ಬಿಎಂಡಬ್ಲ್ಯುನಿಂದ ಐಷಾರಾಮಿ ಕ್ರೀಡಾ ಬಳಕೆಯ ಕಾರು ಬಿಡುಗಡೆ

Written By:

ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್, ಆಡಿಗಳಂತಹ ವಾಹನ ಸಂಸ್ಥೆಗಳಿಗೆ ಪ್ರತಿಸ್ಪರ್ಧಿಯಾಗಿ ಮುಂದೆ ಬಂದಿರುವ ಜರ್ಮನಿಯದ್ದೇ ಮೂಲದ ಬಿಎಂಡಬ್ಲ್ಯು ಸಂಸ್ಥೆಯು ದೇಶದಲ್ಲಿ ಅತಿ ನೂತನ ಎಕ್ಸ್3 ಎಂ ಸ್ಪೋರ್ಟ್ ಕಾರನ್ನು ಬಿಡುಗಡೆ ಮಾಡಿದೆ.

ಬೆಲೆ ಮಾಹಿತಿ: 59.90 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಬಿಎಂಡಬ್ಲ್ಯು ಹೊಸ ಮಾದರಿಯು ದೇಶದೆಲ್ಲೆಡೆ ಲಭ್ಯವಾಗಲಿದ್ದು, ಚೆನ್ನೈ ಘಟಕದಲ್ಲಿ ಸ್ಥಳೀಯವಾಗಿ ಜೋಡಣೆ ಮಾಡುವ ಮೂಲಕ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.

ಬಿಎಂಡಬ್ಲ್ಯು ಎಕ್ಸ್3 ಎಕ್ಸ್ ಡ್ರೈವ್ ಎಂ ಸ್ಪೋರ್ಟ್

ಎಂಜಿನ್ ತಾಂತ್ರಿಕತೆ

  • ಎಂಜಿನ್: 3.0 ಲೀಟರ್ ಇನ್ ಲೈನ್ ಸಿಕ್ಸ್ ಸಿಲಿಂಡರ್, ಟ್ವಿನ್ ಪವರ್ ಟರ್ಬೊ ಡೀಸೆಲ್
  • ಅಶ್ವಶಕ್ತಿ: 259
  • ತಿರುಗುಬಲ: 560 ಎನ್‌ಎಂ
  • ಗೇರ್ ಬಾಕ್ಸ್: 8 ಸ್ಪೀಡ್ ಸ್ಟೆವ್ ಟ್ರಾನಿಕ್ ಸ್ಪೋರ್ಟ್ ಆಟೋಮ್ಯಾಟಿಕ್
ಬಿಎಂಡಬ್ಲ್ಯು ಎಕ್ಸ್3 ಎಕ್ಸ್ ಡ್ರೈವ್ ಎಂ ಸ್ಪೋರ್ಟ್

ನೂತನ ಬಿಎಂಡಬ್ಲ್ಯು ಎಕ್ಸ್3 ಎಕ್ಸ್ ಡ್ರೈವ್30ಡಿ ಎಂ ಸ್ಪೋರ್ಟ್ ಕ್ರೀಡಾ ಬಳಕೆಯ ವಾಹನವು 5.9 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸಲಿದ್ದು, ಗಂಟೆಗೆ ಗರಿಷ್ಠ 232 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಇನ್ನು ಏರೋಡೈನಾಮಿಕ್ ಪ್ಯಾಕೇಜ್ ಹಾಗೂ ಆರು ವಿಶಿಷ್ಟ ಬಣ್ಣಗಳಲ್ಲಿ ಲಭ್ಯವಾಗಲಿದೆ. ವಾಹನ ಲೋಕದ ತಾಜಾ ಸುದ್ದಿಗಾಗಿ ಕನ್ನಡ ಡ್ರೈವ್ ಸ್ಪಾರ್ಕ್ ಫೇಸ್ ಬುಕ್ ಪುಟಕ್ಕೊಂದು ಲೈಕ್ ಒತ್ತಿರಿ.

English summary
The German manufacturer has locally produced the X3 M Sport variant at their Chennai facility and is available across the country. It is priced at INR 59,90,000 ex-showroom, Delhi.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark