ್ಲಿ 6,812 ಯುನಿಟ್‌ಗಳಿಗೆ ಇಳಿಕೆಯಾಗಿತ್ತು. ಇನ್ನೊಂದೆಡೆ 2015ನೇ ಸಾಲಿನಲ್ಲಿ 15 ಹೊಸ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ.


Click it and Unblock the Notifications








